ಛತ್ತೀಸ್‌ಗಢ ವಕ್ಫ್ ಮಂಡಳಿಯಿಂದ ಪ್ರತಿ ಮಸೀದಿ, ಮದರಸಾ ಮತ್ತು ದರ್ಗಾಗಳಿಗೆ ಆದೇಶ

ರಾಯಪುರ (ಛತ್ತೀಸ್‌ಗಢ) – ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಛತ್ತೀಸ್‌ಗಢದ ಎಲ್ಲಾ ಮದರಸಾ, ಮಸೀದಿ ಮತ್ತು ದರ್ಗಾಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ. ರಾಜ್ಯದಲ್ಲಿ 3,287 ಮಸೀದಿಗಳಿವೆ. ಈ ಕುರಿತು ಮಂಡಳಿಯ ಅಧ್ಯಕ್ಷ ಡಾ. ಸಲೀಂ ರಾಜ್ ಮಾತನಾಡಿ, ಎಲ್ಲಾ ಮಸೀದಿಗಳು ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ, ಅದರ ಫೋಟೋವನ್ನು ಮಂಡಳಿಯ ಪೋರ್ಟಲ್‌ಗೆ (ವೆಬ್‌ಸೈಟ್‌ಗೆ) ಕಳುಹಿಸುವುದು ಅವಶ್ಯಕವಾಗಿದೆ. ಫೋಟೋದ ಕೆಳಗೆ ಸ್ಥಳ ಮತ್ತು ಯಾವ ಸಮಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು ಎಂಬುದನ್ನು ದಾಖಲಿಸಿ ಕಳುಹಿಸಬೇಕು. ಯಾವ ಮಸೀದಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲವೋ, ಅದನ್ನು ಪಾಕಿಸ್ತಾನಿ ಎಂದು ಪರಿಗಣಿಸಲಾಗುವುದು.
ಸಂಪಾದಕೀಯ ನಿಲುವುಇಂತಹ ಆದೇಶವನ್ನು ದೇಶದ ಪ್ರತಿಯೊಂದು ಮಸೀದಿ, ಮದರಸಾ ಮತ್ತು ದರ್ಗಾಗಳಿಗೆ ನೀಡಬೇಕು! ನಿಜವೆಂದರೆ, ಇಂತಹ ಆದೇಶ ಏಕೆ ನೀಡಬೇಕಾಗಿದೆ ಎಂಬುದನ್ನು ಸಹ ವಿಚಾರ ಮಾಡುವುದು ಅವಶ್ಯಕವಾಗಿದೆ. ಆದೇಶ ನೀಡದಿದ್ದರೂ ಧ್ವಜ ಹಾರಿಸದವರನ್ನು ‘ಪಾಕಿಸ್ತಾನಿ’ಗಳೆಂದು ಘೋಷಿಸಿ, ಆ ಕಟ್ಟಡಗಳನ್ನು ವಶಪಡಿಸಿಕೊಂಡು, ಸಂಬಂಧಿತ ಮುಖ್ಯಸ್ಥರನ್ನು ಜೈಲಿಗೆ ಹಾಕಬೇಕು! |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!