ಉಚ್ಚ ನ್ಯಾಯಾಲಯಗಳೂ ಸಾಂವಿಧಾನಿಕವಾಗಿರುವಾಗ, ಶ್ರೀಮಂತರು ನೇರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಏಕೆ ಸಲ್ಲಿಸುತ್ತಾರೆ?

ಕಾಂಗ್ರೆಸ್ ನಾಯಕರ ವಕೀಲರನ್ನು ತಿವಿದ ಸರ್ವೋಚ್ಚ ನ್ಯಾಯಾಲಯ !

ನವ ದೆಹಲಿ – ಛತ್ತೀಸ್‌ಗಢದಲ್ಲಿನ ಒಂದು ಹಗರಣದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರ ವಕೀಲರನ್ನು ತರಾಟೆಗೆ ತೆಗೆದುಕೊಂಡು, “ಪ್ರಾಥಮಿಕ ಮಾಹಿತಿ ವರದಿ (ಎಫ್.ಐ.ಆರ್), ಬಂಧನ, ರಿಮಾಂಡ್ (ವಶ) ಮತ್ತು ಕಪ್ಪುಹಣ ತಡೆಗಟ್ಟುವ ಕಾಯ್ದೆ (ಪಿ.ಎಂ.ಎಲ್.ಎ) ಯ ನಿಬಂಧನೆಗಳ ವಿರುದ್ಧ ನಿಮ್ಮ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಏಕೆ ಪರಿಗಣಿಸಬೇಕು? ಮೊದಲು ನೀವು ಉಚ್ಚ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲ? ಶ್ರೀಮಂತರು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಏಕೆ ಬರುತ್ತಾರೆ? ಉಚ್ಚ ನ್ಯಾಯಾಲಯವೂ ಸಾಂವಿಧಾನಿಕವಾಗಿದೆ. ಅಲ್ಲಿಯೂ ಇಂತಹ ಪ್ರಕರಣಗಳಲ್ಲಿ ತೀರ್ಪು ನೀಡಲಾಗುತ್ತದೆ. ನಾವು ಈ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಈ ಪ್ರಶ್ನೆಯನ್ನು ಕೇಳಬೇಕಾಗಿದೆ. ಇಂತಹ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ತೀರ್ಪು ಅಥವಾ ನ್ಯಾಯ ನಿರ್ಣಯ ನೀಡಲು ಸಾಧ್ಯವಿಲ್ಲ ಎಂದು ನಿಮಗೆ ಅನಿಸುತ್ತದೆಯೇ? ಹಾಗಿದ್ದರೆ, ಆ ನ್ಯಾಯಾಲಯಗಳ ಉಪಯೋಗವಾದರೂ ಏನು?” ಎಂದು ಪ್ರಶ್ನಿಸಿದೆ.

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರಾದ ಭೂಪೇಶ್ ಬಘೇಲ್ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರು ತನಿಖಾ ಸಂಸ್ಥೆಗಳ ದಂಡನಾತ್ಮಕ ಕ್ರಮ ಮತ್ತು ಪಿ.ಎಂ.ಎಲ್.ಎ. ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಇದಕ್ಕೆ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.