ಅಲ್ಪಸಂಖ್ಯಾತ ಶಾಲೆಗಳ ಅನಿಯಂತ್ರಿತ ಶುಲ್ಕ ಹೆಚ್ಚಳವನ್ನು ನಿಯಂತ್ರಣಕ್ಕೆ ತಂದ ಆಸ್ಸಾಂ ಸರಕಾರದ ವಿಧೇಯಕದ ವಿರುದ್ಧ ಕ್ರೈಸ್ತ ಶಾಲೆಗಳ ರಂಪಾಟ

ಗೌಹತ್ತಿ(ಆಸ್ಸಾಂ) – ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಖಾಸಗಿ ಶಾಲೆಗಳಲ್ಲಿನ ಅನಿಯಂತ್ರಿತ ಶುಲ್ಕ ಹೆಚ್ಚಳವನ್ನು ತಡೆಯಲು ಆಸ್ಸಾಂ ಸರಕಾರವು ಇತ್ತೀಚೆಗೆ ಶುಲ್ಕ ವಿಧಿಸುವಿಕೆಯನ್ನು ನಿಯಂತ್ರಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಇದನ್ನು ‘ಆಸ್ಸಾಂ ಖಾಸಗಿ ಶೈಕ್ಷಣಿಕ ಸಂಸ್ಥೆಗಳು (ಶುಲ್ಕ ನಿಯಂತ್ರಣ) (ತಿದ್ದುಪಡಿ) ವಿಧೇಯಕ, 2025’ ಎಂದು ಹೆಸರಿಸಲಾಗಿದೆ. ಇದರ ಮೂಲಕ ಸರಕಾರವು ಶೈಕ್ಷಣಿಕ ಸಮಾನತೆಯನ್ನು ಉತ್ತೇಜಿಸುವ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿದೆ. ಆದರೆ, ಕ್ರೈಸ್ತ ಸಮುದಾಯವು ಇದನ್ನು ತೀವ್ರವಾಗಿ ವಿರೋಧಿಸಿದೆ. ರಾಜ್ಯದ ಅತ್ಯುನ್ನತ ಕ್ರೈಸ್ತ ಸಂಸ್ಥೆಯಾದ ‘ಆಸ್ಸಾಂ ಕ್ರಿಶ್ಚಿಯನ್ ಫೋರಂ’ ಸಂಸ್ಥೆಯು, ನವೆಂಬರ್ 25 ರಂದು ತಾವು ಬಾಧಿತರಾಗಿರುವಂತೆ ನಟಿಸುತ್ತಾ, ಈ ವಿಧೇಯಕದಿಂದ ತಮಗೆ ‘ನೋವು ಮತ್ತು ಭಯ’ ಉಂಟಾಗಿದೆ. ಪ್ರಸ್ತಾವಿತ ವಿಧೇಯಕವು ಅಲ್ಪಸಂಖ್ಯಾತ ಶಾಲೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವಿಧಾನವನ್ನು ಕೊನೆಗೊಳಿಸುತ್ತದೆ. ಇದರೊಂದಿಗೆ, ಸರಕಾರಕ್ಕೆ ತಮ್ಮ ಶಾಲೆಗಳ ಶುಲ್ಕವನ್ನು ನಿಗದಿಪಡಿಸಲು, ವಸೂಲಾತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತನ್ನ ಇಚ್ಛೆಗೆ ಅನುಗುಣವಾಗಿ ಹಸ್ತಕ್ಷೇಪ ಮಾಡಲು ವ್ಯಾಪಕ ಅಧಿಕಾರ ನೀಡುತ್ತದೆ ಎಂದು ಹೇಳಿದೆ.

ಕ್ರೈಸ್ತ ಸಂಸ್ಥೆಯು, ಸಂಸ್ಥೆಗೆ ಸಮಂಜಸವಾದ ಶುಲ್ಕವನ್ನು ನಿಗದಿಪಡಿಸುವ ಸಾಮರ್ಥ್ಯವಿಲ್ಲದಿದ್ದರೆ, ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಶಾಲೆಗಳಿಗೆ ಶಿಕ್ಷಕರ ವೇತನ ನೀಡುವುದು, ಸೌಲಭ್ಯಗಳನ್ನು ನಿರ್ವಹಿಸುವುದು ಅಥವಾ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಕಷ್ಟವಾಗಬಹುದು.
ಈ ಶಾಲೆಗಳಲ್ಲಿ ಕಲಿಯುವ ಅನೇಕ ವಿದ್ಯಾರ್ಥಿಗಳು ಬುಡಕಟ್ಟು ಮತ್ತು ದೂರದ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ ಎಂದು ಹೇಳಿದೆ. (ಬೌದ್ಧಿಕವಾಗಿ ದಿವಾಳಿಯಾಗಿರುವ ಕ್ರೈಸ್ತ ಸಂಸ್ಥೆ! ಒಂದು ಕಡೆ ಬಹುಪಾಲು ವಿದ್ಯಾರ್ಥಿಗಳು ಬುಡಕಟ್ಟು ಪ್ರದೇಶದವರು ಎಂದು ಹೇಳುವುದು ಮತ್ತು ಇನ್ನೊಂದು ಕಡೆ ಅವರಿಂದಲೇ ಹೆಚ್ಚು ಹಣ ವಸೂಲಿ ಮಾಡುವುದು, ಇದಕ್ಕಿಂತ ದೊಡ್ಡ ಹಾಸ್ಯ ಯಾವುದು? – ಸಂಪಾದಕರು)
5 ಅಂಶಗಳಲ್ಲಿ ವಿಧೇಯಕದ ಮಹತ್ವ!
1. ಆಸ್ಸಾಂನಲ್ಲಿ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ 200 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇದುವರೆಗೆ ಶುಲ್ಕ ನಿಯಂತ್ರಣದಿಂದ ವಿನಾಯಿತಿ ಇತ್ತು. ಈ ವಿಧೇಯಕವು ಈಗ ಈ ಶಾಲೆಗಳನ್ನು ಕಡ್ಡಾಯ ಶುಲ್ಕ ನಿಯಂತ್ರಣ ಚೌಕಟ್ಟಿಗೆ ತರಲು ಪ್ರಯತ್ನಿಸುತ್ತದೆ.
2. 126 ಸದಸ್ಯರ ಆಸ್ಸಾಂ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಣ ಸಚಿವ ರಣೋಜ್ ಪೆಗು ಅವರು ಈ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಅವರು ಮಾತನಾಡುತ್ತಾ, ಭಾರತೀಯ ಸಂವಿಧಾನದ ಕಲಂ 30(1) ರ ಅಡಿಯಲ್ಲಿ ಸ್ಥಾಪನೆಯಾದ ಅಲ್ಪಸಂಖ್ಯಾತ ಸಂಸ್ಥೆಗಳು ‘ಶುಲ್ಕ ನಿರ್ಧಾರ ಪ್ರಮಾಣಪತ್ರ’ವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಅನುಚಿತವಾಗಿ ವಾರ್ಷಿಕ ಶುಲ್ಕದಲ್ಲಿ ಹೆಚ್ಚಳವಾಗಬಹುದು. ನಮ್ಮ ಹೊಸ ವಿಧೇಯಕವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ‘ಪಕ್ಷಪಾತವಿಲ್ಲದ ಮತ್ತು ನ್ಯಾಯಯುತ’ ವೆಚ್ಚವನ್ನು ಖಚಿತಪಡಿಸುತ್ತದೆ.
3. ವಿಧೇಯಕದ ನಿಯಮಗಳ ಪ್ರಕಾರ, ಕಲಂ 30(1) ರ ಅಡಿಯಲ್ಲಿನ ಅಲ್ಪಸಂಖ್ಯಾತ ಶಾಲೆಗಳು ಸೇರಿದಂತೆ ಎಲ್ಲಾ ಸರಕಾರೇತರ ಸಂಸ್ಥೆಗಳಿಗೆ ಕಡ್ಡಾಯ ನೋಂದಣಿ, ಶುಲ್ಕ ಅನುಮೋದನೆ ಮತ್ತು ನಿಯತಕಾಲಿಕ ನವೀಕರಣವನ್ನು ಸ್ಥಾಪಿಸಲಾಗಿದೆ. ಇದು ಶುಲ್ಕದ ಮೇಲ್ವಿಚಾರಣೆಗಾಗಿ ಒಂದು ವ್ಯವಸ್ಥೆಯನ್ನು ರೂಪಿಸುತ್ತದೆ ಮತ್ತು ಎಲ್ಲಾ ಖಾಸಗಿ ಶಾಲೆಗಳನ್ನು ಒಂದೇ ನಿಯಂತ್ರಕ ಪ್ರಕ್ರಿಯೆಯ ಅಡಿಯಲ್ಲಿ ತರುತ್ತದೆ.
4 ವಿಧೇಯಕದ ಪ್ರಮುಖ ನಿಯಮಗಳಲ್ಲಿ ಒಂದಾದ ಗ್ರಾಮೀಣ ಪಂಚಾಯತ್ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಪ್ರವೇಶ ಶುಲ್ಕದ ಮೇಲೆ ಶೇ.25ರಷ್ಟು ರಿಯಾಯಿತಿ ನೀಡುವ ಅವಶ್ಯಕತೆಯಿದೆ.
5. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ಮಾತನಾಡುತ್ತಾ, ಆಸ್ಸಾಂ ಸರಕಾರವು ಈಗ ಅಲ್ಪಸಂಖ್ಯಾತರಿಂದ ನಡೆಸಲ್ಪಡುವ ಖಾಸಗಿ ಶಾಲೆಗಳನ್ನು ಸಹ ಸರಕಾರಿ ನಿಯಂತ್ರಣದಡಿಯಲ್ಲಿ ತರಲಿದೆ. ಖಾಸಗಿ ಶಿಕ್ಷಣದಲ್ಲಿ ‘ಸಮಾನತೆ ಮತ್ತು ಹೊಣೆಗಾರಿಕೆ’ ಯ ಕಡೆಗೆ ಇದು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!