Dubai AirShow Accident : ದುಬಯಿ ಏರ್ ಶೋನಲ್ಲಿ ಭಾರತದ ಸ್ವದೇಶಿ ನಿರ್ಮಿತ ತೇಜಸ್ ಫೈಟರ್ ಜೆಟ್ ಅಪಘಾತ

ದುಬಯಿ – ಇಲ್ಲಿ ನಡೆದ ‘ಏರ್ ಶೋ’ನಲ್ಲಿ (ಆಕಾಶದಲ್ಲಿ ವಿಮಾನಗಳಿಂದ ಮಾಡಲಾಗುವ ಸಾಹಸ ಕಸರತ್ತುಗಳು) ಭಾರತದ ಸ್ವದೇಶಿ ನಿರ್ಮಿತ ‘ತೇಜಸ್’ ಫೈಟರ್ ಜೆಟ್ ಪತನಗೊಂಡಿದೆ. ಅಪಘಾತದಲ್ಲಿ ವಿಮಾನದ ಪೈಲಟ್ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆಯು ಅಧಿಕೃತ ಮಾಹಿತಿ ನೀಡಿದೆ. ವೈಮಾನಿಕ ಕಸರತ್ತುಗಳನ್ನು (ಏರೋಬ್ಯಾಟಿಕ್ಸ್) ಪ್ರದರ್ಶಿಸುತ್ತಿದ್ದಾಗ ಈ ವಿಮಾನವು ಪತನಗೊಂಡಿದೆ. ಈ ಸಮಯದಲ್ಲಿ ಏರ್ ಶೋ ನೋಡಲು ಅಪಾರ ಸಂಖ್ಯೆಯ ಜನಸಮೂಹ ಸೇರಿತ್ತು.

ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ, ಏರ್ ಶೋ ನಡೆಯುತ್ತಿದ್ದಾಗ, ತೇಜಸ್ ಫೈಟರ್ ಜೆಟ್ ಪತನಗೊಂಡಿತು. ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಮಾನವನ್ನು ಸರಕಾರಿ ಸ್ವಾಮ್ಯದ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (HAL) ಸಂಸ್ಥೆಯು ನಿರ್ಮಿಸಿದೆ.