ದೇವಸ್ಥಾನದ ಹೊರಗೆ ಗೋಮಾಂಸ ಎಸೆಯುವವರು ಕಂಡರೆ ಕೂಡಲೇ ಶೂಟ್ ಮಾಡಿ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರಿಂದ ಪೊಲೀಸರಿಗೆ ಆದೇಶ

ಗುವಾಹಟಿ (ಅಸ್ಸಾಂ) – ಬಕ್ರೀದ್ ದಿನದಂದು ಕೆಲವು ದುಷ್ಕರ್ಮಿಗಳು ಧುಬ್ರಿಯಲ್ಲಿರುವ ಹನುಮಾನ್ ದೇವಸ್ಥಾನದ ಹೊರಗೆ ಗೋಮಾಂಸವನ್ನು ಎಸೆದಿದ್ದರು. ಇದು ಅತ್ಯಂತ ಅಸಹ್ಯಕರ ಮತ್ತು ಖಂಡನೀಯ ಘಟನೆಯಾಗಿದೆ. ಒಂದು ನಿರ್ದಿಷ್ಟ ವರ್ಗವು ನಮ್ಮ ದೇವಸ್ಥಾನಗಳಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಸಕ್ರಿಯವಾಗಿದೆ. ಆದ್ದರಿಂದ, ಈ ದುಷ್ಕರ್ಮಿಗಳನ್ನು ಕಂಡಾಕ್ಷಣ ಗುಂಡಿಕ್ಕುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಸೂಚಿಸಿದ್ದಾರೆ. ಹನುಮಾನ ದೇವಸ್ಥಾನದ ಹೊರಗೆ ಗೋಮಾಂಸ ಎಸೆದ ಘಟನೆ ಜೂನ್ ೮ ರಂದು ನಡೆದಿತ್ತು.

ಮುಂದಿನ ಈದ್‌ಗೆ ನಾನೇ ದೇವಸ್ಥಾನದ ಹೊರಗೆ ಕಾವಲು ಕಾಯುತ್ತೇನೆ!

ಮುಖ್ಯಮಂತ್ರಿ ಸರಮಾ ಅವರು ಮಾತು ಮುಂದುವರೆಸಿ ,ಮುಂದಿನ ಈದ್‌ಗೆ ಅಗತ್ಯ ಬಿದ್ದರೆ, ನಾನೇ ರಾತ್ರಿಯಿಡೀ ಹನುಮಾನ ದೇವಸ್ಥಾನದ ಹೊರಗೆ ಕಾವಲು ಕಾಯುತ್ತೇನೆ. ಧುಬ್ರಿಯಲ್ಲಿ ಹೊಸ ಗೋಮಾಂಸ ಮಾಫಿಯಾಗಳು ಹುಟ್ಟುಕೊಂಡಿವೆ, ಅವರು ಈದ್‌ಗೂ ಮುನ್ನ ಸಾವಿರಾರು ಪ್ರಾಣಿಗಳನ್ನು ಖರೀದಿಸಿದ್ದರು. ಈ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ಅಪರಾಧಿಗಳನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುವುದು. ನಾನು ಧುಬ್ರಿಗೆ ಭೇಟಿ ನೀಡಿದ್ದೇನೆ. ಅಲ್ಲಿ ನಮ್ಮ ದೇವಸ್ಥಾನಗಳು ಮತ್ತು ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸುವ ಸಮಾಜ ವಿರೋಧಿ ಅಂಶಗಳ ವಿರುದ್ಧ ಶೂನ್ಯ ಸಹಾನುಭೂತಿಯ ನೀತಿಯನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ಇನ್ನು ಮುಂದೆ ನಗರದಲ್ಲಿ ಇಂತಹ ಘಟನೆಗಳು ನಡೆಯಬಾರದು.

ಇತ್ತೀಚೆಗೆ, ಅಸ್ಸಾಂ ಮತ್ತು ಬಾಂಗ್ಲಾದೇಶದಲ್ಲಿ ಕೆಲವು ದುಷ್ಕರ್ಮಿಗಳು ಸಕ್ರಿಯರಾಗಿದ್ದಾರೆ. ಒಂದು ನಿರ್ದಿಷ್ಟ ವರ್ಗವು ಆನ್‌ಲೈನ್ ಮತ್ತು ಭೌತಿಕವಾಗಿ ಸಕ್ರಿಯವಾಗಿದೆ. ಈ ಗುಂಪು ವ್ಯವಸ್ಥಿತವಾಗಿ ರಾಜ್ಯದಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸರಮಾ ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಆದೇಶವನ್ನು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಏಕೆ ನೀಡುವುದಿಲ್ಲ?