ಭಾರತೀಯ ಸೇನೆಯಿಂದ ಮಾಹಿತಿ
ನವದೆಹಲಿ – ಪಾಕಿಸ್ತಾನ ಪಂಜಾಬ್‌ನ ಅಮೃತಸರದಲ್ಲಿರುವ ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿಯನ್ನು ಹಾರಿಸಿತ್ತು, ಆದರೆ ಅದನ್ನು ಭಾರತೀಯ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಅಲ್ಲದೆ, ಪಂಜಾಬ್‌ನಲ್ಲಿ ಹೊಡೆದುರುಳಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಅವಶೇಷಗಳನ್ನೂ ಪ್ರದರ್ಶಿಸಿತು.
ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿ ಪಾಕಿಸ್ತಾನ ಡ್ರೋನ್ ಅನ್ನು ಹೇಗೆ ಹೊಡೆದುರುಳಿಸಲಾಯಿತು ಎಂಬುದನ್ನು ತೋರಿಸಿದೆ. ನಾವು ನೆಲದಿಂದ ಆಕಾಶದವರೆಗೆ ರಕ್ಷಣೆ ನೀಡಿದ್ದೇವೆ ಎಂದು ಸೇನೆ ಹೇಳಿದೆ.
ಸಂಪಾದಕೀಯ ವಿಭಾಗಖಲಿಸ್ತಾನಿಗಳು ಪಾಕಿಸ್ತಾನ ವಿರುದ್ಧ ಮಾತನಾಡುತ್ತಾರೆಯೇ? |