ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಅವರ ಉತ್ತರಾಖಂಡ ಪ್ರವಾಹದ ಕುರಿತ ಹೇಳಿಕೆ

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮವು ಪ್ರವಾಹದ ನೀರಿನೊಂದಿಗೆ ಬಂದ ಮಣ್ಣಿನಿಂದ ಸಂಪೂರ್ಣವಾಗಿ ಮುಚ್ಚಿಹೋಯಿತು. ಇದರಲ್ಲಿ ಹಲವು ಜನರು ಮೃತಪಟ್ಟಿರುವಾಗ, ಇದರ ಕುರಿತು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ. ಹಸನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು, ‘ಇದು ಅತ್ಯಂತ ಹೃದಯವಿದ್ರಾವಕ ಘಟನೆ. ಈ ವಿಪತ್ತುಗಳು ಏಕೆ ಬರುತ್ತವೆ ಎಂಬುದರ ಕಡೆಗೆ ಮೊದಲು ಗಮನ ನೀಡಬೇಕು. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇತರೆ ಧರ್ಮಗಳಿಗೆ (ಹಿಂದೂ ಧರ್ಮ ಹೊರತುಪಡಿಸಿ) ಯಾವುದೇ ಗೌರವ ನೀಡಲಾಗುವುದಿಲ್ಲ. ಯಾವುದೇ ಧಾರ್ಮಿಕ ಸ್ಥಳದ ಮೇಲೆ ಬುಲ್ಡೋಜರ್ ಚಲಾಯಿಸಬಾರದು. ಈ ಜಗತ್ತನ್ನು ನಡೆಸುವವನು ಬೇರೆ ಯಾರೋ ಇದ್ದಾನೆ ಮತ್ತು ಅವನ ನ್ಯಾಯವಾದಾಗ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
🗣️ SP MP S.T. Hasan on Uttarakhand floods:
“As bulldozers were run over prayer sites of other religions, the village of Dharali faced disaster.”
❓ And what causes disasters in Pakistan, Afghanistan, Bangladesh, or other Islamic nations?
Why not admit the truth, Hasan -… pic.twitter.com/12UIKlSopU
— Sanatan Prabhat (@SanatanPrabhat) August 9, 2025
ಈ ಹೇಳಿಕೆಯಿಂದ ಹಸನ್ ಅವರ ಮೇಲೆ ಟೀಕೆಗಳು ವ್ಯಕ್ತವಾದಾಗ, ಅವರು ಸ್ಪಷ್ಟನೆ ನೀಡುತ್ತಾ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪ್ರಾರ್ಥನಾ ಸ್ಥಳಗಳ ಮೇಲೆ ಬುಲ್ಡೋಜರ್ ಚಲಾಯಿಸಬಾರದು, ಬೇಕಿದ್ದರೆ ಆ ಸ್ಥಳವನ್ನು ಖಾಲಿ ಮಾಡಿಕೊಳ್ಳಬಹುದು. ಇಂತಹ ಸಮಯದಲ್ಲಿ ಮೇಲಿನ ಪರಮಾತ್ಮನ ಕೃಪೆ ಇರುವುದಿಲ್ಲ ಮತ್ತು ವಿಪತ್ತುಗಳು ನಿಲ್ಲುವುದಿಲ್ಲ. ಮೃತಪಟ್ಟವರೊಂದಿಗೆ ನಮ್ಮ ಸಹಾನುಭೂತಿ ಇದೆ; ಆದರೆ ಅಧಿಕಾರದಲ್ಲಿರುವವರು ಅರ್ಥಮಾಡಿಕೊಳ್ಳಬೇಕು, ಅದು ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್ ಯಾವುದೇ ಇರಲಿ, ಅವುಗಳಿಗೆ ಅವಮಾನವಾಗಬಾರದು. ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !