
ನವ ದೆಹಲಿ – ಓರ್ವ ಮಹಿಳೆಯ ಗಂಡನಿಗೆ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವಿದ್ದರೆ ಮತ್ತು ಆ ಕಾರಣದಿಂದ ಗಂಡ-ಹೆಂಡತಿಯರ ನಡುವಿನ ಸಂಬಂಧ ಮುರಿದುಬಿದ್ದರೆ, ಪತ್ನಿಯು ಆ ಮಹಿಳೆಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದು ದೆಹಲಿ ಉಚ್ಚ ನ್ಯಾಯಾಲಯವು ಒಂದು ಪ್ರಮುಖ ತೀರ್ಪನ್ನು ನೀಡಿದೆ. ನ್ಯಾಯಾಲಯವು, ವಿವಾಹವು ಒಂದು ಪವಿತ್ರ ಬಂಧವಾಗಿದೆ. ಈ ಸಂಬಂಧದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಮೂರನೇ ವ್ಯಕ್ತಿಯು ಮಾನಸಿಕ ಅಥವಾ ಭಾವನಾತ್ಮಕ ಹಾನಿಗೆ ಹೊಣೆಗಾರನಾಗಿರುತ್ತಾನೆ. ಅಂತಹ ಸಂದರ್ಭದಲ್ಲಿ, ಸಂತ್ರಸ್ತ ವ್ಯಕ್ತಿ ಭವಿಷ್ಯದ ದೃಷ್ಟಿಯಿಂದ ಪರಿಹಾರಕ್ಕಾಗಿ ದಾವೆ ಹೂಡಬಹುದು.
ಪ್ರಕರಣ ಯಾವುದು ?
ಸಂತ್ರಸ್ತ ಮಹಿಳೆಯು, ಅವರ ವಿವಾಹ 2012 ರಲ್ಲಿ ನಡೆದಿತ್ತು. 2018 ರಲ್ಲಿ ಅವರಿಗೆ ಅವಳಿ ಮಕ್ಕಳು ಜನಿಸಿದರು. ಆದರೆ, 2021 ರಲ್ಲಿ ಒಬ್ಬ ಮಹಿಳೆ ಅವರ ಗಂಡನ ವ್ಯವಹಾರಕ್ಕೆ ಸೇರಿಕೊಂಡಳು ಮತ್ತು ಅವರಿಬ್ಬರು ಹತ್ತಿರವಾದರು. ಗಂಡ ಆ ಮಹಿಳೆಯೊಂದಿಗೆ ಕೆಲಸದ ನಿಮಿತ್ತ ಪ್ರಯಾಣಿಸಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಸಂಬಂಧವು ವಿಕೋಪಕ್ಕೆ ಹೋಗುತ್ತಿದ್ದ ಕಾರಣ ಪತ್ನಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು.
ನ್ಯಾಯಾಲಯವು, ಈ ಪ್ರಕರಣವು ಗಂಡನ ವಿರುದ್ಧ ಅಲ್ಲ, ಬದಲಾಗಿ ಅವನ ಪ್ರೇಯಸಿಯ ವಿರುದ್ಧ ಇದೆ ಎಂದು ಸ್ಪಷ್ಟಪಡಿಸಿತು. ಆದ್ದರಿಂದ, ಈ ಪ್ರಕರಣದ ವಿಚಾರಣೆಯು ಕುಟುಂಬ ನ್ಯಾಯಾಲಯದಲ್ಲಿ ನಡೆಯದೆ, ಸಿವಿಲ್ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿತು. ವಿವಾಹವು ಮುರಿಯಲು ಆ ಮಹಿಳೆಯೇ ಕಾರಣಳೇ ಅಥವಾ ಇಲ್ಲವೇ ಎಂಬುದನ್ನು ಮೊಕದ್ದಮೆಯಲ್ಲಿ ನಿರ್ಧರಿಸಲಾಗುತ್ತದೆ. ಸಂತ್ರಸ್ತ ಮಹಿಳೆ ನೀಡಿದ ಬಲವಾದ ಪುರಾವೆಗಳ ಆಧಾರದ ಮೇಲೆ, ಮೊಕದ್ದಮೆಯು ವಿಚಾರಣೆಗೆ ಯೋಗ್ಯವಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!