ಸೇನೆಯ ಸೌತ್-ವೆಸ್ಟರ್ನ್ ಕಮಾಂಡ್‌ನ ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರ ಹೇಳಿಕೆ

ಹಿಸಾರ್ (ಹರಿಯಾಣ) – ಒಂದುವೇಳೆ, ‘ಆಪರೇಷನ್ ಸಿಂಧೂರ್’ನಂತಹ ಯುದ್ಧವು ರಷ್ಯಾ ಮತ್ತು ಉಕ್ರೇನ್ ಯುದ್ಧದಂತೆ ದೀರ್ಘಕಾಲ ನಡೆದರೆ, ಈ ಅವಧಿಯಲ್ಲಿ ನಮಗೆ ಮಾಜಿ ಸೈನಿಕರ ಅಗತ್ಯ ಉಂಟಾಗಬಹುದು. ಒಂದು ವ್ಯವಸ್ಥೆಯ ಮೂಲಕ ಅವರನ್ನು ಮತ್ತೆ ದೇಶ ಸೇವೆಗೆ ತರಬಹುದು; ಏಕೆಂದರೆ ಅವರು ತರಬೇತಿ ಪಡೆದ ಮಾನವಶಕ್ತಿಯಾಗಿದ್ದಾರೆ. ಅವರಿಗೂ ದೇಶದಲ್ಲಿ ಮತ್ತೆ ನೌಕರಿ ಮಾಡುವ ಅವಕಾಶ ಸಿಗಬಹುದು ಎಂದು ಸೇನೆಯ ಸೌತ್-ವೆಸ್ಟರ್ನ್ ಕಮಾಂಡ್‌ನ ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು ಇಲ್ಲಿನ ಸೇನಾ ನೆಲೆಯಲ್ಲಿ ಮಾಜಿ ಸೈನಿಕರ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು ಮಾತು ಮುಂದುವರೆಸಿ, ‘ಆಪರೇಷನ್ ಸಿಂಧೂರ್’ ಸಮಯದಲ್ಲಿ, ನಮ್ಮ ಮೇಲೆ ಕಠಿಣ ಸಮಯ ಬಂದಿತ್ತು. ದೇಶದಲ್ಲಿ ಭಯೋತ್ಪಾದಕ ದಾಳಿಯಾಗಿತ್ತು ಮತ್ತು ಅದರ ನಂತರ ಇಡೀ ದೇಶವು ಸೇನೆಯ ಕಾರ್ಯಾಚರಣೆಯತ್ತ ನೋಡುತ್ತಿತ್ತು. ನಾವು ದೀರ್ಘಕಾಲದ ಯುದ್ಧಕ್ಕಾಗಿ ಸಿದ್ಧತೆ ಮಾಡುತ್ತಿದ್ದೆವು. ನಾವು ಮಾಜಿ ಸೈನಿಕರ ಪಟ್ಟಿಯನ್ನು ಸಿದ್ಧಪಡಿಸಿದ್ದೆವು; ಆದರೆ ನಾವು ನೋಡಿದಂತೆ, ಯುದ್ಧವು ಬಹಳ ಬೇಗನೆ ಮುಗಿಯಿತು. ೯೦ ಗಂಟೆಗಳಲ್ಲಿ ಶತ್ರುಗಳು ಮಂಡಿಯೂರಿದರು.
ಯುದ್ಧದ ವಿಧಾನ ಬದಲಾಗಿದೆ!
ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು ಮಾತು ಮುಂದುವರೆಸುತ್ತಾ, ಮೊದಲು ಯುದ್ಧವನ್ನು ಕೇವಲ ಸೈನ್ಯ ಮಾತ್ರ ಹೋರಾಡುತ್ತಿತ್ತು. ಮುಂದಿನ ದಿನಗಳಲ್ಲಿ ಯುದ್ಧದ ವಿಧಾನ ಬದಲಾಗುತ್ತಿದೆ. ಇದನ್ನು ‘ಸಂಪರ್ಕವಿಲ್ಲದ ಯುದ್ಧ’ ಮತ್ತು ‘ಸಂಪರ್ಕ ಯುದ್ಧ’ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸೈಬರ್ ದಾಳಿಗಳು ನಡೆಯುತ್ತಿವೆ; ಆದರೆ ಎಲ್ಲಿಂದ ನಡೆಯುತ್ತಿವೆ ಎಂಬುದು ತಿಳಿದಿಲ್ಲ. ಇಂದಿನ ಯುದ್ಧದಲ್ಲಿ ಇಡೀ ದೇಶವೇ ಭಾಗವಹಿಸುತ್ತದೆ. ನಾಗರಿಕ ಮತ್ತು ಸೇನಾ ಪಡೆಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಇದರ ಜವಾಬ್ದಾರಿ ನಾಗರಿಕ ಆಡಳಿತದ ಮೇಲಿರುತ್ತದೆ.
ಭಾರತೀಯ ಸೇನೆಯು ತನ್ನದೇ ಆದ ೨೦ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸಲಿದೆ!
ಲೆಫ್ಟಿನೆಂಟ್ ಜನರಲ್ ಮನ್ಜಿಂದರ್ ಸಿಂಗ್ ಅವರು, ದೇಶದಲ್ಲಿ ಸೇನೆಯು ತನ್ನದೇ ಆದ ೨೦ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸಲಿದೆ. ಇವುಗಳ ಸ್ಥಳಗಳು ಬೇರೆ ಬೇರೆಯಾಗಿರುತ್ತವೆ. ಇಲ್ಲಿ ಮಾಜಿ ಸೈನಿಕರು ಮತ್ತು ಸೇವೆ ಸಲ್ಲಿಸುತ್ತಿರುವ ಸೈನಿಕರು ಚಿಕಿತ್ಸೆ ಪಡೆಯಬಹುದು. ಈ ಸಂಬಂಧ ಒಂದು ಪ್ರಾಯೋಗಿಕ ಯೋಜನೆ ನಡೆಯುತ್ತಿದೆ. ೭೦ ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಾಜಿ ಸೈನಿಕರಿಗೆ ಮನೆಬಾಗಿಲಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಬ್ಲಾಕ್ ಮಟ್ಟದಲ್ಲಿ ಸ್ವಯಂಸೇವಕರನ್ನು ನೇಮಿಸಲಾಗುವುದು. ಸಂಪೂರ್ಣ ವ್ಯವಸ್ಥೆಯನ್ನು ‘ಸ್ಪರ್ಶ’ ಯೋಜನೆಯಡಿಯಲ್ಲಿ ಜೋಡಿಸಲಾಗುತ್ತಿದೆ, ಇದರಿಂದ ಸೈನಿಕರು ಒಂದೇ ಸ್ಥಳದಿಂದ ವೈದ್ಯಕೀಯ ಹಕ್ಕುಗಳನ್ನು ಸಲ್ಲಿಸಬಹುದು.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ