
ಮಿರಾಜ್ (ಸಾಂಗ್ಲಿ ಜಿಲ್ಲೆ), ಆಗಸ್ಟ್ ೧೧ (ವಾರ್ತೆ) – ಶ್ರೀರಾಮ ಸೇನೆಯ ಮುಖ್ಯಸ್ಥರೂ ಮತ್ತು ಪ್ರಖರ ಹಿಂದುತ್ವನಿಷ್ಠರಾದ ಶ್ರೀ. ಪ್ರಮೋದ ಮುತಾಲಿಕ ಅವರು ಆಗಸ್ಟ್ ೧೦ ರಂದು ಬ್ರಾಹ್ಮಣಪುರಿಯ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಈ ವೇಳೆ, ಹಿಂದೂ ಜನಜಾಗೃತಿ ಸಮಿತಿಯ ಸಾಂಗ್ಲಿ ಜಿಲ್ಲಾ ಸಂಮನ್ವಯಕ ಶ್ರೀ. ಸಂತೋಷ ದೇಸಾಯಿ ಅವರು ಆಶ್ರಮದ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಶ್ರೀ. ಪ್ರಮೋದ ಮುತಾಲಿಕ ಅವರು ಆಶ್ರಮ ನೋಡಿ ಸಂತಸ ವ್ಯಕ್ತಪಡಿಸಿದರು ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠಾವಲೆ ಅವರು ಈ ಹಿಂದೆ ತಂಗಿದ್ದ ಕೋಣೆಗೆ ಭಾವಪೂರ್ಣ ದರ್ಶನ ಮಾಡಿ, ಅಲ್ಲಿ ಕುಳಿತು ನಾಮಜಪ ಮಾಡಿದರು. ಮೇ ೧೮ ರಂದು ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಶ್ರೀ. ಪ್ರಮೋದ ಮುತಾಲಿಕ ಅವರಿಗೆ ‘ಸನಾತನ ಧರ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್