ವೇದಗಳ ಪ್ರಚಾರ ಮತ್ತು ಪ್ರಸಾರ ಮಾಡಿದ ಬ್ರೆಜಿಲ್ ನ ಜೊನಾಸ್ ಮಾಸೆಟ್ಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತ ನಂತರದ ಉದ್ಗಾರ

ನವದೆಹಲಿ – ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಗಳನ್ನು ವಿತರಿಸಿದರು. ರಾಜಕೀಯ, ಸಾಮಾಜಿಕ, ಕಲೆ, ಆಧ್ಯಾತ್ಮ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಸಾಧ್ವಿ ಋತಂಬರಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಹಾಗೂ ಬ್ರೆಜಿಲ್ ನ ವಿಶ್ವ ವಿದ್ಯಾ ಗುರುಕುಲದ ಸಂಸ್ಥಾಪಕ ಜೋನಾಸ್ ಮಾಸೆಟ್ಟಿ ಅವರಿಗೆ ವೇದ ಮತ್ತು ಭಗವದ್ಗೀತೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ಪದ್ಮಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಈ ಕುರಿತು ಜೊನಾಸ್ ಮಾಸೆಟ್ಟಿ ಮಾತನಾಡಿ, “ನನಗೆ ಇದು ಅನಿರೀಕ್ಷಿತವಾಗಿದೆ. ಇದು ದೊಡ್ಡ ಗೌರವವಾಗಿದೆ. ಬ್ರೆಜಿಲ್‌ನಲ್ಲಿ ಅನೇಕ ಜನರು ವೇದಗಳನ್ನು ಕಲಿಯುತ್ತಿದ್ದಾರೆ. ಇದು ಕೇವಲ ನನಗೊಬ್ಬನಿಗೆ ಸಂದ ಗೌರವವಲ್ಲ, ಬದಲಿಗೆ ಈ ಪರಂಪರೆಗಾಗಿ ಶ್ರಮಿಸುತ್ತಿರುವ ನಮ್ಮ ಕುಟುಂಬಕ್ಕೂ ಸಂದ ಗೌರವವಾಗಿದೆ” ಎಂದು ಹೇಳಿದರು.
ವೇದಗಳ ಅಧ್ಯಯನದ ನಂತರ, ಮಾಸೆಟ್ಟಿ ಅವರು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ವಿಶ್ವ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಲ್ಲಿ ಅವರು ವೇದ, ಸಂಸ್ಕೃತ, ಭಗವದ್ಗೀತೆ ಮತ್ತು ಧ್ಯಾನದ ಕೋರ್ಸ್ಗಳನ್ನು ಪ್ರಾರಂಭಿಸಿದರು. ಮಾಸೆಟ್ಟಿ ಅವರು ಯೋಗ ಮತ್ತು ವೇದಗಳ ಕುರಿತು ಪೋರ್ಚುಗೀಸ್ ಮತ್ತು ಆಂಗ್ಲ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!