ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರ ಪತ್ನಿಯಿಂದ ಭಯೋತ್ಪಾದನಾ ವಿರೋಧಿ ದಳದ ವಾಸ್ತವ ಬಹಿರಂಗ!

ಮುಂಬಯಿ – ನನ್ನ ಪತಿ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರನ್ನು ಭಯೋತ್ಪಾದನಾ ವಿರೋಧಿ ದಳವು ಕಾನೂನುಬಾಹಿರವಾಗಿ ಬಂಧಿಸಿ, ಮಾಲೇಗಾಂವ್ ಬಾಂಬ್ ಸ್ಫೋಟದ ಬಗ್ಗೆ ವಿಚಾರಣೆ ನಡೆಸುವ ಬದಲು ಜಾಕೀರ್ ನಾಯಕ್, ನಕಲಿ ನೋಟುಗಳ ವ್ಯವಸ್ಥೆ, ದಾವೂದ್ ಇಬ್ರಾಹಿಂ ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐ.ಎಸ್.ಐ. ಕುರಿತು ಅವರು ತಯಾರಿಸಿದ್ದ ವರದಿಗಳ ಬಗ್ಗೆ ವಿಚಾರಣೆ ನಡೆಸಿತು. ಕರ್ನಲ್ ಪುರೋಹಿತ್ ಅವರು ಸೇನಾ ಗುಪ್ತಚರ ವಿಭಾಗದಲ್ಲಿ (‘ಆರ್ಮಿ ಇಂಟೆಲಿಜೆನ್ಸ್’ನಲ್ಲಿ) ಕೆಲಸ ಮಾಡುತ್ತಿದ್ದರಿಂದ, 2005 ರಿಂದ 2007 ರ ಅವಧಿಯಲ್ಲಿ ಈ ವಿಷಯಗಳ ಬಗ್ಗೆ ವರದಿಗಳನ್ನು ಸಿದ್ಧಪಡಿಸಿದ್ದರು. ಆದ್ದರಿಂದ ಈ ತನಿಖಾ ದಳದ ಅಧಿಕಾರಿಗಳು ಆ ವರದಿಗಳ ಮೂಲಗಳ ಬಗ್ಗೆ ಅವರಲ್ಲಿ ವಿಚಾರಣೆ ನಡೆಸಿದರು ಎಂದು ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರ ಪತ್ನಿ ಸೌ. ಅಪರ್ಣಾ ಪುರೋಹಿತ್ ಅವರು ಆಘಾತಕಾರಿ ಮಾಹಿತಿ ನೀಡಿದ್ದಾರೆ. ಒಂದು ವೃತ್ತಪತ್ರಿಕೆಯ ಪ್ರತಿನಿಧಿಯು ಸೌ. ಅಪರ್ಣಾ ಅವರ ಸಂದರ್ಶನ ಮಾಡಿದಾಗ ಅವರು ಈ ವಿಷಯ ತಿಳಿಸಿದ್ದರು. ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕರ್ನಲ್ ಪುರೋಹಿತ್ ಅವರನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ.
ಸಂದರ್ಶನದಲ್ಲಿ ಸೌ. ಅಪರ್ಣಾ ಪುರೋಹಿತ್ ಅವರು ಮಂಡಿಸಿದ ಆಘಾತಕಾರಿ ವಾಸ್ತವ:
1. 2008 ರಲ್ಲಿ ಕರ್ನಲ್ ಅವರು ಒಂದು ರಹಸ್ಯ ಕಾರ್ಯಾಚರಣೆ ನಡೆಸಿದ ನಂತರ, ಅವರ ವಿರುದ್ಧ ಪಿತೂರಿ ಮಾಡಿ ‘ಥರ್ಡ್ ಡಿಗ್ರಿ ಟಾರ್ಚರ್’ ನೀಡಲಾಯಿತು. ಈ ಹಲ್ಲೆಯಿಂದ ಅವರ ಮೊಣಕಾಲು ಮುರಿದಿತ್ತು.
2. 2008 ರ ಅಕ್ಟೋಬರ್ 29 ರಂದು ಕರ್ನಲ್ ಅವರನ್ನು ಕಾನೂನುಬಾಹಿರವಾಗಿ ಕರೆದೊಯ್ಯಲಾಯಿತು. ಅವರ ಬಂಧನದ ಬಗ್ಗೆ ನನಗೂ, ಅವರ ಹಿರಿಯ ಅಧಿಕಾರಿಗಳಿಗೂ ಮತ್ತು ಸೇನೆಗೂ ಏನೂ ತಿಳಿದಿರಲಿಲ್ಲ. ನಮ್ಮೆಲ್ಲರನ್ನು ಕತ್ತಲಲ್ಲಿ ಇಡಲಾಗಿತ್ತು. ನವೆಂಬರ್ 4 ರಂದು ನನಗೆ ಕರೆ ಮಾಡಿ ಕರ್ನಲ್ ಪುರೋಹಿತ್ ಅವರನ್ನು ಬಂಧಿಸಲಾಗಿದೆ, ನೀವು ನಾಸಿಕ್ ನ್ಯಾಯಾಲಯಕ್ಕೆ ಬನ್ನಿ ಎಂದು ತಿಳಿಸಲಾಯಿತು. ಮಧ್ಯಪ್ರದೇಶದ ಪಚಮಢಿಯಿಂದ ಅದೇ ದಿನ ನಾಸಿಕ್ ತಲುಪುವುದು ಸಾಧ್ಯವಿಲ್ಲದ ಕಾರಣ ನಾನು ಅವರನ್ನು ಭೇಟಿಯಾಗಲು ಆಗಲಿಲ್ಲ.
3. ಕರ್ನಲ್ ಪುರೋಹಿತ್ ಅವರಿಗೆ ದೈಹಿಕ ಹಿಂಸೆ ನೀಡಲಾಗಿತ್ತು. ಆ ಬಗ್ಗೆ ನಾವು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೆವು.
4. ಮಾಲೇಗಾಂವ್ ಬಾಂಬ್ ಸ್ಫೋಟದ ಪಿತೂರಿಯಲ್ಲಿ ತಮ್ಮ ಪಾತ್ರವಿದೆ ಎಂದು ಒಪ್ಪಿಕೊಳ್ಳಲು ಅವರ ಮೇಲೆ ಒತ್ತಡ ಹೇರಲಾಗುತ್ತಿತ್ತು.
5. ತನಿಖೆಯ ಸಮಯದಲ್ಲಿ ಕರ್ನಲ್ ಪುರೋಹಿತ್ ಮತ್ತು ಒಬ್ಬ ಸುಬೇದಾರರು ಸಾಕ್ಷಿ ನುಡಿದ ಪ್ರಕಾರ, ಅವರು ಶೇಖರ್ ಬಾಗಡೆ ಎಂಬ ಭಯೋತ್ಪಾದನಾ ವಿರೋಧಿ ದಳದ ಅಧಿಕಾರಿ ಆರ್.ಡಿ.ಎಕ್ಸ್. ಇಡುತ್ತಿರುವುದನ್ನು ನೋಡಿದ್ದರು. ಈ ಸಾಕ್ಷಿ, ಕರ್ನಲ್ ಅವರ ಮೇಲೆ ಆರ್.ಡಿ.ಎಕ್ಸ್. ಸಂಗ್ರಹಿಸಿದ ಆರೋಪವನ್ನು ತಳ್ಳಿಹಾಕಲು ಸಹಾಯಕವಾಯಿತು. ಈ ಪ್ರಕರಣದಲ್ಲಿ ಶೇಖರ್ ಬಾಗಡೆ ಅವರ ವಿಚಾರಣೆ ನಡೆಯಬೇಕಿತ್ತು. ಇದನ್ನೆಲ್ಲಾ ಯಾಕೆ ಮಾಡಲಾಯಿತು? ಎಂಬುದನ್ನು ಕಂಡುಹಿಡಿಯುವುದು ಅವಶ್ಯಕವಾಗಿತ್ತು.
ಸಂಪಾದಕೀಯ ನಿಲುವುಮಾಲೇಗಾಂವ್ ಬಾಂಬ್ ಸ್ಫೋಟದ ತೀರ್ಪಿನ ನಂತರ ಬಹಿರಂಗವಾಗುತ್ತಿರುವ ಪೊಲೀಸ್ ಇಲಾಖೆಯ ಆಘಾತಕಾರಿ ವಾಸ್ತವದ ಬಗ್ಗೆ ಸರ್ಕಾರ ತನಿಖೆ ನಡೆಸಿ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು ಮತ್ತು ತಪ್ಪಿತಸ್ಥ ಪೊಲೀಸರಿಗೆ ಜೀವಾವಧಿ ಶಿಕ್ಷೆ ನೀಡಬೇಕು! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ