ನಾಸಿಕ್-ತ್ರಯಂಬಕೇಶ್ವರ ಕುಂಭಮೇಳದ ಲಾಂಛನಕ್ಕಾಗಿ ಸ್ಪರ್ಧೆ ಆಯೋಜನೆ!

೩ ಲಕ್ಷ ಪ್ರಥಮ ಬಹುಮಾನಕ್ಕೆ !

ನಾಸಿಕ್ – ೨೦೨೭ ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳದ ನಿಮಿತ್ತ ‘ನಾಸಿಕ್-ತ್ರಯಂಬಕೇಶ್ವರ ಕುಂಭಮೇಳ ಅಭಿವೃದ್ಧಿ ಪ್ರಾಧಿಕಾರ’ದ ವತಿಯಿಂದ ಲಾಂಛನ ವಿನ್ಯಾಸ (ಲೋಗೋ ವಿನ್ಯಾಸ) ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಕ್ರಮವಾಗಿ ₹ ೩ ಲಕ್ಷ, ₹ ೨ ಲಕ್ಷ ಮತ್ತು ₹ ೧ ಲಕ್ಷ ಬಹುಮಾನಗಳೊಂದಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಈ ಸ್ಪರ್ಧೆಗಾಗಿ ಡಿಸೆಂಬರ್ ೨೦, ೨೦೨೫ ರವರೆಗೆ ಪ್ರವೇಶಗಳನ್ನು ಕಳುಹಿಸಬಹುದಾಗಿದೆ. ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ವಿಭಾಗೀಯ ಆಯುಕ್ತರು ಮತ್ತು ನಾಸಿಕ್ ತ್ರಯಂಬಕೇಶ್ವರ ಕುಂಭಮೇಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪ್ರವೀಣ್ ಗೆಡಾಂ ಅವರು ಕರೆ ನೀಡಿದ್ದಾರೆ.

ಹೊಸ ಲಾಂಛನದ ಗುರುತು ಹಿಂದಿನ ಆವೃತ್ತಿಗಳ ಪರಂಪರೆಯನ್ನು ಆಧರಿಸಿರುತ್ತದೆ. ಭಕ್ತಿ ಮತ್ತು ಏಕತೆಯ ಶಾಶ್ವತ ಭಾವನೆಯನ್ನು ಸಾಕಾರಗೊಳಿಸುವ ಲಾಂಛನ ಬೇಕಾಗಿದೆ. ಲಾಂಛನವು ಆಧುನಿಕ, ಸಂದರ್ಭೋಚಿತ ಮತ್ತು ಭಾರತ ಹಾಗೂ ಜಗತ್ತಿನಾದ್ಯಂತದ ವಿವಿಧ ಪ್ರೇಕ್ಷಕರಿಗೆ ಆಕರ್ಷಕವಾಗಿರಬೇಕು. ಲಾಂಛನವು ಸ್ಮರಣೀಯವಾಗಿರಬೇಕು. ಈ ಲಾಂಛನವು ನಾಸಿಕ್-ತ್ರಯಂಬಕೇಶ್ವರದ ಆಧ್ಯಾತ್ಮಿಕ ಸಾರ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರಬೇಕು ಎಂದು ಸೂಚನೆಗಳನ್ನು ನೀಡಲಾಗಿದೆ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ, ಆಸಕ್ತರು www.mygov.in ಅಥವಾ [email protected] ಈ ಇ-ಮೇಲ್ ಐಡಿಗೆ ಸಂಪರ್ಕಿಸಬಹುದು.