
ಸಿಂದಗಿ : ವಕ್ಫ್ ಮಂಡಳಿಯು ಬಲವಂತವಾಗಿ ವಶಪಡಿಸಿಕೊಂಡಿದ್ದ ಸಿಂದಗಿ ಗುರುಬಸವ ವಿರಕ್ತ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಯ 1.30 ಎಕರೆ ಭೂಮಿಯನ್ನು 51 ವರ್ಷಗಳ ನಿರಂತರ ಹೋರಾಟದ ನಂತರ ಕೊನೆಗೂ ಮಠಕ್ಕೆ ಮರಳಿ ದೊರೆತಿದೆ. ಗುರುಬಸವ ವಿರಕ್ತ ಮಠ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ಗುರುಬಸವಪ್ಪ ಪಟ್ಟಣಶೆಟ್ಟಿ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ಈ ಆನಂದದ ಸುದ್ದಿಯನ್ನು ತಿಳಿಸಿದರು.
1. ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿ ಸರ್ವೇ ನಂ. 1020 ರಲ್ಲಿರುವ 1.28 ಎಕರೆ ವಿರಕ್ತ ಮಠದ ಭೂಮಿಯನ್ನು ಕಂದಾಯ ದಾಖಲೆಗಳಲ್ಲಿ (ಪಹಣಿ/ಆರ್.ಟಿ.ಸಿ.) ಕರ್ನಾಟಕ ಸುನ್ನಿ ವಕ್ಫ್ ಮಂಡಳಿಯ ಆಸ್ತಿ ಎಂದು ನಮೂದಿಸಲಾಗಿತ್ತು.
2. ಈ ಹಿಂದೆ ಮಠದ ಪೀಠಾಧಿಪತಿಗಳಾಗಿದ್ದ ಸಿದ್ಧಲಿಂಗಯ್ಯ ಸ್ವಾಮೀಜಿಗಳ ಕಾಲದಲ್ಲಿ ಪಹಣಿಯ 11ನೇ ಕಾಲಂ ಖಾಲಿಯಾಗಿತ್ತು; ಆದರೆ, 2018-2019 ರ ಅವಧಿಯಲ್ಲಿ ಈ ಭೂಮಿಯನ್ನು ‘ಕಬ್ರಸ್ತಾನ್ ವಕ್ಫ್ ಬೋರ್ಡ್’ ಎಂದು ಬದಲಾಯಿಸಲಾಗಿತ್ತು. ಇದು ಕಾನೂನುಬಾಹಿರವೆಂದು ತಿಳಿದ ಕೂಡಲೇ ಭಕ್ತರು ಅಂದಿನಿಂದ ಹೋರಾಟವನ್ನು ಆರಂಭಿಸಿದರು. ಈ ಕುರಿತು ಹಲವು ಬಾರಿ ಪ್ರತಿಭಟನೆಗಳನ್ನು ಸಹ ನಡೆಸಲಾಗಿತ್ತು.
3. ವಿರಕ್ತ ಮಠದ ಆಸ್ತಿಯನ್ನು ವಕ್ಫ್ ಬೋರ್ಡ್ ನಿಂದ ಮುಕ್ತಗೊಳಿಸಲು 11 ತಿಂಗಳ ಕಾಲ ವಾದ-ಪ್ರತಿವಾದಗಳು ನಡೆದವು ಮತ್ತು ಅಂತಿಮವಾಗಿ ಶ್ರೀ ಮಠದ ಆಸ್ತಿಯು ಮರಳಿ ಮಠಕ್ಕೆ ದೊರಕಿದೆ. ಈ ಆಸ್ತಿಗೂ ವಕ್ಫ್ ಬೋರ್ಡ್‌ಗೂ ಯಾವುದೇ ಸಂಬಂಧವಿಲ್ಲವೆಂದು ಮಾನ್ಯ ನ್ಯಾಯಾಲಯವು ಆದೇಶ ನೀಡಿದೆ.
4.ಸಿಂದಗಿ ಮಠವು ಕೇವಲ ಸಾಮಾನ್ಯ ಮಠವಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಮಠದ ಕೊಡುಗೆ ಅತ್ಯಂತ ದೊಡ್ಡದಾಗಿದೆ. ಸುತ್ತ-ಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಮಠವು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದೆ. ಬ್ಯಾಡಗಿಯ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳು ಮಠದ ಆಡಳಿತದ ಅಡಿಯಲ್ಲಿ ಬರುತ್ತವೆ. ಈ ಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿ ಇಂತಹ ಸಹಸ್ರಾರು ಎಕರೆ ಭೂಮಿಯನ್ನು ವಕ್ಫ್ ಮಂಡಳಿಯು ಕಾನೂನುಬಾಹಿರವಾಗಿ ವಶಪಡಿಸಿಕೊಂಡಿದೆ. ಅವುಗಳನ್ನು ಬಿಡಿಸಿಕೊಳ್ಳಲು ಇನ್ನೂ ಎಷ್ಟು ವರ್ಷಗಳ ಕಾಲ ಹೋರಾಟ ನಡೆಸಬೇಕಾಗುವುದೋ. ಈ ಪರಿಸ್ಥಿತಿಯನ್ನು ಗಮನಿಸಿದರೆ, ವಕ್ಫ್ ಮಂಡಳಿಯನ್ನು ವಿಸರ್ಜಿಸಿ, ಭೂಮಿಯನ್ನು ಸಂಬಂಧಪಟ್ಟವರಿಗೆ ಮರಳಿ ನೀಡುವುದು ಅತ್ಯವಶ್ಯಕವಾಗಿದೆ. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”