ಮೇರಠ (ಉತ್ತರ ಪ್ರದೇಶ) – ಉತ್ತರಪ್ರದೇಶದ ಮೇರಠ ಜಿಲ್ಲೆಯಲ್ಲಿ ಸೇನಾಪಡೆಯ ಸೇನಾ ಸಿಬ್ಬಂದಿಯೊಬ್ಬನನ್ನು ಎಕೆ-47ರ 70 ಮದ್ದುಗುಂಡುಗಳೊಂದಿಗೆ ಬಂಧಿಸಲಾಗಿದೆ. ಮದ್ದುಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದನು. ಮೇರಠ ಮೂಲದ ಈ ಸೈನಿಕ ಪ್ರಸ್ತುತ ಮಹಾರಾಷ್ಟ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪಲ್ಲವಪುರಂ ಪ್ರದೇಶದಲ್ಲಿ ಅವನನ್ನು ಬಂಧಿಸಿದೆ. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದರೂ; ಪೊಲೀಸ್ ತಂಡ ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಯಿತು.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಾಂಗಲಿ ಆಜಾದ ಗ್ರಾಮದ ನಿವಾಸಿ ರಾಹುಲ ಕುಮಾರ ಎಂದು ಈ ಸೈನಿಕನ ಹೆಸರಾಗಿದೆ. ಅವನು ಜೂನ್ 9, 2025 ರಂದು ರಜೆಯ ಮೇಲೆ ಮನೆಗೆ ಬಂದಿದ್ದನು. ಅವನ ಸಂದೇಹಾಸ್ಪದ ನಡುವಳಿಕೆಯಿಂದಾಗಿ ಆತ ಭಯೋತ್ಪಾದನಾ ನಿಗ್ರಹ ದಳದ ರಾಡಾರಗೆ ಒಳಪಟ್ಟಿದ್ದ. ಆತ ಎಕೆ-47 ಮದ್ದುಗುಂಡುಗಳನ್ನು ಮಾರಾಟ ಮಾಡಲು ಹೊರಟಾಗ ಬಂಧಿಸಲಾಯಿತು.
ಸಂಪಾದಕೀಯ ನಿಲುವುಸೇನಾಪಡೆಯಲ್ಲಿ ಇಂತಹವರನ್ನು ಪತ್ತೆ ಹಚ್ಚಲು ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು! |