|

ಶಿಮ್ಲಾ (ಹಿಮಾಚಲ ಪ್ರದೇಶ) – ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತ ಸಂಭವಿಸಿದ್ದು, ಜೀವ ಮತ್ತು ಆಸ್ತಿಪಾಸ್ತಿಗೆ ಭಾರಿ ಹಾನಿಯಾಗಿದೆ. ಕಳೆದ 24 ಗಂಟೆಗಳಿಂದ ರಾಜಧಾನಿ ಶಿಮ್ಲಾ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಸುತ್ತದೆ.
1. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 6 ಜಿಲ್ಲೆಗಳಿಗೆ ಅತಿ ಹೆಚ್ಚಿನ ಜಾಗರೂಕತೆಯ ಎಚ್ಚರಿಕೆ (ರೆಡ್ ಅಲರ್ಟ್) ನೀಡಿದೆ. ಶಿಮ್ಲಾ, ಸೋಲನ್, ಸಿರ್ಮೌರ್, ಬಿಲಾಸ್‌ಪುರ್, ಕುಲ್ಲು, ಚಂಬಾ, ಕಾಂಗಡಾ, ಊನಾ ಮತ್ತು ಹಮೀರ್‌ಪುರ್ ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
2. ಶಿಮ್ಲಾದ ಜಂಗಾ ಪ್ರದೇಶದಲ್ಲಿ ಭೂಕುಸಿತದಿಂದಾಗಿ ಒಂದು ಮನೆ ಕುಸಿದು ಬಿದ್ದಿದ್ದು, ಅದರಲ್ಲಿ ಸಿಲುಕಿ ವಿರೇಂದ್ರ ಕುಮಾರ್ (35 ವರ್ಷ) ಮತ್ತು ಅವರ 10 ವರ್ಷದ ಮಗಳು ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ಅವರ ಪತ್ನಿ ಮನೆಯಿಂದ ಹೊರಗಿದ್ದ ಕಾರಣ ಅದೃಷ್ಟವಶಾತ್ ಬದುಕುಳಿದರು. ಮತ್ತೊಂದು ಘಟನೆಯಲ್ಲಿ, ಕೋಟ್ಖಾಯ್‌ನ ಚೋಲ್ ಗ್ರಾಮದಲ್ಲಿ ಭೂಕುಸಿತದಿಂದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
3. ರಾಜ್ಯದ ಹಲವು ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 662 ರಸ್ತೆಗಳು ಬಂದ್ ಆಗಿವೆ. ಸಂಚಾರ ಸ್ಥಗಿತಗೊಂಡಿದ್ದು, ಹಲವೆಡೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಂಡಿದೆ. ಅಂದಾಜು 985 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಮತ್ತು 495 ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿವೆ.
4. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಆಗಸ್ಟ್ 24 ರಿಂದ 31 ರವರೆಗಿನ ಅವಧಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಸರಾಸರಿಗಿಂತ ಶೇಕಡ 291 ರಷ್ಟು ಹೆಚ್ಚು ಮಳೆ ದಾಖಲಾಗಿದೆ. ವಿಶೇಷವಾಗಿ ಚಂಬಾ ಜಿಲ್ಲೆಯಲ್ಲಿ ಶೇಕಡ 589, ಕುಲ್ಲುದಲ್ಲಿ ಶೇಕಡ 458, ಶಿಮ್ಲಾದಲ್ಲಿ ಶೇಕಡ 349 ಮತ್ತು ಲಾಹೌಲ್-ಸ್ಪಿಟಿಯಲ್ಲಿ ಶೇಕಡ 369 ಕಿಂತಲು ಹೆಚ್ಚು ಮಳೆಯಾಗಿದೆ. ಇಡೀ ಆಗಸ್ಟ್ ತಿಂಗಳನ್ನು ಪರಿಗಣಿಸಿದರೆ, ಈ ವರ್ಷ ಹಿಮಾಚಲದಲ್ಲಿ 440 ಮಿ.ಮೀ. ಮಳೆಯಾಗಿದ್ದು, ಇದು ಸರಾಸರಿಗಿಂತ ಶೇಕಡ 72 ರಷ್ಟು ಹೆಚ್ಚಾಗಿದೆ.
5. ಮಳೆಯಿಂದಾಗಿ ಬೆಟ್ಟದ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮಣ್ಣು ಮತ್ತು ಕಲ್ಲುಗಳು ವಾಹನಗಳು ಮತ್ತು ಬಸ್‌ಗಳ ಮೇಲೆ ಬಿದ್ದಿವೆ. ಕೆಲವು ವಾಹನಗಳು ಮಣ್ಣಿನಡಿ ಹೂತುಹೋಗಿವೆ ಮತ್ತು ಒಂದು ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.
6. ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗಡಾದ ಪೋಂಗ್ ಅಣೆಕಟ್ಟಿನಿಂದ 1 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಬೇಕಾಯಿತು.
7. ಕುಲ್ಲು ಜಿಲ್ಲೆಯ ನಗ್ಗರ ಕಾಲುವೆಯಲ್ಲಿ ಇಬ್ಬರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ; ಆದರೆ ಪಾಂಗಿ ಪ್ರದೇಶದಲ್ಲಿ ರಸ್ತೆಗಳು ಬಂದ್ ಆಗಿರುವ ಕಾರಣ ಮಹಿಳೆಯರು ಸೇರಿದಂತೆ 32 ಜನರು ಪ್ರಸ್ತುತ ತ್ರಿಲೋಕಿನಾಥ ದೇವಸ್ಥಾನದ ಧರ್ಮಶಾಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಅನೇಕ ಹಳ್ಳಿಗಳಲ್ಲಿ ಮನೆಗಳ ಮೇಲೆ ಬೆಟ್ಟಗಳು ಕುಸಿಯುವ ಅಪಾಯ ಎದುರಾಗಿದ್ದು, ಭೂಮಿ ಕುಸಿಯುವ ಘಟನೆಗಳೂ ವರದಿಯಾಗಿವೆ.
8. ಜನರು ಜಾಗರೂಕರಾಗಿರಬೇಕು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ಎಂದು ಆಡಳಿತವು ಮನವಿ ಮಾಡಿದೆ. ರಕ್ಷಣೆ ಮತ್ತು ಮರುನಿರ್ಮಾಣ ಕಾರ್ಯಗಳು ನಡೆಯುತ್ತಿದ್ದರೂ, ಮಳೆಯ ತೀವ್ರತೆ ಕಡಿಮೆಯಾಗುವವರೆಗೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ ಕಡಿಮೆ ಇದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!