
ಪುಣೆ – ದೇಶದಲ್ಲಿನ ಆಂತರಿಕ ಶತ್ರುಗಳಿಂದಾಗಿ ನಕ್ಸಲವಾದ, ಸಾಮ್ಯವಾದ ಮತ್ತು ಎಡಪಂಥೀಯ ವಿಚಾರಗಳು ಬೆಳೆಯಲು ಸಾಧ್ಯವಾಯಿತು. ಅವರು ಚಾತುರ್ಯದಿಂದ ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ಮೇಲೆ ಪ್ರಾಬಲ್ಯ ಸಾಧಿಸಿದರು. ಇಸ್ಲಾಂ ದೇಶದ ಎರಡನೇ ದೊಡ್ಡ ಶತ್ರುವಾಗಿದೆ. ಇಸ್ಲಾಂ ಹಲವೆಡೆ ಜೀವ ಬೆದರಿಕೆ ಹಾಕಿ ಸ್ಥಳೀಯರನ್ನು ಇಸ್ಲಾಂ ಸ್ವೀಕರಿಸುವಂತೆ ಮಾಡಿದೆ. ಅವರು ಭಾರತೀಯ ಸಂಸ್ಕೃತಿಯ ವಿರುದ್ಧ ಯುದ್ಧ ಸಾರಿದ್ದಾರೆ. ಇಲ್ಲಿನ ದೇವಸ್ಥಾನಗಳನ್ನು ನಾಶಪಡಿಸಿದರು. ಸಾಮಾಜಿಕ ಪರಂಪರೆ, ವಾಸ್ತುಶಾಸ್ತ್ರ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಪ್ರತೀಕಗಳನ್ನು ನಾಶಪಡಿಸಿದರು. ಚೀನಾ ಮತ್ತು ಪಾಕಿಸ್ತಾನಕ್ಕಿಂತಲೂ ಈ ಅಮೂರ್ತ ಶತ್ರುವು ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ಪ್ರಸಿದ್ಧ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ಅಭಿಪ್ರಾಯಪಟ್ಟಿದ್ದಾರೆ. ‘ಪುಣೆ ಸಂವಾದ’ದ ವತಿಯಿಂದ ಆರೋಹ ವೇಲಣಕರರವರು ‘ದಿ 2.5 ಫ್ರಂಟ್ ವಾರ್: ಇಂಡಿಯಾಸ್ ಸೆಕ್ಯುರಿಟಿ ಚಾಲೆಂಜಸ್ ಅಂಡ್ ರೋಲ್ ಆಫ್ ಸಿನಿಮಾ’ ಎಂಬ ವಿಷಯದದಲ್ಲಿ ಅಗ್ನಿಹೋತ್ರಿಯವರೊಂದಿಗೆ ಸಂವಾದ ನಡೆಸಿದರು. ಅವರು ಆಗ ಹೀಗೆ ಹೇಳಿದರು.
ಅಗ್ನಿಹೋತ್ರಿಯವರು ಮಾತನಾಡುತ್ತ, ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ವೈವಿಧ್ಯತೆಯ ತಪ್ಪಾದ ಅರ್ಥವನ್ನು ತೆಗೆದುಕೊಂಡು ರಾಜಕೀಯ ಉದ್ದೇಶಗಳನ್ನು ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ ಉದಾರೀಕರಣದ ನಂತರವೂ ನಕ್ಸಲವಾದ ಮತ್ತು ಸಾಮ್ಯವಾದವು ವ್ಯಾಪಕವಾಗಿ ಹರಡಿರುವುದನ್ನು ಕಾಣಬಹುದು. ಎಡಪಂಥೀಯರು ಚಾತುರ್ಯದಿಂದ ಈ ಭೂಮಿಯಲ್ಲಿ ಸಾಮ್ಯವಾದವನ್ನು ಬಿತ್ತಿದರು. ಅಂದಿನ ಸರಕಾರವೂ ಅವರಿಗೆ ಅವಕಾಶ ನೀಡಿತು. ಈ ಮೂಲಕವೇ ಅವರು ಶಿಕ್ಷಣ ಮತ್ತು ಸಂಸ್ಕೃತಿಯ ಮೇಲೆ ಪ್ರಾಬಲ್ಯ ಸಾಧಿಸಿದರು. ಭಾರತ-ಪಾಕಿಸ್ತಾನ ಸಂಘರ್ಷವು ತೀವ್ರವಾದಷ್ಟು ಬಾಂಗ್ಲಾದೇಶವು ಬಲಗೊಳ್ಳುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶವು ಭಾರತದ ಹೊಸ ಶತ್ರುವಾಗಿ ಹೊರಹೊಮ್ಮುತ್ತಿದೆ, ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ