|

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಹೋರಾಟಕ್ಕೆ ನವೆಂಬರ್ 25 ರಂದು ದೊಡ್ಡ ಯಶಸ್ಸು ಸಿಕ್ಕಿದೆ. ಈ ದಿನ 28 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದವರಲ್ಲಿ 19 ಮಹಿಳೆಯರು ಕೂಡ ಸೇರಿದ್ದಾರೆ. ಈ 28 ನಕ್ಸಲರ ಪೈಕಿ 22 ಜನರ ಮೇಲೆ ಒಟ್ಟು 89 ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಲಾಗಿತ್ತು. ನಕ್ಸಲರ ‘ದಂಡಕಾರಣ್ಯ ವಿಶೇಷ ವಿಭಾಗೀಯ ಸಮಿತಿ’ಯ ಈ ಸದಸ್ಯರು ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಬಸ್ತರ್ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಸುಂದರರಾಜ್ ಪಟ್ಟಲಿಂಗಂ ತಿಳಿಸಿದ್ದಾರೆ.
ಸರಕಾರಿ ಉಪಕ್ರಮಗಳಿಂದ ಪ್ರಭಾವಿತರಾದ ಮಾವೋವಾದಿ ಸಂಘಟನೆ!
ನಕ್ಸಲರು ರಾಜ್ಯ ಸರಕಾರದ ‘ನಿಯಾದ್ ನೆಲ್ಲನಾರ್ ಯೋಜನೆ’ ಮತ್ತು ‘ಪೂನಾ ಮರಘಮ್’ ಎಂಬ ಸಾಮಾಜಿಕ ಪುನರ್ವಸತಿ ಕಾರ್ಯಕ್ರಮಗಳಿಂದ ಪ್ರಭಾವಿತರಾಗಿದ್ದಾರೆ. ‘ನಿಯಾದ್ ನೆಲ್ಲನಾರ್’ ಈ ಯೋಜನೆಯನ್ನು ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಜಾರಿಗೆ ತರಲಾಗಿದೆ, ಆದರೆ ‘ಪೂನಾ ಮರಘಮ್’ ಇದು ಬಸ್ತರ್ ಪೊಲೀಸರ ಪುನರ್ವಸತಿ ಉಪಕ್ರಮವಾಗಿದೆ ಎಂದು ಪೊಲೀಸ್ ಮಹಾ ನಿರೀಕ್ಷಕರು ವಿವರಿಸಿದ್ದಾರೆ. ಶರಣಾದ ನಕ್ಸಲರಲ್ಲಿ ಪಂಡಿ ಧ್ರುವ ಅಲಿಯಾಸ್ ದಿನೇಶ್ (33 ವರ್ಷ), ದುಲೆ ಮಂಡಾವಿ ಅಲಿಯಾಸ್ ಮುನ್ನಿ (26 ವರ್ಷ), ಛತ್ತೀಸ್ ಪೊಯಂ (18 ವರ್ಷ) ಮತ್ತು ಪದ್ನಿ ಓಯಂ (30 ವರ್ಷ) ಎಂಬ 4 ಕಟ್ಟರ್ ನಕ್ಸಲರು ಸೇರಿದ್ದಾರೆ.
ಈ ವರ್ಷ ಇಲ್ಲಿಯವರೆಗೆ ಜಿಲ್ಲೆಯ 287 ಮಾವೋವಾದಿಗಳು ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ನಾರಾಯಣಪುರದ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ತಿಳಿಸಿದ್ದಾರೆ. ಮಾವೋವಾದಿ ಸಿದ್ಧಾಂತದ ಅಂತ್ಯವು ಹತ್ತಿರ ಬಂದಿದೆ ಎಂದು ಅವರು ವರ್ಣಿಸಿದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !