|

ಭೋಪಾಲ್ (ಮಧ್ಯಪ್ರದೇಶ) – ‘ಹಕ್’ (Haq) ಹಿಂದಿ ಚಲನಚಿತ್ರದ ಪ್ರದರ್ಶನಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ ನೀಡಿದೆ. ಈ ಚಲನಚಿತ್ರದ ಪ್ರದರ್ಶನವನ್ನು ತಕ್ಷಣ ನಿಷೇಧಿಸಬೇಕೆಂದು ಕೋರಿ ಶಹಬಾನೋ ಅವರ ಮಗಳು ಸಿದ್ದಿಕಾ ಬೇಗಂ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಚಲನಚಿತ್ರವು ನವೆಂಬರ್ ೭, ೨೦೨೫ ರಂದು ಬಿಡುಗಡೆಯಾಗಬೇಕಿತ್ತು. ನವೆಂಬರ್ ೬, ೨೦೨೫ ರಂದು ತೀರ್ಪು ನೀಡಿದ ಹೈಕೋರ್ಟ್, ಈ ಚಲನಚಿತ್ರವು ಯಾರ ವೈಯಕ್ತಿಕ ಗೌಪ್ಯತೆಯನ್ನೂ ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.
🎬 Madhya Pradesh High Court clears Hindi film ‘Haq’ for release!
⚖️ Petition by Shah Bano’s daughter seeking a ban dismissed.
🧾 Court observed: “The movie does not violate anyone’s privacy.”
🎥 Makers said it’s a fictional story, not targeting any community.
🎞️ Release: Nov… pic.twitter.com/1kX3Fnb5Zp
— Sanatan Prabhat (@SanatanPrabhat) November 7, 2025
೧. ಸಿದ್ದಿಕಾ ಬೇಗಂ ಅವರು ತಮ್ಮ ಅರ್ಜಿಯಲ್ಲಿ, “ಚಲನಚಿತ್ರ ನಿರ್ಮಾಪಕರು ಶಹಬಾನೋ ಅವರ ಮೇಲೆ ಚಲನಚಿತ್ರವನ್ನು ನಿರ್ಮಿಸುವ ಮೊದಲು ಅವರ ಕಾನೂನು ಉತ್ತರಾಧಿಕಾರಿಗಳ ಅನುಮತಿಯನ್ನು ಪಡೆದಿಲ್ಲ. ಅಲ್ಲದೆ, ಈ ಚಲನಚಿತ್ರದಲ್ಲಿ ಶರಿಯತ್ ಕಾನೂನನ್ನು ಋಣಾತ್ಮಕವಾಗಿ ಚಿತ್ರಿಸಲಾಗಿದೆ. ಇದರಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಬಹುದು,” ಎಂದು ಉಲ್ಲೇಖಿಸಿದ್ದರು.
೨. ಚಲನಚಿತ್ರ ನಿರ್ಮಾಪಕರ ಪರವಾಗಿ ವಾದ ಮಂಡಿಸಿದ ವಕೀಲ ಹೃತಿಕ್ ಗುಪ್ತಾ ಮತ್ತು ಅಜಯ್ ಬಗಾಡಿಯಾ ಅವರು, ಈ ಚಲನಚಿತ್ರವು ಸಂಪೂರ್ಣವಾಗಿ ಕಾಲ್ಪನಿಕ ಕಥಾವಸ್ತುವನ್ನು ಆಧರಿಸಿದೆ. ಈ ಚಲನಚಿತ್ರದ ಉದ್ದೇಶವು ಯಾವುದೇ ವ್ಯಕ್ತಿ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವುದಲ್ಲ ಎಂದು ವಾದಿಸಿದರು.
೩. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹೈಕೋರ್ಟ್ ಶಹಬಾನೋ ಅವರ ಮಗಳ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಿತು.
ಶಹಬಾನೋ ಪ್ರಕರಣ ಎಂದರೇನು?
ಶಹಬಾನೋ ಅವರು ಮಧ್ಯಪ್ರದೇಶದ ಇಂದೋರ್‌ನ ಮುಸ್ಲಿಂ ಮಹಿಳೆಯಾಗಿದ್ದರು. ಅವರು ೧೯೭೮ ರಲ್ಲಿ ಇಂದೋರ್‌ನ ಪ್ರಸಿದ್ಧ ವಕೀಲ ಮೊಹಮ್ಮದ್ ಅಹ್ಮದ್ ಖಾನ್ ಅವರನ್ನು ವಿವಾಹವಾದರು. ಅವರಿಗೆ ೫ ಮಕ್ಕಳಿದ್ದರು. ಶಹಬಾನೋ ಅವರು ೬೨ ವರ್ಷದವರಿದ್ದಾಗ ಅವರ ಪತಿ ವಿಚ್ಛೇದನ ನೀಡಿದರು. ಶಹಬಾನೋ ಅವರು ಜೀವನಾಂಶಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ಸುಪ್ರೀಂ ಕೋರ್ಟ್ ಅವರಿಗೆ ಪತಿಯಿಂದ ಜೀವನಾಂಶ ಸಿಗಬೇಕೆಂದು ಆದೇಶಿಸಿತು. ನಂತರ ಭಾರತದಲ್ಲಿ ವಿವಿಧ ಧರ್ಮಗಳಿಗೆ ವಿಭಿನ್ನ ನಾಗರಿಕ ಕಾನೂನುಗಳನ್ನು ಜಾರಿಗೆ ತರುವವರೆಗೆ ಈ ಪ್ರಕರಣವು ಪ್ರಮುಖ ಚರ್ಚೆಗೆ ಕಾರಣವಾಯಿತು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !