ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ: 10 ಮಂದಿಗೆ ಗಾಯ

ನೂಹ (ಹರಿಯಾಣ) – ನೂಹ ಜಿಲ್ಲೆಯ ಫಿರೋಜಪುರ್ ಝಿರಕಾ ಪ್ರದೇಶದಲ್ಲಿ ಮುಸಲ್ಮಾನರು ಸಣ್ಣ ಕಾರಣಕ್ಕೆ ಹಿಂದೂಗಳ ಮೇಲೆ ದಾಳಿ ಮಾಡಿ ಅವರನ್ನು ಥಳಿಸಿ ಅವರ ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದಕ್ಕೆ ಹಿಂದೂಗಳಿಂದಲೂ ನಂತರ ಪ್ರತ್ಯುತ್ತರ ನೀಡಲಾಯಿತು. ಈ ಹಿಂಸಾಚಾರದಲ್ಲಿ ಎರಡೂ ಕಡೆಯಿಂದ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು; ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಕಾರಣ ದೊಡ್ಡ ಪೊಲೀಸ್ ಪಡೆಯನ್ನು ಕರೆಸಲಾಯಿತು. ಪ್ರಸ್ತುತ ಇಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.
ಇಲ್ಲಿನ ಮುಡಾಕಾ ಗ್ರಾಮದಲ್ಲಿ ಹತ್ತಿರದ ಗ್ರಾಮದ ಇಸ್ರಾ ಎಂಬ ಮುಸಲ್ಮಾನ ಯುವಕ ತನ್ನ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ತಂಪು ಪಾನೀಯ ಕುಡಿಯುತ್ತಿದ್ದನು. (ಮುಸಲ್ಮಾನರ ಉದ್ಧಟತನ! – ಸಂಪಾದಕರು) ಅದೇ ಸಮಯದಲ್ಲಿ ಗ್ರಾಮದ ಸಮಯ ಸಿಂಗ್ ತನ್ನ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದು ಇಸ್ರಾನಿಗೆ ವಾಹನವನ್ನು ಪಕ್ಕಕ್ಕೆ ಸರಿಸಿ ದಾರಿಯನ್ನು ಖಾಲಿ ಮಾಡಲು ಹೇಳಿದನು. ಇದರಿಂದಾಗಿ ವಾಗ್ವಾದ ಉಂಟಾಯಿತು ಮತ್ತು ಇಸ್ರಾ ತಂಪು ಪಾನೀಯದ ಗಾಜಿನ ಬಾಟಲಿಯನ್ನು ಸಮಯನ ತಲೆಗೆ ಹೊಡೆದನು. ಇದರಿಂದ ಸಮಯ ಇವನ ತಲೆ ಒಡೆಯಿತು. ಅವನು ತನ್ನ ಸಹೋದರನನ್ನು ಅಲ್ಲಿಗೆ ಕರೆಸಿದಾಗ, ಇಸ್ರಾ ಅವನ ಮೇಲೂ ಗುದ್ದಲಿಯಿಂದ ದಾಳಿ ಮಾಡಿದನು. ಅವನು ಸಹ ಗಾಯಗೊಂಡ ನಂತರ ಸುತ್ತಮುತ್ತಲಿನ ಜನರು ಜಮಾಯಿಸಿ ಕಲ್ಲು ತೂರಾಟವನ್ನು ಪ್ರಾರಂಭಿಸಿದರು. ನಂತರ ಮುಸಲ್ಮಾನರು ಕೂಡ ಕಲ್ಲು ತೂರಾಟವನ್ನು ಪ್ರಾರಂಭಿಸಿದರು. ಕೆಲವರು ಇಸ್ರಾನ ಮನೆಯೊಳಗೆ ನುಗ್ಗಿ ಬೆಂಕಿ ಹಚ್ಚಿದರು. ಆದ್ದರಿಂದ ಮುಸಲ್ಮಾನರು ಕೆಲವು ಹಿಂದೂಗಳ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಪಾದಕೀಯ ನಿಲುವು
|
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ