ಹಿಮಾಚಲ ಪ್ರದೇಶದ ಜಲಪಾತದ ಬಳಿ ನಡೆದ ಪ್ರಸಂಗ

ನವದೆಹಲಿ – ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜಲಪಾತದ ಬಳಿ ವಿದೇಶಿ ಪ್ರವಾಸಿಗರೊಬ್ಬರು ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತು ಕಸವನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು, “ನಾನು ಪ್ರತಿದಿನ ಇಲ್ಲಿ ಕುಳಿತು ಜನರಿಗೆ – ‘ಕಸ ಎತ್ತಿ ಮತ್ತು ಪರಿಸರವನ್ನು ಸ್ವಚ್ಛವಾಗಿಡಿ'” ಎಂದು ಹೇಳುತ್ತೇನೆ ಎಂದು ಹೇಳುತ್ತಿರುವುದು ಸೆರೆಯಾಗಿದೆ. ‘ಎಕ್ಸ್’ ನಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಡಿದೆ.
ಈ ವಿಡಿಯೋಗೆ ಜನರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಹೀಗಿವೆ:
1. ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಭಾರತೀಯರದ್ದಾಗಿರಬೇಕು; ಆದರೆ ಅದನ್ನು ಒಬ್ಬ ವಿದೇಶಿ ವ್ಯಕ್ತಿ ನಿಭಾಯಿಸುತ್ತಿದ್ದಾರೆ.
2. ಒಬ್ಬ ವಿದೇಶಿ ಇಲ್ಲಿ ಸ್ವಚ್ಛಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ಜನರು ಮಾತ್ರ ಕಸ ಹಾಕುತ್ತಾ ಕುಳಿತುಕೊಳ್ಳುತ್ತಾರೆ.
3. ಇದು ನಮ್ಮ ಮನಃಸ್ಥಿತಿಯ ಸಮಸ್ಯೆ. ಸ್ವಚ್ಛತೆಯನ್ನು ಕಾಪಾಡುವುದು ಸರಕಾರದ ಕೆಲಸ ಎಂದು ಜನರು ಭಾವಿಸುತ್ತಾರೆ; ಆದರೆ ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
4. ನಮ್ಮ ಚಿಂತನೆ ಬದಲಾಗುವವರೆಗೂ ದೇಶ ಸ್ವಚ್ಛವಾಗುವುದಿಲ್ಲ.
ಸಂಪಾದಕೀಯ ನಿಲುವುಇದು ಭಾರತೀಯರಿಗೆ ನಾಚಿಕೆಗೇಡಿನ ಸಂಗತಿ! ‘ಭಾರತೀಯರು ಸ್ವಚ್ಛತೆ ಕಾಪಾಡಬೇಕು’ ಎಂದು ವಿದೇಶಿಯರು ಹೇಳಬೇಕಾಗಿ ಬಂದರೆ, ಇದಕ್ಕಿಂತ ದುರದೃಷ್ಟಕರ ಸಂಗತಿ ಇನ್ನೊಂದಿದೆಯೇ? |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!