
ನವ ದೆಹಲಿ – ಇಲ್ಲಿ ಡಿಸೆಂಬರ್ 13 ಮತ್ತು 14 ರಂದು ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ದೇಶದ ಹೆಸರಾಂತ ಚಿಂತಕರು, ತಜ್ಞರು ಮತ್ತು ರಾಷ್ಟ್ರನಿಷ್ಠ ವ್ಯಕ್ತಿಗಳು ಒಗ್ಗೂಡಿ ರಾಷ್ಟ್ರಹಿತದ ಪ್ರಮುಖ ವಿಷಯಗಳ ಕುರಿತು ಚಿಂತನ-ಮಂಥನ ನಡೆಸಲಿದ್ದಾರೆ. ಆದ್ದರಿಂದ, ಈ ಮಹೋತ್ಸವವು ರಾಷ್ಟ್ರದ ಉನ್ನತಿಗಾಗಿ ನಿರ್ದಿಷ್ಟ ದಿಕ್ಕು, ವಿಚಾರ ಮತ್ತು ಪರಿಹಾರಗಳಿಗಾಗಿ ವೇದಿಕೆಯಾಗಲಿದೆ ಎಂದು ಬ್ರಿಗೇಡಿಯರ್ ಸಂಜಯ ಅಗರ್ವಾಲ್ (ನಿವೃತ್ತ) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಹೋತ್ಸವದ ಕುರಿತು ಬ್ರಿಗೇಡಿಯರ್ ಸಂಜಯ್ ಅಗರ್ವಾಲ್ (ನಿವೃತ್ತ) ಅವರು ಮಾತನಾಡುತ್ತಾ, “ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ರಾಷ್ಟ್ರ ನಿರ್ಮಾಣದ ಸಂಕಲ್ಪಕ್ಕೆ ಸಮರ್ಪಿತವಾದ ಮತ್ತು ಭಾರತ ಭೂಮಿಯ ಬಲವಾದ ಅಡಿಪಾಯಕ್ಕೆ ಶಕ್ತಿ ನೀಡುವ ಒಂದು ಐತಿಹಾಸಿಕ ಸಮಾರಂಭವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಭವಾನಿ ಕತ್ತಿ ಮತ್ತು ಅವರ ಕಾಲದ ಅಪರೂಪದ ವಿವಿಧ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನವು ಈ ಮಹೋತ್ಸವದ ವಿಶೇಷತೆಯಾಗಿದೆ. ಈ ಪ್ರದರ್ಶನವು ಭಾರತೀಯ ಶೌರ್ಯ ಪರಂಪರೆಯ ಜೀವಂತ ಪ್ರತೀಕವಾಗಲಿದೆ,” ಎಂದು ಹೇಳಿದರು.
Sanatan Rashtra Shankhnad Mahotsav, to be held on 13–14 December 2025 at Bharat Mandapam, New Delhi, is a significant event dedicated to nation-building and strengthening the foundation of our country. A special highlight of the Mahotsav will be the display of Chhatrapati Shivaji… pic.twitter.com/jAF2g6yeCz
— Sanatan Sanstha (@SanatanSanstha) November 8, 2025
ಸನಾತನ ಸಂಸ್ಥೆಯ ವತಿಯಿಂದ ಡಿಸೆಂಬರ್ 13 ಮತ್ತು 14 ರಂದು ‘ಭಾರತ ಮಂಟಪಂ’ನಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ರಾಷ್ಟ್ರ ಮತ್ತು ಧರ್ಮ ಕಾರ್ಯವನ್ನು ಕರ್ತವ್ಯ ಭಾವನೆಯಿಂದ ಮಾಡುವ ವಿವಿಧ ಕ್ಷೇತ್ರಗಳ ಮಹನೀಯರು ಈ ಮಹೋತ್ಸವದಲ್ಲಿ ಉಪಸ್ಥಿತರಿರಲಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ