ಮುಸಲ್ಮಾನ ಪುರುಷನು ಎರಡನೇ ಮದುವೆಗೂ ಮುನ್ನ ಮೊದಲ ಪತ್ನಿಯ ಅನುಮತಿ ಪಡೆಯಬೇಕು! – ಕೇರಳ ಉಚ್ಚ ನ್ಯಾಯಾಲಯ : Kerala High Court

ಕುರಾನ್ ಮತ್ತು ಮುಸ್ಲಿಂ ಕಾನೂನುಗಳಲ್ಲಿಯೂ ಇದರ ಉಲ್ಲೇಖವಿದೆ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ!

ನವ ದೆಹಲಿ – ಒಬ್ಬ ಮುಸಲ್ಮಾನ ಪುರುಷನು ಮೊದಲ ವಿವಾಹವು ಅಸ್ತಿತ್ವದಲ್ಲಿರುವಾಗಲೇ ಎರಡನೇ ವಿವಾಹವನ್ನು ನೋಂದಾಯಿಸಲು ಬಯಸಿದರೆ, ಆ ಪ್ರಕ್ರಿಯೆಯ ಮೊದಲು ಅವನ ಮೊದಲ ಪತ್ನಿ ಇದಕ್ಕೆ ಒಪ್ಪಿಗೆ ಇದೆಯೇ ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದು ಕೇರಳ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ಕುರಿತ ಅರ್ಜಿಯಲ್ಲಿ ಒಬ್ಬ ಪುರುಷ ಮತ್ತು ಅವನ ಎರಡನೇ ಪತ್ನಿ ತಮ್ಮ ವಿವಾಹವನ್ನು ನೋಂದಾಯಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಲು ಕೋರಿದ್ದರು. ಮೊದಲ ಪತ್ನಿ ಈ ಪ್ರಕರಣದಲ್ಲಿ ಪಕ್ಷಕಾರರಾಗಿರಲಿಲ್ಲವಾದ್ದರಿಂದ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದೆ.

1. ಮುಸಲ್ಮಾನ ಕಾನೂನಿನ ಪ್ರಕಾರ ಎರಡನೇ ಮದುವೆಯನ್ನು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಮಾನ್ಯ ಮಾಡಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮೊದಲ ಪತ್ನಿ ಕೇವಲ ಪ್ರೇಕ್ಷಕಳಾಗಿ ಉಳಿಯಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ, ಧಾರ್ಮಿಕ ನಿಯಮಗಳಿಗಿಂತ ಸಂವಿಧಾನವು ನೀಡಿರುವ ಹಕ್ಕುಗಳಿಗೆ ಆದ್ಯತೆ ನೀಡಬೇಕು. ಆದ್ದರಿಂದ, ಎರಡನೇ ವಿವಾಹದ ನೋಂದಣಿಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಕಾನೂನಿನ ಬದಲು ಸಾಂವಿಧಾನಿಕ ನ್ಯಾಯವನ್ನು ಪರಿಗಣಿಸಲಾಗುವುದು. ಮೊದಲ ಪತ್ನಿಯ ಭಾವನೆಗಳನ್ನು ನಿರ್ಲಕ್ಷಿಸುವಂತಿಲ್ಲ.

2. ಎರಡನೇ ಮದುವೆಯ ಸಮಯದಲ್ಲಿ ವಿವಾಹ ನೋಂದಣಿ ಅಧಿಕಾರಿಗಳು ಮೊದಲ ಪತ್ನಿಯ ಹೇಳಿಕೆಯನ್ನು ಆಲಿಸಬಹುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಒಂದು ವೇಳೆ ಅವಳು ಎರಡನೇ ಮದುವೆಯು ಅಕ್ರಮ ಎಂದು ಹೇಳಿದರೆ, ಆ ವಿಷಯವನ್ನು ನಾಗರಿಕ ನ್ಯಾಯಾಲಯಕ್ಕೆ ಕಳುಹಿಸಬಹುದು.

ಕುರಾನ್ ಅಥವಾ ಮುಸಲ್ಮಾನ ಕಾನೂನಿನಲ್ಲಿ ಅನುಮತಿ ಇಲ್ಲ!

ನ್ಯಾಯಮೂರ್ತಿಗಳು ಗಮನಿಸಿದಂತೆ, ಪವಿತ್ರ ಕುರಾನ್ ಅಥವಾ ಮುಸಲ್ಮಾನ ಕಾನೂನಿನಲ್ಲಿಯೂ ಮೊದಲ ಪತ್ನಿ ಜೀವಂತವಾಗಿ ಮತ್ತು ವೈವಾಹಿಕ ಸಂಬಂಧದಲ್ಲಿರುವಾಗ, ಆಕೆಯ ಮಾಹಿತಿಯಿಲ್ಲದೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಇರಿಸಿಕೊಳ್ಳಲು ಮಾನ್ಯತೆ ಇಲ್ಲ. ಆದ್ದರಿಂದ, ಎರಡನೇ ವಿವಾಹದ ಸಮಯದಲ್ಲಿ ಮೊದಲ ಪತ್ನಿಗೆ ತನ್ನ ಅಹವಾಲನ್ನು ಮಂಡಿಸಲು ಅವಕಾಶ ಸಿಗಲೇಬೇಕು. ಶೇ.99.99 ಮುಸಲ್ಮಾನ ಮಹಿಳೆಯರು ತಮ್ಮ ವಿವಾಹದ ಅವಧಿಯಲ್ಲಿ ಪತಿಯ ಎರಡನೇ ಮದುವೆಗೆ ಮಾನ್ಯತೆ ನೀಡುವುದಿಲ್ಲ.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯದ ಈ ನಿರ್ಧಾರವನ್ನು ಮುಸಲ್ಮಾನರು ಒಪ್ಪುತ್ತಾರೆಯೇ? ಒಂದು ವೇಳೆ ಮುಸಲ್ಮಾನರ ಧಾರ್ಮಿಕ ವಿಷಯಗಳಲ್ಲಿಯೇ ಇದರ ಉಲ್ಲೇಖವಿದ್ದರೆ, ಅದನ್ನು ಪಾಲಿಸಲಾಗುತ್ತಿಲ್ಲ ಎಂದೇ ಹೇಳಬೇಕಾಗುತ್ತದೆ!