ಕಾ. ಗೋವಿಂದ ಪನ್ಸಾರೆ ಪ್ರಕರಣ

ಕೊಲ್ಲಾಪುರ, ಅಕ್ಟೋಬರ್ ೮ – ‘೨೦೦೪ ರಲ್ಲಿ ಕೊಲ್ಲಾಪುರದಲ್ಲಿ ನಡೆದ ಯಜ್ಞ ಕಾರ್ಯಕ್ರಮಕ್ಕಾಗಿ ಕರವೀರ ಪೀಠದ ಶಂಕರಾಚಾರ್ಯರು ಮತ್ತು ಇತರ ಸಂಸ್ಥೆಗಳು ಸೇರಿ ೨ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂದು ನಾನು ವೃತ್ತಪತ್ರಿಕೆಯ ವರದಿಗಳ ಆಧಾರದ ಮೇಲೆ ಹೇಳಿದ್ದೇನೆ’ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದ ಶಶಿಕಾಂತ ಪಾಟೀಲ್ ಅವರು ಸಾಕ್ಷಿ ಹೇಳಿದರು. ಕೊಲ್ಲಾಪುರದ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿ ಸಂಗ್ರಾಮ ಕೊಲ್ಹಾಟ್ಕರ್ ಅವರು ಶಶಿಕಾಂತ ಪಾಟೀಲ್ ಅವರ ಅಡ್ಡ-ಪರೀಕ್ಷೆ ನಡೆಸಿದರು. ಅಡ್ಡ-ಪರೀಕ್ಷೆಯಲ್ಲಿ ಪಾಟೀಲ್ ಅವರು ಅನೇಕ ಪ್ರಶ್ನೆಗಳಿಗೆ ‘ನನಗೆ ಗೊತ್ತಿಲ್ಲ’, ‘ನನಗೆ ನೆನಪಿಲ್ಲ’ ಎಂದು ಉತ್ತರಿಸಿದರು. ಕಾ. ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ವಿಚಾರಣೆಯು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಸ್.ತಾಂಬೆ ಅವರ ಮುಂದೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಪ್ರತಿವಾದಿ ಪರವಾಗಿ ನ್ಯಾಯವಾದಿ ಸಮೀರ್ ಪಟವರ್ಧನ್, ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್, ನ್ಯಾಯವಾದಿ ಪ್ರೀತಿ ಪಾಟೀಲ್, ಹಾಗೆಯೇ ಸರಕಾರಿ ಪರವಾಗಿ ನ್ಯಾಯವಾದಿ ಶಿವಾಜಿರಾವ್ ರಾಣೆ ಅವರು ಹಾಜರಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೧೭ ರಂದು ನಡೆಸಲಾಗುವುದು.
ಅಡ್ಡ-ಪರೀಕ್ಷೆಯಲ್ಲಿ ನ್ಯಾಯವಾದಿ ಸಂಗ್ರಾಮ ಕೊಲ್ಹಾಟ್ಕರ್ ಅವರು ‘ಶಶಿಕಾಂತ ಪಾಟೀಲ್ ಅವರಿಗೆ ೨೦೦೪-೨೦೦೮ ರ ಅವಧಿಯ ಪಕ್ಷಕ್ಕೆ ಸಂಬಂಧಿಸಿದ ಹಾಗೂ ಕಾ. ಪನ್ಸಾರೆ ಅವರಿಗೆ ಸಂಬಂಧಿಸಿದ ಘಟನೆಗಳು ಸ್ಪಷ್ಟವಾಗಿ ನೆನಪಿವೆ; ಆದರೆ ಸಾಕ್ಷಿಗೆ ಸಂಬಂಧಿಸಿದ ಅನೇಕ ಘಟನೆಗಳನ್ನು ಅವರು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದ್ದಾರೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ‘ಮಾಜಿ ಪೊಲೀಸ್ ಅಧಿಕಾರಿ ಎಂ.ಎಂ. ಮುಶ್ರೀಫ್ ಅವರು ಬರೆದ ‘ಹೂ ಕಿಲ್ಡ್ ಕರ್ಕರೆ’ ಎಂಬ ಪುಸ್ತಕದಲ್ಲಿ ಬರೆದ ವಿಷಯವನ್ನು ಅವರು ಯಾವುದರ ಆಧಾರದ ಮೇಲೆ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಅವರು ಎಂದಿಗೂ ಮುಶ್ರೀಫ್, ಕಾ. ಪನ್ಸಾರೆ ಅಥವಾ ಮಾಜಿ ನ್ಯಾಯಮೂರ್ತಿ ಕೋಳಸೆ-ಪಾಟೀಲ್ ಅವರನ್ನು ಕೇಳಿಲ್ಲ, ಮತ್ತು ಈ ಬಗ್ಗೆ ಪುರಾವೆಗಳಿದ್ದರೆ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲ ಅಥವಾ ಸರಕಾರದ ಮೊರೆ ಏಕೆ ಹೋಗಲಿಲ್ಲ?’ ಎಂದು ಕೂಡ ಕೇಳಲಿಲ್ಲ ಎಂದು ಶಶಿಕಾಂತ ಪಾಟೀಲ್ ಅವರು ಅಡ್ಡ-ಪರೀಕ್ಷೆಯಲ್ಲಿ ತಿಳಿಸಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”