ವಿಶ್ವ ಹಿಂದೂ ಪರಿಷತ ಮತ್ತು ಬಜರಂಗ ದಳ ಬೆಂಬೆತ್ತುವಿಕೆಯ ಪ್ರಯತ್ನದ ಫಲ

ನವೀ ಮುಂಬಯಿ, ನವೆಂಬರ್ 23 (ವರದಿ) – ತುರ್ಬೆ ನಾಕಾ ಪ್ರದೇಶದಲ್ಲಿರುವ ಅನಧಿಕೃತ ಮಸೀದಿಯ ಧ್ವನಿವರ್ಧಕಗಳ ಮೇಲೆ ತುರ್ಬೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಕ್ರಮಕ್ಕಾಗಿ ವಿಶ್ವ ಹಿಂದೂ ಪರಿಷತ ಮತ್ತು ಬಜರಂಗ ದಳದ ಕಾರ್ಯಕರ್ತರು ಬೆಂಬೆತ್ತುವಿಕೆ ಮಾಡಿದ್ದರು. ಬಜರಂಗ ದಳದ ಜಿಲ್ಲಾ ಸಂಘಟಕ ತೇಜಸ ಪಾಟೀಲ ಅವರ ದೂರಿನ ನಂತರ, ತುರ್ಬೆ ಪೊಲೀಸರು ‘ದಾರೂ ಸಲಾಮ್’ ಎಂಬ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
1. ತುರ್ಬೆ ನಾಕಾ ಪ್ರದೇಶದಲ್ಲಿ ‘ದಾರೂ ಸಲಾಮ್’ ಎಂಬ ಅನಧಿಕೃತ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಮಸೀದಿಯ ಮೇಲೆ ಅಳವಡಿಸಲಾದ ಧ್ವನಿವರ್ಧಕಗಳಿಂದಾಗಿ ಸ್ಥಳೀಯ ನಾಗರಿಕರು ತೀವ್ರ ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದರು. ಧ್ವನಿವರ್ಧಕಗಳು ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ದಿನಕ್ಕೆ 5 ಬಾರಿ ಮೊಳಗುತ್ತಿದ್ದವು. ಈ ಪ್ರದೇಶವು ದಟ್ಟ ಜನವಸತಿಯಿಂದ ಕೂಡಿದ್ದು, ಇಲ್ಲಿ ಅನೇಕ ಹಿರಿಯ ನಾಗರಿಕರು ವಾಸಿಸುತ್ತಿದ್ದಾರೆ. ಅಲ್ಲದೆ, ಹತ್ತಿರದಲ್ಲಿ ಆಸ್ಪತ್ರೆಗಳಿರುವುದರಿಂದ ರೋಗಿಗಳಿಗೂ ಈ ಧ್ವನಿಮಾಲಿನ್ಯದಿಂದ ದೊಡ್ಡ ತೊಂದರೆಯಾಗುತ್ತಿತ್ತು.
2. ಈ ಸಮಸ್ಯೆಯ ವಿರುದ್ಧ ನವೀ ಮುಂಬಯಿ ಘಟಕದ ವಿಶ್ವ ಹಿಂದೂ ಪರಿಷತ್ ಅಡಿಯಲ್ಲಿರುವ ಬಜರಂಗ ದಳ ವತಿಯಿಂದ ತುರ್ಬೆ ಪೊಲೀಸ್ ಠಾಣೆಗೆ ಮೇಲಿಂದ ಮೇಲೆ ದೂರುಗಳನ್ನು ಸಲ್ಲಿಸಲಾಗಿತ್ತು.
3. ಕಳೆದ ಹಲವಾರು ತಿಂಗಳಿಂದ ಕಾರ್ಯಕರ್ತರು ನಿರಂತರವಾಗಿ ಬೆಂಬತ್ತುವಿಕೆ ಮಾಡುತ್ತಿದ್ದರು.
4. ಪೊಲೀಸರಿಂದ ಈ ಕ್ರಮಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಪತ್ರವೂ ಸ್ವೀಕೃತವಾಗಿದೆ. ಈ ಕ್ರಮದಿಂದಾಗಿ ಪ್ರದೇಶದಲ್ಲಿನ ಧ್ವನಿಮಾಲಿನ್ಯದ ತೊಂದರೆ ಕಡಿಮೆಯಾಗಲಿದ್ದು, ಸ್ಥಳೀಯ ನಾಗರಿಕರು ಮತ್ತು ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸಂಪಾದಕೀಯ ನಿಲುವುಮುಂಬಯಿ ಉಚ್ಚ ನ್ಯಾಯಾಲಯವು ಅನಧಿಕೃತ ಪ್ರಾರ್ಥನಾ ಸ್ಥಳಗಳ ಧ್ವನಿವರ್ಧಕಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದರೂ, ಸ್ವತಃ ಕ್ರಮ ಕೈಗೊಳ್ಳದ ನಿಷ್ಕ್ರಿಯ ಪೊಲೀಸ್ ಆಡಳಿತ! ಹಿಂದುತ್ವನಿಷ್ಠ ಸಂಘಟನೆಗಳು ಈ ಬಗ್ಗೆ ಬೆಂಬೆತ್ತುವಿಕೆ ಮಾಡಬೇಕಾಗುವುದು ಪೊಲೀಸ್ ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !