ಪಾಕ್‌ಗಾಗಿ ಬೇಹುಗಾರಿಕೆ ನಡೆಸಿದ ಯೋಧನ ಬಂಧನ

ಸೇನೆಯ ಗೌಪ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ

ಪ್ರತೀಕಾತ್ಮಕ ಛಾಯಾಚಿತ್ರ

ಉರಿ (ಜಮ್ಮು-ಕಾಶ್ಮೀರ) – ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಪ್ರಕರಣದಲ್ಲಿ ಭಾರತೀಯ ಸೇನೆಯಲ್ಲಿನ ಯೋಧ ದೇವಿಂದರ್ ಸಿಂಗ್‌ನನ್ನು ರಾಜ್ಯದ ಉರಿಯಲ್ಲಿ ಬಂಧಿಸಲಾಗಿದೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್’ (ಐ.ಎಸ್.ಐ. – ಅಂತರ ಸೇವಾ ಗುಪ್ತಚರ ಸಂಸ್ಥೆ) ಗೆ ಗೌಪ್ಯ ಸೇನಾ ಮಾಹಿತಿಯನ್ನು ನೀಡುತ್ತಿದ್ದ. ಈತ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ನಿಹಾಲ್‌ಗಢ ನಿವಾಸಿಯಾಗಿದ್ದಾನೆ. ಬೇಹುಗಾರಿಕೆ ಆರೋಪದ ಮೇಲೆ ಮಾಜಿ ಸೈನಿಕ ಗುರ್‌ಪ್ರೀತ್ ಸಿಂಗ್‌ನನ್ನು ಬಂಧಿಸಲಾಗಿತ್ತು. ಆತನ ವಿಚಾರಣೆಯಿಂದ ದೇವಿಂದರ್ ಸಿಂಗ್‌ನ ಮಾಹಿತಿ ಲಭ್ಯವಾಗಿದ್ದು, ನಂತರ ಆತನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ದೇಶದ್ರೋಹಿಗಳನ್ನು ಚೌಕದಲ್ಲಿ ನೇಣಿಗೇರಿಸಬೇಕು !