ತಥಾಕಥಿತ ಪ್ರಗತಿಪರರು ಮತ್ತು ಪಾಕಿಸ್ತಾನಿ ಮನಸ್ಥಿತಿಯ ಜನರಿಗೆ ಪಾಠ ಕಲಿಸಲು ಯುವಕರ (ಶಿವಪ್ರತಿಷ್ಠಾನದ ಕಾರ್ಯಕರ್ತರ) ಜನ್ಮವಾಗಿದೆ! – ಪೂ. ಸಂಭಾಜಿರಾವ್ ಭಿಡೆಗುರೂಜಿ

ಸಾಂಗ್ಲಿಯಲ್ಲಿ ಶ್ರೀ ದುರ್ಗಾಮಾತಾ ದೌಡ್‌ನ ಸಮಾಪ್ತಿ!

ಶ್ರೀ ದುರ್ಗಾದೌಡಿಯ ಸಮಾರೋಪ ಸಮಾರಂಭದಲ್ಲಿ ಪೂ. ಸಂಭಾಜಿರಾವ್ ಭಿಡೆಗುರೂಜಿಯವರು ಮಾರ್ಗದರ್ಶನ ಮಾಡುತ್ತಿರುವುದು

ಸಾಂಗ್ಲಿ, ಅಕ್ಟೋಬರ್ ೩ (ವರದಿ.) – ಪಾಶ್ಚಾತ್ಯ ಮತ್ತು ಎಡಪಂಥೀಯ ಸಿದ್ಧಾಂತಗಳ ತಥಾಕಥಿತ ಹಿಂದೂಗಳು ಪ್ರಗತಿಪರ ಮತ್ತು ಸುಧಾರಣಾವಾದದ ಹೆಸರಿನಲ್ಲಿ ದೇಶದ ಶತ್ರುಗಳಾಗಿದ್ದಾರೆ. ಭಯೋತ್ಪಾದಕರ ಆಶ್ರಯತಾಣವಾದ ಪಾಕಿಸ್ತಾನ ಮತ್ತು ಪಾಕಿಸ್ತಾನಿ ಮನಸ್ಥಿತಿಯ ಜನರಿಗೆ ಪಾಠ ಕಲಿಸಬೇಕಾಗಿದೆ. ಇದಕ್ಕಾಗಿಯೇ ಯುವಕರು ಜನ್ಮ ತಾಳಿದ್ದಾರೆ. ಇದೇ ನಮ್ಮ ಜೀವನದ ಗುರಿಯಾಗಿದೆ ಎಂದು ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನ್ ಸಂಸ್ಥಾಪಕ ಪೂ. ಸಂಭಾಜಿರಾವ್ ಭಿಡೆಗುರೂಜಿ ಅವರು ದಸರಾ ದಿನದಂದು ಶ್ರೀ ದುರ್ಗಾಮಾತಾ ದೌಡ್‌ನ ಸಮಾರೋಪ ಸಮಾರಂಭದಲ್ಲಿ ಕರೆ ನೀಡಿದರು.

ಶ್ರೀ ದುರ್ಗಾದೌಡಿಯ ಸಮಯದಲ್ಲಿ ಉಪಸ್ಥಿತರಿದ್ದ (ಮಧ್ಯದಲ್ಲಿ) ಶಾಸಕ ಶ್ರೀ. ಸುಧೀರ ಗಾಡಗೀಳ, (ಬಲಬದಿಯಲ್ಲಿ) ಮಾಜಿ ಶಾಸಕ ಶ್ರೀ. ದಿನಕರ ಪಾಟೀಲ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದ ಶ್ರೀ. ಹಣಮಂತರಾವ್ ಪವಾರ.

ರಾಷ್ಟ್ರದ ಉದ್ಧಾರದ ಕಾರ್ಯಕ್ಕಾಗಿಯೇ ಹಿಂದೂಗಳು ಜನ್ಮ ತಾಳಿದ್ದಾರೆ!

ಪೂ. ಸಂಭಾಜಿರಾವ್ ಭಿಡೆಗುರೂಜಿ ಅವರು ಮಾತು ಮುಂದುವರೆಸಿ, “ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯದ ಪ್ರತಿಜ್ಞೆ ಮಾಡಿದ ನಂತರ ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಸ್ವರಾಜ್ಯಕ್ಕಾಗಿಯೇ ಮುಡಿಪಾಗಿಟ್ಟರು. ಅಫ್ಜಲ್ ಖಾನ್‌ನ ಕರುಳನ್ನು ಹೊರತೆಗೆದರು, ಅನೇಕ ಶತ್ರುಗಳನ್ನು ನಾಶಪಡಿಸಿದರು. ಅವರು ಐದು ಬಾದಶಾಹಿಗಳನ್ನು ಸೋಲಿಸಿ ಸ್ವರಾಜ್ಯವನ್ನು ಸ್ಥಾಪಿಸಿದರು. ಛತ್ರಪತಿ ಶಿವಾಜಿ ಮಹಾರಾಜರಿಗೆ ಶ್ರೀ ಭವಾನಿ ಮಾತೆಯ ಆಶೀರ್ವಾದ ಕ್ಷಣಕ್ಷಣಕ್ಕೂ ಸಿಕ್ಕಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ನಾವೂ ನಮ್ಮ ಸರ್ವಸ್ವವನ್ನು ಪಣಕ್ಕಿಡೋಣ.

ಶತ್ರು ಯಾರು? ಮಿತ್ರ ಯಾರು? ಮತ್ತು ಶತ್ರುವಿನ ಅರಿವು ಏನು? ನಮ್ಮ ರಾಷ್ಟ್ರದ, ನಮ್ಮ ಧರ್ಮದ, ನಮ್ಮ ಸಮಾಜದ ಶತ್ರು ನಿಖರವಾಗಿ ಯಾರು? ಎಂಬ ಅರಿವು ಇಲ್ಲದ, ಅಧ್ಯಯನ ಮಾಡದ, ವಿಚಾರಹೀನ ಮತ್ತು ಬೆನ್ನುಮೂಳೆಯಿಲ್ಲದ ನಮ್ಮ ಹಿಂದೂ ಸಮಾಜವಿದೆ. ಅಂತಹ ಸಮಾಜಕ್ಕೆ ದಿಕ್ಕನ್ನು ತೋರಿಸಿ, ಅದನ್ನು ರಾಷ್ಟ್ರದ ಉದ್ಧಾರಕ್ಕಾಗಿ ಸಮರ್ಥಗೊಳಿಸುವುದು ನಮ್ಮ ಮೊದಲ ಕರ್ತವ್ಯವಾಗಿದೆ.

ಶ್ರೀ ದುರ್ಗಾದೌಡ್‌ ನಡೆಸುತ್ತಿದ್ದ ಜನರು

ಸನಾತನ ಸಂಸ್ಥೆಯ ವತಿಯಿಂದ ಶ್ರೀ ದುರ್ಗಾದೌಡ್‌ಗೆ ಸ್ವಾಗತ ಮತ್ತು ಧ್ವಜಕ್ಕೆ ಆರತಿ!

ಸಾಂಗ್ಲಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಶ್ರೀ ದುರ್ಗಾದೌಡ್‌ಗೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸನಾತನದ ಸಾಧಕಿಯರಾದ ಸೌ. ಸಂಪದಾ ಪಾಟಣಕರ್, ಸೌ. ಪ್ರಿಯಾಂಕಾ ಕುಷ್ಟೆ ಮತ್ತು ಸೌ. ವಂದನಾ ಸಲಾಮವಾಡೆ ಅವರು ಧ್ವಜಕ್ಕೆ ಆರತಿ ಬೆಳಗಿದರು. ಈ ವೇಳೆ ಶ್ರೀಮತಿ ಸರಿತಾ ಕುಷ್ಟೆ ಅವರು ಉಪಸ್ಥಿತರಿದ್ದರು.

ಸಾಂಗ್ಲಿಯಲ್ಲಿ ಶ್ರೀ ದುರ್ಗಾದೌಡ್ ಸಮಯದಲ್ಲಿ ಧ್ವಜಕ್ಕೆ ಮಂಗಳಾರತಿ ಮಾಡುತ್ತಿರುವ ಸನಾತನ ಸಂಸ್ಥೆಯ ಸಾಧಕಿಯರು

‘೨೦೨೬ ರ ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನ್‌ನ ಗಡಕೋಟ್ ಅಭಿಯಾನವು ಶ್ರೀ ಲೋಹಗಡ್‌ನಿಂದ ಶ್ರೀ ಭೀಮಗಡ್ ಮಾರ್ಗವಾಗಿ ರಾಜಮತಿ ಗಡ್‌(ಕೋಟೆ)ವರೆಗೆ ನಡೆಯಲಿದೆ’ ಎಂದು ಪೂ. ಸಂಭಾಜಿರಾವ್ ಭಿಡೆಗುರೂಜಿ ಅವರು ಘೋಷಿಸಿದರು.