ಕುಟುಂಬದಿಂದ ಬೇರ್ಪಡಲು ಪತಿಯ ಮೇಲೆ ಒತ್ತಡ ಹೇರುವುದು ಮಾನಸಿಕ ಹಿಂಸೆ! – Delhi High Court Order

ದೆಹಲಿ – ಪತಿಯ ಮೇಲೆ ಆತನ ಕುಟುಂಬದಿಂದ ಸಂಬಂಧ ಕಡಿದುಕೊಳ್ಳಲು ನಿರಂತರವಾಗಿ ಒತ್ತಡ ಹೇರುವುದು ಮಾನಸಿಕ ಹಿಂಸೆಯಾಗಿದ್ದು, ಇದು ವಿಚ್ಛೇದನಕ್ಕೆ ಕಾರಣವಾಗಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಪತಿಯನ್ನು ಪದೇ ಪದೇ ಅವಮಾನಿಸುವುದು, ಕೆಲಸದ ಸ್ಥಳಗಳಲ್ಲಿ ಸಹೋದ್ಯೋಗಿಗಳ ಮತ್ತು ವರಿಷ್ಠ ಅಧಿಕಾರಿಗಳೆದುರು ಅವನನ್ನು ನಿಂದಿಸುವುದು ಮತ್ತು ಪೊಲೀಸರಲ್ಲಿ ಸುಳ್ಳು ದೂರು ನೀಡುವುದು, ಇದು ಕೂಡ ಮನಸಿಕ ಹಿಂಸೆಯ ವ್ಯಾಪ್ತಿಗೆ ಬರುತ್ತದೆ, ಎಂದು ದೆಹಲಿ ಉಚ್ಚ ನ್ಯಾಯಾಲಯ ಸೆಪ್ಟೆಂಬರ್ 19ರಂದು ತೀರ್ಪಿನ ಸಮಯದಲ್ಲಿ ಹೇಳಿದೆ.

ನ್ಯಾಯಮೂರ್ತಿಗಳಾದ ಅನಿಲ್ ಖೇತರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪತಿಯ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುತ್ತಾ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಿತು.