|
(ಚಿಕನ್ ನೆಕ್ ಕಾರಿಡಾರ್ ಎಂದರೆ ಬಂಗಾಳದಲ್ಲಿರುವ ಸುಮಾರು ೨೨ ಕಿ.ಮೀ ಉದ್ದದ ಅತ್ಯಂತ ಕಿರಿದಾದ ಭೂಪ್ರದೇಶ. ಈಶಾನ್ಯದ ೭ ರಾಜ್ಯಗಳನ್ನು ಭಾರತದ ಇತರ ಭಾಗಗಳಿಗೆ ಸಂಪರ್ಕಿಸುವ ಏಕೈಕ ಭೂ ಮಾರ್ಗ ಇದಾಗಿದೆ.)

ಗೌಹಾಟಿ (ಅಸ್ಸಾಂ) – ಅನೇಕ ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಇಲ್ಲಿಗೆ ಬಂದಿರುವ ಭಾರತೀಯ ನಾಗರಿಕರನ್ನು ಪ್ರಚೋದಿಸುವ ಮೂಲಕ ‘ಚಿಕನ್ ನೆಕ್ ಕಾರಿಡಾರ್’ ಅನ್ನು ದುರ್ಬಲಗೊಳಿಸುವ ಉದ್ದೇಶದಿಂದ ಬಾಂಗ್ಲಾದೇಶದ ಕಟ್ಟರವಾದಿಗಳ ಗುಂಪು ಪ್ರಯತ್ನಿಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Certain Bangladesh based radicals are inciting people, who have come from that country and now settled in India’s Chicken Neck corridor, to amplify their fundamentalist ideology.
This is a dangerous game plan. pic.twitter.com/jlC54ZWZrx
— Himanta Biswa Sarma (@himantabiswa) August 22, 2025
ಮುಖ್ಯಮಂತ್ರಿ ಸರಮಾ ಅವರು, ಧುಬ್ರಿ ಜಿಲ್ಲೆಯ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಲ್ಲಿ ಬಾಂಗ್ಲಾದೇಶದ ಕಟ್ಟರವಾದಿಗಳ ಗುಂಪು ಸ್ಥಳೀಯರನ್ನು ಪ್ರಚೋದಿಸಿ, ಬಾಂಗ್ಲಾದೇಶಕ್ಕೆ ನಿಷ್ಠೆ ತೋರಿಸಲು ಪ್ರೇರೇಪಿಸುತ್ತಿದೆ. ಹಾಗೂ ಈ ಜನರು ಬಹಳ ಹಿಂದೆಯೇ ಬಾಂಗ್ಲಾದೇಶದಿಂದ ವಲಸೆ ಬಂದವರು. ಚಿಕನ್ ನೆಕ್ ಮತ್ತು ಅದರ ಸುತ್ತಮುತ್ತ ವಾಸಿಸುವ ಹೆಚ್ಚಿನ ಜನರು ಮೂಲತಃ ಬಾಂಗ್ಲಾದೇಶದವರಾಗಿದ್ದು, ನಂತರ ಭಾರತೀಯ ಪೌರತ್ವ ಪಡೆದಿದ್ದಾರೆ. ಕೆಲವು ಅಂಶಗಳು ಈ ಜನರಿಗೆ ಅವರ ಮೂಲ ಗುರುತನ್ನು ನೆನಪಿಸುತ್ತಿವೆ ಮತ್ತು ಅವರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿವೆ. ಇದು ಭವಿಷ್ಯದಲ್ಲಿ ಅತ್ಯಂತ ಗಂಭೀರ ಭದ್ರತಾ ಬೆದರಿಕೆಯಾಗಬಹುದು. ಎರಡೂ ದೇಶಗಳ ನಡುವೆ ಸಂಘರ್ಷ ಉಂಟಾದರೆ ಈ ಜನರ ನಿಷ್ಠೆ ಯಾರ ಕಡೆ ಇರುತ್ತದೆ? ಎಂದು ಅವರು ಪ್ರಶ್ನಿಸಿದರು.

ಸಂಪಾದಕೀಯ ನಿಲುವುಇಂತಹ ಜನರ ಮೇಲೆ ಮುಖ್ಯಮಂತ್ರಿ ಸರಮಾ ಕಠಿಣ ಕ್ರಮ ಕೈಗೊಂಡು ದೇಶವನ್ನು ಸುರಕ್ಷಿತವಾಗಿಸಬೇಕು ಎಂದು ದೇಶಪ್ರೇಮಿಗಳು ಬಯಸುತ್ತಾರೆ ಮತ್ತು ಸರಮಾ ಅದನ್ನು ಮಾಡಿಯೇ ತೀರುತ್ತಾರೆ ಇದರಲ್ಲಿ ಸಂಶಯವಿಲ್ಲ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!