|

ಕೊಲ್ಹಾಪುರ, ಅಕ್ಟೋಬರ್ ೧೪ (ಸುದ್ದಿ) – ಕಾ. ಗೋವಿಂದ ಪಾನಸರೆ ಹತ್ಯೆ ಪ್ರಕರಣದಲ್ಲಿ ಕೊಲ್ಹಾಪುರದ ಮುಂಬಯಿ ಉಚ್ಚ ನ್ಯಾಯಾಲಯದ ‘ಸರ್ಕ್ಯೂಟ್ ಬೆಂಚ್’ ನಿಂದ ಈ ಪ್ರಕರಣದ ಶಂಕಿತ ಸನಾತನ ಸಂಸ್ಥೆಯ ಸಾಧಕ ಡಾ. ವೀರೇಂದ್ರಸಿಂಗ್ ತಾವಡೆ, ಅಮೋಲ್ ಕಾಳೆ ಮತ್ತು ಶರದ್ ಕಳಸ್ಕರ್ ಅವರಿಗೆ ಅಕ್ಟೋಬರ್ ೧೪ ರಂದು ಜಾಮೀನು ಮಂಜೂರು ಮಾಡಲಾಯಿತು. ಈ ಹಿನ್ನೆಲೆಯಲ್ಲಿ, ಇಲ್ಲಿನ ಶಿವಾಜಿ ಚೌಕ್‌ನಲ್ಲಿ ಮಧ್ಯಾಹ್ನ ೨ ಗಂಟೆಗೆ ಹಿಂದುತ್ವನಿಷ್ಠರು ನಾಗರಿಕರಿಗೆ ಸಕ್ಕರೆ ಹಂಚುವ ಮೂಲಕ ಸಂತೋಷ ವ್ಯಕ್ತಪಡಿಸಿದರು.

ಈ ಸಮಯದಲ್ಲಿ, ಹಿಂದುತ್ವನಿಷ್ಠರು ಮೊಕದ್ದಮೆ ನಡೆಸಿದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಮತ್ತು ನ್ಯಾಯವಾದಿ ಗುರುರಾಜ ರಸಾಳ್ ಅವರಿಗೆ ಪೇಡಾ ತಿನ್ನಿಸಿ ಸಂತೋಷ ಆಚರಿಸಿದರು. ಈ ವೇಳೆ ಶಿವಾಜಿ ಚೌಕ್‌ಗೆ ಬಂದ ನಾಗರಿಕರಿಗೂ ಸಕ್ಕರೆ ಮತ್ತು ಪೇಡಾ ಹಂಚಲಾಯಿತು. ಇದನ್ನು ಮಾಡುವಾಗ ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’, ‘ಹರ ಹರ ಮಹಾದೇವ’ ಘೋಷಣೆಗಳಿಂದ ಶಿವಾಜಿ ಚೌಕ್ ಪ್ರದೇಶವು ಮೊಳಗಿತು.

ಹಿಂದೂತ್ವನಿಷ್ಠರ ಪ್ರತಿಕ್ರಿಯೆಗಳು…
೧. ಹಿಂದುತ್ವನಿಷ್ಠರನ್ನು ಹತ್ತಿಕ್ಕುವವರಿಗೆ ಪಾಠ ಕಲಿಸುವವರೆಗೆ ನಾವು ಸುಮ್ಮನಿರುವುದಿಲ್ಲ!: ಇಂದು ಸಂತೋಷದ ಕ್ಷಣ. ಡಾ. ತಾವಡೆ, ಶರದ್ ಕಳಸ್ಕರ್ ಮತ್ತು ಅಮೋಲ್ ಕಾಳೆ ಅವರಿಗೆ ಜಾಮೀನು ಸಿಕ್ಕಿದ್ದರೂ, ನಾಳೆ ಈ ಮೂವರೂ ನಿರಪರಾಧಿಗಳೆಂದು ಬಿಡುಗಡೆಯಾದ ನಂತರ ನಾವು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಆನಂದವನ್ನು ಆಚರಿಸುತ್ತೇವೆ ಮತ್ತು ಭವಿಷ್ಯದಲ್ಲಿ ಈ ಮೂವರಿಗೂ ಖಂಡಿತವಾಗಿಯೂ ಸನ್ಮಾನ ಸಮಾರಂಭವನ್ನು ಆಯೋಜಿಸುತ್ತೇವೆ. ಹಿಂದುತ್ವನಿಷ್ಠರನ್ನು ಹತ್ತಿಕ್ಕುವವರಿಗೆ ಪಾಠ ಕಲಿಸುವವರೆಗೆ ನಾವು ಸುಮ್ಮನಿರುವುದಿಲ್ಲ. – ಶ್ರೀ. ಸುನೀಲ ಸಾಮಂತ್, ಸಂಸ್ಥಾಪಕರು, ಶಿವಶಾಹಿ ಫೌಂಡೇಶನ್.
೨. ಪೊಲೀಸರು ನಿರಪರಾಧಿಗಳನ್ನು ಸಿಲುಕಿಸುವ ಕೆಲಸ ಮಾಡಿದರು!: ಕಾ. ಗೋವಿಂದ ಪಾನಸರೆ ಅವರ ಹತ್ಯೆಯೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಡಾ. ತಾವಡೆ, ಶರದ್ ಕಳಸ್ಕರ್ ಮತ್ತು ಅಮೋಲ್ ಕಾಳೆ ಅವರನ್ನು ಅನಾವಶ್ಯಕವಾಗಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಈ ಪ್ರಕರಣದ ನಿಜವಾದ ತನಿಖೆಯನ್ನು ನಡೆಸಲೇ ಇಲ್ಲ. ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಇವು ಹಿಂದೂತ್ವದ ಕೆಲಸ ಮಾಡುತ್ತವೆ. ಅವರನ್ನು ಸಿಲುಕಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಅವರಿಗೆ ಜಾಮೀನು ಮಂಜೂರಾಗಿದೆ. ಮುಂದೆ ಈ ಮೂವರೂ ನಿರಪರಾಧಿಗಳಾಗಿ ಬಿಡುಗಡೆಯಾಗುತ್ತಾರೆ ಎಂಬ ಖಚಿತ ನಂಬಿಕೆ ನಮಗಿದೆ. – ಶ್ರೀ. ರಾಜು ಯಾದವ್, ಉದ್ಧವ್ ಬಾಳಾಸಾಹೇಬ್ ಠಾಕರೆ ಪಕ್ಷ.
೩. ನಮ್ಮ ವಿಶ್ವಾಸ ನ್ಯಾಯದೇವತೆಯ ಮೇಲೆ!: ಕಾ. ಗೋವಿಂದ ಪಾನಸರೆ ಅವರ ಹತ್ಯೆ ಪ್ರಕರಣದಲ್ಲಿ ಹಿಂದುತ್ವನಿಷ್ಠರನ್ನು ತಪ್ಪಾದ ರೀತಿಯಲ್ಲಿ ಬಂಧಿಸಲಾಗಿತ್ತು. ಅವರ ಯಾವುದೇ ದೋಷವಿಲ್ಲದಿದ್ದರೂ, ಹಿಂದುತ್ವನಿಷ್ಠರನ್ನು ಮತ್ತು ಸನಾತನ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಉದ್ದೇಶದಿಂದ ಯಾರೋ ಸನಾತನ ಸಂಸ್ಥೆಯ ಹೆಸರನ್ನು ತೆಗೆದುಕೊಂಡು ಹಿಂದುತ್ವನಿಷ್ಠರನ್ನು ಬಂಧಿಸಲಾಗುತ್ತದೆ. ಪೊಲೀಸರ ತನಿಖೆ ದಾರಿ ತಪ್ಪಿತ್ತು. ನಮ್ಮ ವಿಶ್ವಾಸ ನ್ಯಾಯದೇವತೆಯ ಮೇಲೆ ಇದೆ. – ಶ್ರೀ. ಕಿಶೋರ್ ಘಾಟ್ಗೆ, ಉಪಜಿಲ್ಲಾ ಮುಖ್ಯಸ್ಥರು, ಶಿವಸೇನೆ.
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ