ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಗೆ ಆಗಮಿಸಿದೆ ಜಗದ್ಗುರು ಸಂತ ತುಕಾರಾಮ್ ಮಹಾರಾಜರ ಪಲ್ಲಕ್ಕಿ
![]() |
![]() |
![]() |
ಸೊಲಾಪುರ, ಜುಲೈ 1 (ವಾರ್ತೆ.) – ಜಗದ್ಗುರು ಸಂತ ತುಕಾರಾಮ್ ಮಹಾರಾಜರ ಪಲ್ಲಕ್ಕಿ ಉತ್ಸವವು ಪುಣೆ ಜಿಲ್ಲೆಯ ಸರಾಟಿಯಿಂದ ಸೊಲಾಪುರ ಜಿಲ್ಲೆಯನ್ನು ಪ್ರವೇಶಿಸಿತು. ಸೊಲಾಪುರದ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದರವರು ಅಪಾರ ಉತ್ಸಾಹ ಮತ್ತು ಸಂತೋಷದಿಂದ ಪಲ್ಲಕ್ಕಿಯನ್ನು ಸ್ವಾಗತಿಸಿ ದರ್ಶನ ಪಡೆದರು. ‘ಚಲಾ ಪಂಢರೀಸಿ ಜಾವು, ಬಾಪ ರಖುಮಾ ದೇವೀವರಾ ಪಾಹೂ’, ‘ಜ್ಞಾನೇಶ್ವರ ಮಾವುಲಿ ತುಕಾರಾಮ್’, ‘ಜಯ ಜಯ ರಾಮಕೃಷ್ಣ ಹರಿ’ ಎಂಬ ಹರಿನಾಮದ ಘೋಷಣೆಗಳನ್ನು ಮಾಡುತ್ತಾ ಎಲ್ಲ ವಾರಕರಿಗಳು ಭಕ್ತಿರಸದಲ್ಲಿ ಮಿಂದೆದ್ದರು. ಪಲ್ಲಕ್ಕಿಯು ಜಿಲ್ಲೆಯನ್ನು ಪ್ರವೇಶಿಸಿದ ನಂತರ, ಅಕಲೂಜನಲ್ಲಿರುವ ಸದಾಶಿವರಾವ ಮಾನೆ ವಿದ್ಯಾಲಯದ ಆವರಣದಲ್ಲಿ ವಾರಕರಿ ಭಕ್ತರ ಕಣ್ಮನ ಸೆಳೆಯುವಂತಹ, ಸೊಲ್ಲಾಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಲ್ಲಕ್ಕಿಯ ಸುತ್ತಲೂ ವರ್ತುಲಾಕಾರದಲ್ಲಿ ಸುತ್ತುವ ಅದ್ಭುತ ಸಮಾರಂಭ ನಡೆಯಿತು.



ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ