
ಕೇವಲ ಭಾರತದ ಮಾತ್ರವಲ್ಲ, ಜಗತ್ತಿನಾದ್ಯಂತ ಭಾವಿಕರ ಶ್ರದ್ಧೆ ಮತ್ತು ಭಕ್ತಿ ಇವುಗಳ ಉತ್ಕಟ ದರ್ಶನವನ್ನು ತೋರಿಸುವ ಪುರಿಯ ಜಗನ್ನಾಥ ರಥೋತ್ಸವವು ಜೂನ್ ೨೭ ರಂದು ಇದೆ. ಈ ನಿಮಿತ್ತ ರಥೋತ್ಸವದ ಜಾತ್ರೆಯ ಕೆಲವು ವೈಶಿಷ್ಟ್ಯಗಳನ್ನು ನೋಡೋಣ.
೧. ರಥೋತ್ಸವದಲ್ಲಿ ರಥಗಳ ಕ್ರಮಗಳು !
ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ವಿರಾಜಮಾನವಾಗಿರುವ ಸದ್ಯದ ದೇವಸ್ಥಾನವು ೮೦೦ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಇಲ್ಲಿ ಭಗವಾನ ಶ್ರೀಕೃಷ್ಣನೊಂದಿಗೆ ಅವನ ಹಿರಿಯ ಅಣ್ಣನಾದ ಶ್ರೀ ಬಲರಾಮ ಮತ್ತು ಅವನ ತಂಗಿ ಸುಭದ್ರಾದೇವಿ ಇವರ ಪೂಜೆಯನ್ನೂ ಮಾಡಲಾಗುತ್ತದೆ. ಪುರಿಯಲ್ಲಿ ರಥೋತ್ಸವಕ್ಕಾಗಿ ಶ್ರೀ ಬಲರಾಮ, ಶ್ರೀಕೃಷ್ಣ ಮತ್ತು ದೇವಿ ಸುಭದ್ರಾ ಇವರಿಗಾಗಿ ೩ ಬೇರೆಬೇರೆ ರಥಗಳನ್ನು ಸಿದ್ಧಪಡಿಸಲಾಗುತ್ತದೆ. ಈ ರಥೋತ್ಸವದಲ್ಲಿ ಎಲ್ಲಕ್ಕಿಂತ ಮುಂದೆ ಶ್ರೀ ಬಲರಾಮದ ರಥ, ಮಧ್ಯದಲ್ಲಿ ಸುಭದ್ರಾದೇವಿ ಮತ್ತು ಎಲ್ಲಕ್ಕಿಂತ ಹಿಂದೆ ಭಗವಾನ ಜಗನ್ನಾಥನ (ಶ್ರೀಕೃಷ್ಣನ) ರಥವಿರುತ್ತದೆ.
೨. ಮೂರು ರಥಗಳ ಅನನ್ಯ ವೈಶಿಷ್ಟ್ಯಗಳು !
ಅ. ಶ್ರೀ ಬಲರಾಮನ ರಥಕ್ಕೆ ‘ತಾಲಧ್ವಜ’ ಎಂದು ಕರೆಯಲಾಗುತ್ತದೆ. ಈ ರಥದ ಬಣ್ಣವು ಕೆಂಪು ಮತ್ತು ಹಸಿರು ಇರುತ್ತದೆ. ದೇವಿ ಸುಭದ್ರೆಯ ರಥಕ್ಕೆ ‘ಪದ್ಮರಥ’ ಎಂದು ಕರೆಯಲಾಗುತ್ತದೆ. ಅದು ಕಪ್ಪು ಅಥವಾ ನೀಲಿ ಅಥವಾ ಕೆಂಪು ಬಣ್ಣವಿರುತ್ತದೆ, ಆದರೆ ಭಗವಾನ ಜಗನ್ನಾಥನ ರಥಕ್ಕೆ ‘ನಂದಿಘೋಷ’ ಅಥವಾ ‘ಗರುಡಧ್ವಜ’ ಎಂದು ಕರೆಯಲಾಗುತ್ತದೆ. ಆ ರಥದ ಬಣ್ಣವು ಕೆಂಪು ಮತ್ತು ಹಳದಿ ಇರುತ್ತದೆ.
ಆ. ಶ್ರೀ ಬಲರಾಮನ ರಥವು ೪೫ ಅಡಿಗಳಷ್ಟು ಎತ್ತರ, ಸುಭದ್ರಾದೇವಿಯ ರಥವು ೪೪.೬ ಅಡಿಗಳಷ್ಟು ಎತ್ತರ, ಭಗವಾನ ಜಗನ್ನಾಥನ ರಥವು ೪೫.೬ ಅಡಿಗಳಷ್ಟು ಎತ್ತರವಿರುತ್ತದೆ.
ಇ. ಈ ಮೂರು ರಥಗಳನ್ನು ಪವಿತ್ರವಾದ ಬೇವು ಮತ್ತು ಪರಿಪಕ್ವವಾಗಿರುವ ಕಟ್ಟಿಗೆಗಳಿಂದ ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ಆರೋಗ್ಯದಾಯಕ ಬೇವಿನಸೊಪ್ಪು ಮತ್ತು ಶುಭವಾಗಿರುವ ಮರವನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕಾಗಿ ಒಂದು ವಿಶೇಷ ಸಮಿತಿಯನ್ನು ಸ್ಥಾಪನೆ ಮಾಡಲಾಗುತ್ತದೆ. ಈ ರಥದ ಸಿದ್ಧತೆಯಲ್ಲಿ ಯಾವುದೇ ರೀತಿಯ ಮೊಳೆಗಳು ಅಥವಾ ಇತರ ಯಾವುದೇ ಧಾತುಗಳನ್ನು ಉಪಯೋಗಿಸಲಾಗುವುದಿಲ್ಲ, ಇದು ಅದರ ಇನ್ನೊಂದು ವೈಶಿಷ್ಟ್ಯವಾಗಿದೆ.
(ಆಧಾರ : ಸನಾತನ ಸಂಸ್ಥೆಯ ಜಾಲತಾಣ)
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !