
ಮುಂಬಯಿ, ಸೆಪ್ಟೆಂಬರ್ 22 (ಸುದ್ದಿ) – ದೇವಿಯ 51 ಶಕ್ತಿಪೀಠಗಳಲ್ಲಿ ಒಂದಾದ ಪಾಲಘರ ಜಿಲ್ಲೆಯ ವಿರಾರನಲ್ಲಿರುವ ಶ್ರೀ ಜೀವದಾನಿದೇವಿ ದೇವಸ್ಥಾನದಲ್ಲಿ ಘಟಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಿದೆ. ಸೆಪ್ಟೆಂಬರ್ 22 ರಂದು ಬೆಳಿಗ್ಗೆ 3.45 ಕ್ಕೆ ಶ್ರೀ ಜೀವದಾನಿದೇವಿ ದೇವಿಗೆ ಮಹಾಭಿಷೇಕ ಮಾಡಿ, ವಸ್ತ್ರಾಲಂಕಾರ ತೊಡಿಸಲಾಯಿತು. ದೇವಿಗೆ ಅಲಂಕಾರ ಮಾಡಿದ ನಂತರ ನೈವೇದ್ಯ ಮತ್ತು ಧೂಪಾರತಿ ಮಾಡಲಾಯಿತು. ನಂತರ, ಶ್ರೀ ಚಂಡಿಪಾಠ ಪಠಣದ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸೆಪ್ಟೆಂಬರ್ 26 ಮತ್ತು ಸೆಪ್ಟೆಂಬರ್ 30 ಈ ಎರಡೂ ದಿನಗಳಂದು ಬೆಳಿಗ್ಗೆ 3.45 ಕ್ಕೆ ಶ್ರೀ ಜೀವದಾನಿದೇವಿ ದೇವಿಗೆ ಮಹಾಭಿಷೇಕ ಮತ್ತು ನಂತರ ಹೋಮ-ಹವನ ಹಾಗೂ ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಲಾಗುವುದು. ಅಕ್ಟೋಬರ್ 2 ರಂದು ಶ್ರೀ ಗಣೇಶ ಪೂಜೆ, ಕಲಶ ಪುಣ್ಯಾವಾಚನ, ದೇವಿಗೆ ಪಂಚಾಮೃತ ಅಭಿಷೇಕ, ವಸ್ತ್ರಾಲಂಕಾರ-ಶೃಂಗಾರ, ಸಹಸ್ರನಾಮಾವಳಿಯೊಂದಿಗೆ ಸಹಸ್ರಪುಷ್ಪ ಅರ್ಪಣೆ, ಮಹಾಆರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಇದರ ಜೊತೆಗೆ, ನವರಾತ್ರಿಯ ಇತರ ದಿನಗಳಲ್ಲಿ ಬೆಳಿಗ್ಗೆ 4 ಗಂಟೆಗೆ ದೇವಿಗೆ ಮಹಾಭಿಷೇಕ ಮತ್ತು ಶೃಂಗಾರ ವಿಧಿಗಳು ನಡೆಯಲಿವೆ. ಬೆಳಿಗ್ಗೆ 5.30, ಮಧ್ಯಾಹ್ನ 12 ಮತ್ತು ಸಂಜೆ 7.30 ಕ್ಕೆ ದೇವಿಯ ಆರತಿ ನಡೆಯಲಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”