ಸಮಾಧಿ ಸ್ಥಳದ ಸಂರಕ್ಷಣೆಗಾಗಿ ಕಳೆದ 28 ವರ್ಷಗಳಲ್ಲಿ ಒಂದು ಪೈಸೆಯೂ ಸಿಕ್ಕಿಲ್ಲ, ಈಗ 20 ಕೋಟಿ ರೂ. ಸಿಗಲಿದೆ!

ಉದಯಪುರ (ರಾಜಸ್ಥಾನ) – ಜಿಲ್ಲೆಯ ಚಾವಂಡ ಗ್ರಾಮದಲ್ಲಿ ಹಿಂದೂಗಳ ಗೌರವಾನ್ವಿತ ಚಕ್ರವರ್ತಿ ಮಹಾರಾಣಾ ಪ್ರತಾಪ ಅವರ ಸಮಾಧಿ ಇದೆ. 1997ರಲ್ಲಿ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಮಾಧಿ ಸ್ಥಳದ ಜೀರ್ಣೋದ್ಧಾರ ಮಾಡಿದ ನಂತರ, ಕಳೆದ 28 ವರ್ಷಗಳಿಂದ ಸರಕಾರದಿಂದ ಅದಕ್ಕೆ ಒಂದು ನಯಾ ಪೈಸೆಯೂ ಸಿಕ್ಕಿಲ್ಲ. ಈಗ ರಾಜಸ್ಥಾನದ ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಅವರ ಸರಕಾರವು ‘ಪ್ರತಾಪ್ ಸರ್ಕಿಟ್’ ಎಂಬ ಅಭಿಯಾನವನ್ನು ಕೈಗೊಂಡಿದೆ. ಇದರ ಮೂಲಕ ರಾಜ್ಯದಲ್ಲಿರುವ ಮಹಾರಾಣಾ ಪ್ರತಾಪ್ ಅವರ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಮತ್ತು ಸುಧಾರಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ಆರಂಭಿಕ ಹಂತದಲ್ಲಿ 200 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಅದರಲ್ಲಿ 20 ಕೋಟಿ ರೂಪಾಯಿಗಳನ್ನು ಚಾವಂಡನ ಈ ಸಮಾಧಿ ಸ್ಥಳಕ್ಕೆ ಮೀಸಲಿಡಲಾಗಿದೆ. ಉದಯಪುರದ ‘ಪ್ರತಾಪ್ ಗೌರವ ಕೇಂದ್ರ’ದ ನಿರ್ದೇಶಕ ಅನುರಾಗ ಸಕ್ಸೇನಾ ಅವರು ‘ಸನಾತನ ಪ್ರಭಾತ’ಕ್ಕೆ ಈ ಮಾಹಿತಿಯನ್ನು ನೀಡಿದ್ದಾರೆ.

ಸಕ್ಸೇನಾ ಅವರು,

1. ಚಾವಂಡನಲ್ಲಿರುವ ಪ್ರತಾಪ ಅವರ ಸಮಾಧಿ ಸ್ಥಳವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಒಳ್ಳೆಯ ವಿಷಯ. ಏಕೆಂದರೆ ಯಾವುದೇ ಐತಿಹಾಸಿಕ ಸ್ಥಳವು ಇಲಾಖೆಯ ನಿಯಂತ್ರಣಕ್ಕೆ ಬಂದರೆ, ಪುರಾತತ್ವ ಇಲಾಖೆಯಾಗಲಿ ಅಥವಾ ಬೇರೆ ಯಾರೇ ಆಗಲಿ ಅದರ ನಿರ್ವಹಣೆಗಾಗಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಚಾವಂಡನಲ್ಲಿ ಒಂದು ಸ್ಥಳೀಯ ಸಮಿತಿಯು ಈ ಸಮಾಧಿಯನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ.
2. ರಾಜ್ಯದ ರಾಜಸಮಂದ ಜಿಲ್ಲೆಯಲ್ಲಿರುವ ಕುಂಭಲಗಡ ಕೋಟೆಯು ಮಹಾರಾಣಾ ಪ್ರತಾಪ ಅವರ ಜನ್ಮಸ್ಥಳವಾಗಿದೆ. ಕುಂಭಲಗಡ ಕೋಟೆಯ ಗೋಡೆಯು ವಿಶ್ವದ ಎರಡನೇ ಅತಿ ಉದ್ದದ ಗೋಡೆಯಾಗಿದೆ. ಈ ಕೋಟೆಯು ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿದ್ದು, ಗೋಡೆಯ ಸ್ಥಿತಿ ಹದಗೆಟ್ಟಿದ್ದರೂ ಇಲಾಖೆ ಏನನ್ನೂ ಮಾಡುತ್ತಿಲ್ಲ.
3. ಕಳೆದ 70-75 ವರ್ಷಗಳಲ್ಲಿ ಮಹಾರಾಣಾ ಪ್ರತಾಪ ಅವರ ಕೋಟೆಗಳು ಮತ್ತು ಇತರ ಐತಿಹಾಸಿಕ ಸ್ಮಾರಕಗಳ ಸ್ಥಿತಿ ಹದಗೆಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾಜಪ ಸರಕಾರವು ‘ಪ್ರತಾಪ ಸರ್ಕಿಟ್’ ಎಂಬ ಅಭಿಯಾನವನ್ನು ಕೈಗೊಂಡಿದೆ. ಇದರ ಅಡಿಯಲ್ಲಿ ಅವರ 40 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಅವರ ಸ್ಮಾರಕಗಳಿಗೆ ಪುನರುಜ್ಜೀವನ ದೊರೆಯುತ್ತದೆ ಎಂದು ಆಶಿಸಲಾಗಿದೆ.
‘ಪ್ರತಾಪ ಗೌರವ ಕೇಂದ್ರ’ದ ಕಾರ್ಯ!ರಾಜಸ್ಥಾನದ ಉದಯಪುರದಲ್ಲಿರುವ ‘ಪ್ರತಾಪ ಗೌರವ ಕೇಂದ್ರ’ವು ಮಹಾರಾಣಾ ಪ್ರತಾಪ್ ಅವರ ವೈಭವಯುತ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಅವರ ಜೀವನದ ಕುರಿತಾದ ಮಿಥ್ಯ ಇತಿಹಾಸವನ್ನು ಖಂಡಿಸುವುದರ ಜೊತೆಗೆ ಐತಿಹಾಸಿಕ ಸಂಶೋಧನೆಯ ಮಹತ್ವದ ಕೆಲಸವನ್ನು ಈ ಕೇಂದ್ರದ ಮೂಲಕ ಮಾಡಲಾಗುತ್ತದೆ. ಅಲ್ಲದೆ, ಈ ಕೇಂದ್ರದಲ್ಲಿ ಮಹಾರಾಣಾ ಪ್ರತಾಪ ಅವರ ಜೀವನವನ್ನು ಆಧರಿಸಿದ ಒಂದು ವಸ್ತುಸಂಗ್ರಹಾಲಯವಿದ್ದು, ಅಲ್ಲಿನ ಸದಸ್ಯರು ಅತ್ಯಂತ ಉತ್ಸಾಹದಿಂದ ತಳಮಳದಿಂದ ಈ ಸಂಪೂರ್ಣ ಇತಿಹಾಸವನ್ನು ಜನರಿಗೆ ತಿಳಿಸುತ್ತಾರೆ. |
ಸಂಪಾದಕೀಯ ನಿಲುವುಕಳೆದ 27 ವರ್ಷಗಳ ರಾಜಸ್ಥಾನದ ಎಲ್ಲಾ ಪಕ್ಷಗಳ ಸರಕಾರಗಳಿಗೆ ಇದು ಲಜ್ಜಾಸ್ಪದ! ಇತಿಹಾಸದ ಪಠ್ಯಪುಸ್ತಕಗಳಲ್ಲಿ ಹಿಂದೂ ಸಾಮ್ರಾಟರ ಬದಲಿಗೆ ಮುಸ್ಲಿಂ ಆಕ್ರಮಣಕಾರರಿಗೆ ಮಹತ್ವ ನೀಡಿದಂತೆಯೇ, ಅವರ ಐತಿಹಾಸಿಕ ಸ್ಮಾರಕಗಳ ವಿಷಯದಲ್ಲೂ ಅದೇ ನಡೆಯುತ್ತಲೇ ಇದೆ. ಇದು ಹಿಂದೂಗಳಿಗೆ ನಾಚಿಕೆಗೇಡು! |
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !