‘ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರನ್ನು ಬಂಧಿಸಬೇಕು!’ – ಜಮಿಯತ್ ಉಲೆಮಾ-ಎ-ಹಿಂದ್‌

ಮಿಯಾ (ಬಂಗಾಲಿ) ಮುಸಲ್ಮಾನರನ್ನು ಗುರಿಯಾಗಿಸಿದ್ದಕ್ಕಾಗಿ ಜಮಿಯತ್ ಉಲೆಮಾ-ಎ-ಹಿಂದ್‌ನ ಬೇಡಿಕೆ

ಗುವಾಹಟಿ (ಅಸ್ಸಾಂ) – ಜಮಿಯತ್ ಉಲೆಮಾ-ಎ-ಹಿಂದ್ ಸಂಘಟನೆಯು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಮತ್ತು ಮಿಯಾ ಮುಸಲ್ಮಾನರನ್ನು (ಬಂಗಾಲಿ ಮುಸಲ್ಮಾನರನ್ನು) ಗುರಿಯಾಗಿಸಿದ್ದಕ್ಕಾಗಿ ಅವರನ್ನು ಬಂಧಿಸಲು ಒತ್ತಾಯಿಸಿದೆ. ಜಮಿಯತ್ ಉಲೆಮಾ-ಎ-ಹಿಂದ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬೇಡಿಕೆಗಳನ್ನು ಮುಂದಿಟ್ಟಿದೆ. ಇದಲ್ಲದೆ, ಜಮಿಯತ್ ಪ್ಯಾಲೆಸ್ಟೈನ್ ಬಗ್ಗೆ ಒಂದು ನಿರ್ಣಯವನ್ನು ಅಂಗೀಕರಿಸಿ, ಇಸ್ರೇಲ್‌ನ ಆಕ್ರಮಣವನ್ನು ಗಾಜಾದಲ್ಲಿನ ‘ನರಮೇಧ’ ಎಂದು ಕರೆದಿದೆ.

ಅಸ್ಸಾಂನಲ್ಲಿ ಅತಿಕ್ರಮಣ ಮಾಡಿದ ೫೦ ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಿದ್ದಕ್ಕಾಗಿ ಜಮಿಯತ್ ಈ ನಿರ್ಣಯವನ್ನು ಅಂಗೀಕರಿಸಿದೆ. ಈ ಕುಟುಂಬಗಳಲ್ಲಿ ಬಹುಪಾಲು ಮಿಯಾ ಮುಸಲ್ಮಾನರಿದ್ದಾರೆ. ಅಸ್ಸಾಂನಲ್ಲಿನ ಪ್ರಸ್ತುತ ಕ್ರಮಗಳು ಧಾರ್ಮಿಕ ಪೂರ್ವಾಗ್ರಹ ಮತ್ತು ದ್ವೇಷದಿಂದ ಪ್ರೇರಿತವಾಗಿವೆ ಎಂದು ಜಮಿಯತ್ ಆರೋಪಿಸಿದೆ. ‘ಈ ರೀತಿಯ ಕ್ರಮಗಳು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ’ ಎಂದು ಮಿಯಾ ಮುಸಲ್ಮಾನರ ಪುನರ್ವಸತಿಗೆ ಒತ್ತಾಯಿಸಿದೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರಿಗೆ ಎಲ್ಲಾ ರೀತಿಯ ಸಹಾಯ ಮಾಡುವ ಜಮಿಯತ್ ಉಲೆಮಾ-ಎ-ಹಿಂದ್ ಮೇಲೆ ಈಗ ನಿಷೇಧ ಹೇರಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯಿಸಬೇಕು!