
ಮುಂಬಯಿ, ಅಕ್ಟೋಬರ್ 21 (ವಾರ್ತೆ) – ತಾಜ್ ಮಹಲ್ ‘ತೇಜೋಮಹಲ್’ ಅಂದರೆ ಭಗವಾನ್ ಶಿವನ ದೇವಸ್ಥಾನ ಎಂಬ ಸತ್ಯವನ್ನು ಬಹಿರಂಗಪಡಿಸುವ ‘ದಿ ತಾಜ್ ಸ್ಟೋರಿ’ ಚಲನಚಿತ್ರವು ಅಕ್ಟೋಬರ್ 31 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ನೆನಪಿಗಾಗಿ ತಾಜ್ ಮಹಲ್ ಅನ್ನು ನಿರ್ಮಿಸಿದನು ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಲಾಗಿತ್ತು. ಇತಿಹಾಸ ಸಂಶೋಧಕ ಪುರುಷೋತ್ತಮ್ ಓಕ್ ಅವರು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿ ‘ತಾಜ್ ಮಹಲ್ ನವೇ ತೇಜೋಮಹಲ್’ (ತಾಜ್ ಮಹಲ್ ಅಲ್ಲ, ತೇಜೋಮಹಲ್) ಎಂಬ ಪುಸ್ತಕವನ್ನು ಬರೆದಿದ್ದಾರೆ; ಆದರೆ, ಮುಸ್ಲಿಮರ ಮತಗಳಿಗಾಗಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಸತ್ಯವನ್ನು ಮುಚ್ಚಿಡಲಾಗಿತ್ತು. ಈಗ ಆ ಸತ್ಯವನ್ನು ‘ದಿ ತಾಜ್ ಸ್ಟೋರಿ’ ಚಿತ್ರದ ಮೂಲಕ ವಿವರಿಸಲಾಗಿದೆ.
ಸುರೇಶ್ ಝಾ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ತುಷಾರ್ ಅಮರೀಶ್ ಗೋಯಲ್ ಅವರು ಇದರ ಲೇಖನ ಮತ್ತು ನಿರ್ದೇಶನ ಮಾಡಿದ್ದಾರೆ. ಹಿರಿಯ ನಟ ಪರೇಶ್ ರಾವಲ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ವಿಶಿಷ್ಟ ಕಥಾವಸ್ತು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ದೇಶಾದ್ಯಂತ ಈ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.
ಸತ್ಯಕ್ಕಾಗಿ ಹೋರಾಟದ ಕಥೆ!
ಚಿತ್ರದಲ್ಲಿ, ‘ತಾಜ್ ಮಹಲ್’ ಬಗ್ಗೆ ಮಾಹಿತಿ ನೀಡಲು ‘ಗೈಡ್’ (ಪ್ರವಾಸಿಗರಿಗೆ ಮಾಹಿತಿ ನೀಡುವವರು) ಆಗಿ ಕೆಲಸ ಮಾಡುವ ಪರೇಶ್ ರಾವಲ್ ಅವರಿಗೆ ತಾಜ್ ಮಹಲ್ ಕಟ್ಟಡದ ಮೇಲೆ ಸ್ವಸ್ತಿಕ, ಶ್ರೀಫಲ (ತೆಂಗಿನಕಾಯಿ), ತ್ರಿಶೂಲ, ಓಂ ಮೊದಲಾದ ಅಸಂಖ್ಯಾತ ಚಿಹ್ನೆಗಳು ಕಂಡುಬರುತ್ತವೆ. ನಂತರ ಅವರು ತಾಜ್ ಮಹಲ್ ಕಟ್ಟಡದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದಾಗ, ತಾಜ್ ಮಹಲ್‌ನಲ್ಲಿ ಬೀಗ ಹಾಕಿದ 22 ಕೊಠಡಿಗಳು, ತಾಜ್ ಮಹಲ್‌ನ ನೆಲಮಾಳಿಗೆಯಲ್ಲಿ ಕಂಡುಬಂದ ಹಿಂದೂ ಚಿಹ್ನೆಗಳ ಬಗ್ಗೆ ಅವರಿಗೆ ತಿಳಿಯುತ್ತದೆ. ನಂತರ ತಾಜ್ ಮಹಲ್ ಭಗವಾನ್ ಶಿವನ ದೇವಸ್ಥಾನ ಎಂಬ ಸತ್ಯ ಅವರಿಗೆ ಮನವರಿಕೆಯಾಗುತ್ತದೆ. ಈ ಸತ್ಯವನ್ನು ಹುಡುಕಲು ಅವರು ತೆಗೆದುಕೊಂಡ ಅಪಾಯ; ಈ ಸತ್ಯ ಹೊರಬರದಂತೆ ತಡೆಯಲು ಮತಾಂಧರಿಂದ ಅವರಿಗೆ ಆದ ತೀವ್ರ ವಿರೋಧ ಮತ್ತು ಸತ್ಯಕ್ಕಾಗಿ ಅವರು ನಡೆಸಿದ ನ್ಯಾಯಾಲಯದ ಹೋರಾಟದಂತಹ ರೋಚಕ ಮತ್ತು ಸಂಘರ್ಷದ ಕಥೆಯನ್ನು ಈ ಚಿತ್ರದಲ್ಲಿ ವರ್ಣಿಸಲಾಗಿದೆ.
ಚಲನಚಿತ್ರದ ವೈಶಿಷ್ಟ್ಯವೇನು?ಈ ಚಲನಚಿತ್ರದಲ್ಲಿ ಐತಿಹಾಸಿಕ ಉಲ್ಲೇಖಗಳು, ಕಟ್ಟಡದಲ್ಲಿ ಕಂಡುಬರುವ ಹಿಂದೂ ಸಂಸ್ಕೃತಿಯ ಬಲವಾದ ಪುರಾವೆಗಳ ವಾಸ್ತವಿಕ ಉದಾಹರಣೆಗಳನ್ನು ನೀಡಲಾಗಿದೆ. ಚಿತ್ರದಲ್ಲಿನ ಉಲ್ಲೇಖಗಳನ್ನು ಕೇವಲ ತರ್ಕದ ಮೇಲೆ ಅಲ್ಲ, ಬದಲಿಗೆ ಗಟ್ಟಿ ಪುರಾವೆಗಳೊಂದಿಗೆ ಮಂಡಿಸಲಾಗಿದೆ. ಈ ಚಿತ್ರದ ಭಿತ್ತಿಪತ್ರದಲ್ಲಿ ನಟ ಪರೇಶ್ ರಾವಲ್ ಅವರು ತಾಜ್ ಮಹಲ್‌ನ ಗುಮ್ಮಟವನ್ನು ಕೈಯಿಂದ ಸರಿಸುತ್ತಿರುವಂತೆ ತೋರಿಸಲಾಗಿದೆ. ಇದು ತಾಜ್ ಮಹಲ್‌ನಲ್ಲಿನ ರಹಸ್ಯವು ಬಯಲಾಗುವುದರ ಸಂಕೇತವಾಗಿದೆ. ಈ ಚಿತ್ರವು ಹಿಂದೂ-ಮುಸ್ಲಿಂ ನಡುವೆ ವಿವಾದವನ್ನು ಸೃಷ್ಟಿಸುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಈ ಚಲನಚಿತ್ರವು ತಾಜ್ ಮಹಲ್‌ನ ಸತ್ಯವನ್ನು ಸಮಸ್ತ ಭಾರತೀಯರ ಮುಂದೆ ತೆರೆದಿಡುವ ಮೈಲಿಗಲ್ಲಾಗುವ ಸಾಧ್ಯತೆ ಇದೆ. |
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !