Not Just The laws, The Entire System Must Change! : ಕೇವಲ ಕಾನೂನುಗಳಲ್ಲ, ಸಂಪೂರ್ಣ ವ್ಯವಸ್ಥೆಯೇ ಬದಲಾಗಬೇಕು! – ನ್ಯಾಯವಾದಿ ವಿಷ್ಣು ಶಂಕರ ಜೈನ

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ನಡೆದ ಸನಾತನ ರಾಷ್ಟ್ರ ಪಥದರ್ಶನ ಅಧಿವೇಶನ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ, ಮೇ 18 (ವಾರ್ತಾ.) – ಹಿಂದೂಗಳ ಮೇಲೆ ನಡೆದ ಅನೇಕ ಆಘಾತಗಳ ಕುರಿತಾದ ಮೊಕದ್ದಮೆಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇವೆ. ಈ ಮೊಕದ್ದಮೆಗಳ ತೀರ್ಪು ಯಾವಾಗ ಬರಬೇಕು ಎಂಬುದನ್ನು ನಾವೆಲ್ಲರೂ ನಿರ್ಧರಿಸಬೇಕಾಗಿದೆ. ಇಂದು ದೇಶದ ವ್ಯವಸ್ಥೆ ಹಿಂದೂ ವಿರೋಧಿಯಾಗಿದೆ. ವಕ್ಫ್ ಮಂಡಳಿಯ ಕುರಿತು ಸಂಸತ್ತಿನಲ್ಲಿ ಕಾನೂನು ಅನುಮೋದಿಸಿದಾಗ, ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾದ ಅರ್ಜಿಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯಲದಲ್ಲಿ ಈ ಕಾನೂನನ್ನು ಹೇಗೆ ತಡೆಯುವುದು ಎಂದು ವಿಚಾರ ಮಾಡುತ್ತದೆ; ಆದರೆ ಸಂಸತ್ತು ಅನುಮೋದಿಸಿದ ಕಾನೂನನ್ನು ತಡೆಯಲು ಸಾಧ್ಯವಿಲ್ಲ. ಈ ಎಲ್ಲ ಘಟನೆಗಳಿಂದ ಕೇವಲ ಕಾನೂನುಗಳಲ್ಲ, ಸಂಪೂರ್ಣ ವ್ಯವಸ್ಥೆಯೇ ಹಿಂದೂ ವಿರೋಧಿಯಾಗಿರುವುದರಿಂದ ಅದು ಬದಲಾಗಬೇಕು ಎಂಬ ಪ್ರಖರ ಅಭಿಪ್ರಾಯವನ್ನು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ ವ್ಯಕ್ತಪಡಿಸಿದರು. ಮೇ 18 ರಂದು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಎರಡನೇ ದಿನ ‘ಸನಾತನ ರಾಷ್ಟ್ರ ಪಥದರ್ಶನ’ ಕಾರ್ಯಕ್ರಮ ನೆರವೇರಿತು. ಆ ಸಮಯದಲ್ಲಿ ಅವರು ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೇಂದ್ರ ವಾರ್ತಾ ಇಲಾಖೆಯ ಮಾಜಿ ಆಯುಕ್ತರು ಮತ್ತು ‘ಸೇವ್ ಕಲ್ಚರ್ ಸೇವ್ ಭಾರತ್’ ಸಂಯೋಜಕ ಶ್ರೀ. ಉದಯ ಮಾಹುರಕರ, ‘ನ್ಯಾಷನಲ್ ಸೆಂಟರ್ ಫಾರ್ ಹಿಸ್ಟಾರಿಕಲ್ ರಿಸರ್ಚ್ ಅಂಡ್ ಅನಾಲಿಸಿಸ್’ ಅಧ್ಯಕ್ಷ ಶ್ರೀ. ನೀರಜ ಅತ್ರಿ, ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಸಹ ಉಪಸ್ಥಿತರಿದ್ದರು.

ನ್ಯಾಯವಾದಿ ವಿಷ್ಣು ಶಂಕರ ಜೈನ ಅವರು ತಮ್ಮ ಮಾತನ್ನು ಮುಂದುವರಿಸಿ, “ಹಿಂದೂಗಳ ವಿರುದ್ಧ ಅರಿವಿಲ್ಲದಂತೆಯೇ ಅನೇಕ ಕಾನೂನುಗಳನ್ನು ರಚಿಸಲಾಗಿದೆ. ಸಂವಿಧಾನದ ಕಲಂ 29-30 ರಲ್ಲಿ ಅನೇಕ ಅಸಾಂವಿಧಾನಿಕ ನ್ಯೂನತೆಗಳಿವೆ. ಕಲಂ 30 ರ ದುರುಪಯೋಗವಾಗುತ್ತಿದೆ. ಕಲಂ 26 ರ ಪ್ರಕಾರ ಮಸೀದಿಗಳು, ಚರ್ಚ್‌ಗಳು ಸರಕಾರಿ ಸ್ವಾಧೀನದಿಂದ ವಿನಾಯಿತಿ ಪಡೆಯುತ್ತವೆ; ಆದರೆ ಹಿಂದೂ ದೇವಾಲಯಗಳು ಸರಕಾರಿ ಸ್ವಾಧೀನವಾದಾಗ ಇದೇ ಕಲಂ ಅನ್ನು ಪಕ್ಕಕ್ಕಿಡಲಾಗುತ್ತದೆ. ಶಿವನ ದೇವಾಲಯವನ್ನು ಕೆಡವಲು ಆದೇಶ ನೀಡುವಾಗ ದೆಹಲಿ ಉಚ್ಚನ್ಯಾಯಾಲಯವು ಭಗವಾನ ಶಿವನು ನಮ್ಮನ್ನು ಕ್ಷಮಿಸಲಿ ಎಂದು ಹೇಳುತ್ತದೆ! ಹಿಂದೂ ಸಮಾಜವು ಸಹ ಈ ಹೋರಾಟಕ್ಕಾಗಿ ಒತ್ತಡ ಗುಂಪುಗಳನ್ನು ನಿರ್ಮಿಸಿದರೆ ಮಾತ್ರ ನಾವು ಹಿಂದೂ ದೇವಸ್ಥಾನಗಳನ್ನು ಸುರಕ್ಷಿತವಾಗಿರಿಸಬಹುದು. ಅದರೊಂದಿಗೆ ಹಿಂದೂ ವಿರೋಧಿ ಕಾನೂನುಗಳಿಂದ ನಮಗೆ ಸಂದಿಗ್ಧತೆಯುಂಟಾಗುತ್ತಿದೆ. ಜಾತ್ಯತೀತ, ಸಮಾಜವಾದಿ ಇವುಗಳ ವ್ಯಾಖ್ಯಾನ ನ್ಯಾಯಾಧೀಶರಿಗೂ ಸರಿಯಾಗಿ ತಿಳಿದಿಲ್ಲ. ಅಲ್ಪಸಂಖ್ಯಾತರ ಆಯೋಗ ಅಸಾಂವಿಧಾನಿಕವಾಗಿದ್ದರೂ ಅದರ ಬಗ್ಗೆ ಯಾರೂ ತಿಳಿದುಕೊಳ್ಳುತ್ತಿಲ್ಲ, ಇದು ದುರಂತವಾಗಿದೆ. ಇಂದು ದೇಶದ ಸಾವಿರಾರು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾದ ಸೌಲಭ್ಯಗಳನ್ನು ಪಡೆಯಲು ಜನರು ಮತಾಂತರಗೊಂಡು ಅಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ದೆಹಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮನೆಯಲ್ಲಿ ದೊಡ್ಡ ಮೊತ್ತದ ಹಣ ಸಿಕ್ಕಿಬಿದ್ದಿದೆ; ಆದರೆ ಇದರ ಬಗ್ಗೆ ಒಂದು ಸಣ್ಣ ದೂರು ಸಹ ದಾಖಲಾಗುವುದಿಲ್ಲ. ಅವರು ರಾಜೀನಾಮೆ ನೀಡುವುದಿಲ್ಲ. ತನಿಖಾ ಸಮಿತಿ ವಿಫಲವಾಗುತ್ತದೆ. ಆ ನ್ಯಾಯಾಧೀಶರೇ ನಾನು ನ್ಯಾಯಾಧೀಶರ ಹುದ್ದೆಯನ್ನು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇಂತಹ ನ್ಯಾಯಾಧೀಶರಿದ್ದರೆ, ಹಿಂದೂತ್ವನಿಷ್ಠ ನ್ಯಾಯವಾದಿಗಳು ಹೇಗೆ ಹೋರಾಡಲು ಸಾಧ್ಯ? ನಮ್ಮ ಹಿಂದೂ ರಾಷ್ಟ್ರವು ಶಸ್ತ್ರಸಂಧಾನ ಮಾಡುವ ರಾಷ್ಟ್ರವಲ್ಲ, ಬದಲಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಅಖಂಡ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಸನಾತನ ರಾಷ್ಟ್ರವಾಗಿರಬೇಕು. ನಾವು ಹಿಂದೂಗಳು ನಮ್ಮ ಶ್ರದ್ಧಾ ಕೇಂದ್ರಗಳಿಗಾಗಿ ಬಹಳ ಸಹಿಷ್ಣುಗಳು, ಶಾಂತರಾಗಿದ್ದೇವೆ. ‘ನಮ್ಮ ಶ್ರದ್ಧಾ ಕೇಂದ್ರಗಳು ಮುಕ್ತವಾಗಬೇಕು’ ಎಂದು ಎಲ್ಲಾ ಹಿಂದೂಗಳು ಒಕ್ಕೊರಲಿನಿಂದ ಬೇಡಿಕೆ ಇಡಬೇಕು’, ಎಂದು ಹೇಳಿದರು.

ಸಮಸ್ತ ಹಿಂದೂತ್ವನಿಷ್ಠರ ಪರವಾಗಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ!

ವಕೀಲ ವಿಷ್ಣು ಶಂಕರ್ ಜೈನ್

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ನಿನ್ನೆಯಿಂದ ನನಗೆ ಗೋಮಂತಕ ಭೂಮಿಯಲ್ಲಿ ಹಿಂದೂ ರಾಷ್ಟ್ರದ ಇತಿಹಾಸವು ಬರೆಯಲ್ಪಡುತ್ತಿದೆ ಎಂಬ ಅನುಭವವಾಗುತ್ತಿದೆ ಮತ್ತು ಇದು ನಿಜಕ್ಕೂ ಸ್ಮರಣೀಯವಾಗಿದೆ. ಸಮಸ್ತ ಹಿಂದೂ ಸಮಾಜದ ಪರವಾಗಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಮಾಡಿದ ಆದರ್ಶಮಯ ನಿಯೋಜನೆಗಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ನಾವು 2013 ರಲ್ಲಿ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ಬಂದಿದ್ದೆವು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ನಮ್ಮ ಗುರುಗಳಾಗಿದ್ದು, ಅವರ ಆಶೀರ್ವಾದ ನಮಗೆ ಲಭಿಸಿದೆ. ಆದ್ದರಿಂದ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಅಯೋಧ್ಯೆ, ಕಾಶಿ, ಮಥುರಾ, ಜ್ಞಾನವಾಪಿ, ಸಂಭಲ್ ಈ ನ್ಯಾಯಾಲಯದ ಹೋರಾಟದಲ್ಲಿ ನಮಗೆ ಹೊಸ ಶಕ್ತಿ ದೊರೆಯುತ್ತಿದೆ. ಇದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಚರಣಗಳಿಗೆ ನಾವು ಕೃತಜ್ಞರಾಗಿದ್ದೇವೆ. ನಮ್ಮ ಹಿಂದೂತ್ವನಿಷ್ಠರ ಈ ಹೋರಾಟ ಇಂದು ಗುರುದೇವರ ಆಶೀರ್ವಾದದಿಂದಲೇ ಬಹಳ ವ್ಯಾಪಕವಾಗಿದೆ. ಸನಾತನ ಸಂಸ್ಥೆ, ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ ಈ ಸಂಸ್ಥೆಗಳು ಮುಂದೆ ದೊಡ್ಡ ಆಧ್ಯಾತ್ಮಿಕ ಕೇಂದ್ರಗಳಾಗಲಿವೆ. ಸಮಸ್ತ ಹಿಂದೂತ್ವನಿಷ್ಠರ ಪರವಾಗಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. – ನ್ಯಾಯವಾದಿ ವಿಷ್ಣು ಶಂಕರ ಜೈನ್

ಸಾಂಸ್ಕೃತಿಕ ಆಕ್ರಮಣ ಮತ್ತು ಸಂಸ್ಕೃತಿ ನಾಶ ಮಾಡುವವರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಬೇಕು!ಉದಯ ಮಾಹುರಕರ, ಸಂಯೋಜಕರು, ‘ಸೇವ್ ಕಲ್ಚರ್ ಸೇವ್ ಭಾರತ್’

ಶ್ರೀ ಉದಯ್ ಮಹೂರ್ಕರ್

ದೇಶದ ಮೇಲಿನ ಸಾಂಸ್ಕೃತಿಕ ಆಕ್ರಮಣವು ಅತಿ ದೊಡ್ಡ ಅಪಾಯವಾಗಿದೆ. ಸಾಮಾಜಿಕ ಮಾಧ್ಯಮಗಳು, ‘ಒಟಿಟಿ’, ‘ಪೋರ್ನೋಗ್ರಫಿ’ (ಅಶ್ಲೀಲತೆ) ಮುಂತಾದ ಮಾಧ್ಯಮಗಳ ಮೂಲಕ ಅಶ್ಲೀಲ ಚಲನಚಿತ್ರಗಳನ್ನು ತೋರಿಸಲಾಗುತ್ತದೆ ಮತ್ತು ಹಿಂದೂ ಸಂಸ್ಕೃತಿಯ ಮೇಲೆ ನೇರ ಆಕ್ರಮಣ ಮಾಡಲಾಗುತ್ತಿದೆ. ಇಂತಹ ವಿಷಯಗಳನ್ನು ಸಿದ್ಧಪಡಿಸುವ ಜನರು ಅತ್ಯಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ. ದೇಶದಲ್ಲಿ ಶೇ. 80 ರಷ್ಟು ಅತ್ಯಾಚಾರಗಳು ಅಶ್ಲೀಲ ಚಲನಚಿತ್ರಗಳನ್ನು ನೋಡಿ ನಡೆಯುತ್ತಿವೆ. ಈ ಎಲ್ಲಾ ಮಾಧ್ಯಮಗಳ ವಿರುದ್ಧ ನಾನು ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ; ಆದರೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಿಲ್ಲ. ಸಂಸ್ಕೃತಿ ನಾಶದ ಪ್ರಮಾಣವು ಬಹಳ ವೇಗವಾಗಿ ಹೆಚ್ಚುತ್ತಿದೆ. ಸಾಂಸ್ಕೃತಿಕ ಆಕ್ರಮಣವನ್ನು ಹಿಮ್ಮೆಟ್ಟಿಸಲು ಸಂಸ್ಕೃತಿ ನಾಶ ಮಾಡುವವರ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಬೇಕು. ನಮ್ಮ ಬೇಡಿಕೆ ಏನೆಂದರೆ,

. ‘ಇಂಡಿಸೆಂಟ್ ರೆಪ್ರೆಸೆಂಟೇಷನ್ ಆಫ್ ವುಮೆನ್ಸ್ ಆಕ್ಟ್’ ಅಡಿಯಲ್ಲಿ 3 ವರ್ಷಗಳ ಬದಲಿಗೆ 10 ವರ್ಷಗಳ ಶಿಕ್ಷೆ ವಿಧಿಸಬೇಕು ಮತ್ತು 3 ವರ್ಷಗಳವರೆಗೆ ಜಾಮೀನು ನೀಡಬಾರದು. 3 ವರ್ಷಗಳವರೆಗೆ ಜಾಮೀನು ಸಿಗದ ನಿಯಮವು ಭಯೋತ್ಪಾದಕರಿಗೆ ಮಾಡಿರುವ ನಿಯಮವಾಗಿದೆ ಮತ್ತು ಈ ನಿಯಮವನ್ನು ಈ ಸಾಂಸ್ಕೃತಿಕ ಭಯೋತ್ಪಾದಕರಿಗೂ ಅನ್ವಯಗೊಳಿಸಬೇಕು.

. ‘ಲಾ ಆಫ್ ಎಥಿಕ್ಸ್ ಕೋಡ್’ ಅನ್ನು ಸಿದ್ಧಪಡಿಸಿ ಚಲನಚಿತ್ರಗಳು, ವೀಡಿಯೊಗಳಲ್ಲಿನ ದೃಶ್ಯಗಳು, ವಿಷಯ, ಬಟ್ಟೆ ಮತ್ತು ಭಾಷೆಯ ಮೇಲೆ ಮಿತಿ ಇರಬೇಕು ಮತ್ತು ಈ ಮಿತಿಯನ್ನು ಮೀರಿದರೆ 10 ರಿಂದ 20 ವರ್ಷಗಳ ಶಿಕ್ಷೆ ವಿಧಿಸಬೇಕು.

ಅನೇಕ ಸಂತರು ‘ಭಾರತ ದೇಶವು ಮಹಾನ್ ರಾಷ್ಟ್ರವಾಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಈ ಕಾರ್ಯದಲ್ಲಿ ಏನಾದರೂ ಅಡೆತಡೆಗಳು ಎದುರಾಗುತ್ತಿದ್ದರೆ, ನಾವು ಮುಂದಾಳತ್ವ ವಹಿಸಿ ಅವುಗಳನ್ನು ತಡೆಯಬೇಕು. ಈ ಹೋರಾಟವನ್ನು ನಾವು ಖಂಡಿತವಾಗಿಯೂ ಗೆಲ್ಲುತ್ತೇವೆ!

ಸತ್ಯನಿಷ್ಠ ಹಿಂದೂತ್ವನಿಷ್ಠ ಸಂಘಟನೆ ಎಂದರೆ ‘ಸನಾತನ ಸಂಸ್ಥೆ’! ಶ್ರೀ. ಉದಯ ಮಾಹುರಕರ

ಸನಾತನ ಸಂಸ್ಥೆಯು ಸಂಸ್ಕಾರ ಸಿಂಚನದ ಕಾರ್ಯವನ್ನು ಮಾಡುತ್ತಿದೆ. 2018 ರಲ್ಲಿ ಕೆಲವು ಮತಾಂಧರು ‘ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು. ಸಂಸ್ಥೆಯ ಕಾರ್ಯವನ್ನು ನಾನು ಹತ್ತಿರದಿಂದ ನೋಡಿದ್ದರಿಂದ ‘ಇಂಡಿಯಾ ಟುಡೇ’ ಸಹಾಯಕ ಸಂಪಾದಕನಾಗಿದ್ದಾಗ ನಾನು ಸನಾತನ ಸಂಸ್ಥೆಯನ್ನು ಬೆಂಬಲಿಸಿ ಲೇಖನವನ್ನು ಬರೆದೆನು. ಅದರಲ್ಲಿ ನಾನು ‘ನಿಷೇಧ ಹೇರಬೇಕಾದರೆ ತಬ್ಲಿಘಿ ಜಮಾತ್, ದೇವಬಂದ್ ಮುಂತಾದ ಮಸೀದಿಗಳ ಮೇಲೆ ನಿಷೇಧ ಹೇರಬೇಕು’ ಎಂದು ಹೇಳಿದ್ದೆನು. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಎಂದರೆ ಕಲಿಯುಗದ ಸಾತ್ವಿಕ ಜನರ ಒಗ್ಗೂಡುವಿಕೆಯಾಗಿದೆ! –

 

ಭಾರತದಲ್ಲಿ ಬೆಳೆಯುತ್ತಿರುವ ಕಾಲ್ಪನಿಕ ಕ್ರೈಸ್ತ ಪ್ರಸಾರವನ್ನು ತಡೆಯಲು ಅಧ್ಯಯನಪೂರ್ಣ ಹೋರಾಟ ಅಗತ್ಯ!ನೀರಜ ಅತ್ರಿ, ಅಧ್ಯಕ್ಷರು, ನ್ಯಾಷನಲ್ ಸೆಂಟರ್ ಫಾರ್ ಹಿಸ್ಟಾರಿಕಲ್ ರಿಸರ್ಚ್ ಅಂಡ್ ಅನಾಲಿಸಿಸ್

ಶ್ರೀ ನೀರಜ್ ಅತ್ರಿ

ಹಿಂದೂಗಳ ಮುಂದೆ ಜಿಹಾದಿಗಳ ಅಪಾಯವಿರುವಂತೆಯೇ, ಅದಕ್ಕಿಂತ ದೊಡ್ಡ ಅಪಾಯವನ್ನು ಕ್ರೈಸ್ತ ಪಂಥವು ರಚಿಸಿದೆ. ಅವರ ಮತಾಂತರದ ಕಾರ್ಯವು ಅತ್ಯಂತ ಅಪಾಯಕಾರಿಯಾಗಿದೆ; ಆದರೆ ಅದು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಕ್ರೈಸ್ತ ಪಂಥವು ಕಳೆದ 2025 ವರ್ಷಗಳಿಂದ ಜಗತ್ತನ್ನು ಮೂರ್ಖರನ್ನಾಗಿಸಿದೆ. ಈಗ ಜಗತ್ತಿಗೆ ಈ ಸತ್ಯವನ್ನು ಹೇಳುವ ಸಮಯ ಬಂದಿದೆ. ಯಾವಾಗಲೂ ಸತ್ಯವನ್ನು ಹುಡುಕುವ, ಅನುಭವಜನ್ಯ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡುವ ದೇಶದಲ್ಲಿ ಕೇವಲ ಒಂದು ಪುಸ್ತಕದ ಮಾಹಿತಿಯೇ ಸತ್ಯ ಎಂದು ಹೇಳಿ ಪರಿವರ್ತನೆ ಮಾಡಲಾಗುತ್ತಿದೆ. ಕ್ರೈಸ್ತ ಪಂಥವು ಸುಳ್ಳಿನ ಮೇಲೆ ಆಧಾರಿತವಾಗಿದೆ. ಇದನ್ನು ಪಾಶ್ಚಿಮಾತ್ಯ ದೇಶಗಳ ಬಹುತೇಕ ಇತಿಹಾಸ ಸಂಶೋಧಕರು ಸಪ್ರಮಾಣವಾಗಿ ಸ್ಪಷ್ಟಪಡಿಸಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವ ಭಗವಾನ್ ಪರಶುರಾಮರ ಕಾರ್ಯವನ್ನು ಮಾಡುತ್ತಿದ್ದಾರೆ!ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ

ಶ್ರೀ ಅಭಯ್ ವರ್ತಕ್

ಸನಾತನ ರಾಷ್ಟ್ರದ ಶಂಖನಾದವನ್ನು ಮಾಡಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಭವ್ಯ ಮಹೋತ್ಸವವನ್ನು ಆಯೋಜಿಸಿದ್ದಾರೆ. ಇದು ಸನಾತನ ರಾಷ್ಟ್ರದ ಶಂಖನಾದವಾಗಿದೆ. ಈ ಹಂತವನ್ನು ತಲುಪಲು ಸನಾತನವು ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಯಿತು. ಅನೇಕ ವಿರೋಧಿಗಳು ಮತ್ತು ದೊಡ್ಡ ದೊಡ್ಡ ತನಿಖಾ ಸಂಸ್ಥೆಗಳು ಸನಾತನ ಸಂಸ್ಥೆಯನ್ನು ನಾಶಮಾಡಲು ಪ್ರಯತ್ನಿಸಿದರೂ, ಸನಾತನ ಸಂಸ್ಥೆಯು ನಾಶವಾಗಲಿಲ್ಲ; ಆದರೆ ಅದೇ ಸಂಸ್ಥೆಯು ಇಂದು ಸನಾತನ ರಾಷ್ಟ್ರದ ಶಂಖನಾದವನ್ನು ಮಾಡುತ್ತಿದೆ; ಏಕೆಂದರೆ ಸಂಸ್ಥೆಯ ಮೇಲೆ ಭಗವಾನ್ ಶ್ರೀಕೃಷ್ಣನ ಆಶೀರ್ವಾದವಿದೆ. ಗೋವಾ ಭಗವಾನ್ ಪರಶುರಾಮರ ಭೂಮಿಯಾಗಿದೆ. ಭಗವಾನ್ ಪರಶುರಾಮರ ಕಾರ್ಯವನ್ನು ಇಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡುತ್ತಿದ್ದಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು 25 ವರ್ಷಗಳ ಹಿಂದೆ ಸನಾತನ ಸಂಸ್ಥೆಯ ಬೀಜವನ್ನು ಬಿತ್ತಿದರು. ಇಂದು ಅದು ಹೆಮ್ಮರವಾಗಿ ಬೆಳೆದಿದೆ, ಅದರ ವಿರಾಟ ಸ್ವರೂಪವು ಇಂದು ಈ ಕಾರ್ಯಕ್ರಮದ ರೂಪದಲ್ಲಿ ನಿಮ್ಮ ಮುಂದೆ ಕಾಣಿಸುತ್ತಿದೆ. ಸನಾತನದ ಪ್ರತಿಯೊಬ್ಬ ಸಾಧಕನಲ್ಲೂ ರಾಷ್ಟ್ರ ಮತ್ತು ಧರ್ಮ ಪ್ರೀತಿಯು ರೋಮ ರೋಮಗಳಲ್ಲಿ ಬೆರೆತುಹೋಗಿದೆ. ನಾವು ಕೇವಲ ಶ್ರೀರಾಮಸೇನೆಯ ಒಂದು ವಾನರ ಮತ್ತು ಅಳಿಲಿನಂತೆ ನಮ್ಮ ಚಿಕ್ಕ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸಾಧಕರನ್ನು ಶಿಲ್ಪಿಯಂತೆ ರೂಪಿಸಿ ದೇವರ ಸ್ವರೂಪವನ್ನು ನೀಡಿದ್ದಾರೆ. ಆದ್ದರಿಂದ ಅವರ ಬಗ್ಗೆ ಎಷ್ಟೇ ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ.

ಪರಶುರಾಮ ಭೂಮಿಯಲ್ಲಿ ನಡೆದ ಶಂಖನಾದದಿಂದ ಸನಾತನ ರಾಷ್ಟ್ರ ಖಚಿತವಾಗಿ ಬರಲಿದೆ!ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ ರಮೇಶ್ ಶಿಂಧೆ

ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಸರಕಾರದ ವಿರುದ್ಧದ ಆಂದೋಲನದಲ್ಲಿ ಹಿಂದೂಗಳನ್ನು ಮಾತ್ರ ಕೊಲ್ಲಲಾಯಿತು. ಕಾಶ್ಮೀರ, ಕೇರಳ ಮತ್ತು ಬಂಗಾಳದಿಂದ ಹಿಂದೂಗಳು ನಾಶವಾಗುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದೂತ್ವನಿಷ್ಠ ಕಾರ್ಯಕರ್ತರನ್ನು ಹೆಕ್ಕಿ ಹೆಕ್ಕಿ ಕೊಲ್ಲಲಾಗುತ್ತಿದೆ. ಇತ್ತೀಚೆಗೆ ಪಹಲ್ಗಾಮನಲ್ಲಿ ನಡೆದ ದಾಳಿಯಲ್ಲಿಯೂ ಧರ್ಮವನ್ನು ವಿಚಾರಿಸಿ ಹಿಂದೂಗಳನ್ನು ಹತ್ಯೆ ಮಾಡಲಾಯಿತು. ಪ್ರತಿಯೊಂದು ಕಡೆ ಹಿಂದೂಗಳನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ. ಬಹುಸಂಖ್ಯಾತರಾದ ಹಿಂದೂಗಳು ಹೊಡೆತ ತಿನ್ನುವ ಏಕೈಕ ದೇಶ ಭಾರತವಾಗಿದ್ದರೂ ಹಿಂದೂಗಳು ಕೇವಲ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಈಗ ಕೇವಲ ಜಾಗೃತಿ ಮೂಡಿಸುತ್ತಾ ಕೂರುವ ಬದಲು ಅದರ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಸಮರ್ಥ ರಾಮದಾಸ ಸ್ವಾಮಿಗಳು ಜನಜಾಗೃತಿ ಮೂಡಿಸಿ ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯದಲ್ಲಿ ಸಮಾಜವನ್ನು ಪಾಲ್ಗೊಳ್ಳುವಂತೆ ಮಾಡಿದಂತೆಯೇ, ಇಂದು ಸಂತರು ಜಾಗೃತಿ ಮೂಡಿಸುತ್ತಿರುವುದರಿಂದ ನಾವು ಸಹ ಈ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಮೂಲಕ ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಹೋರಾಡಲು ಸಿದ್ಧರಾಗಬೇಕಾಗಿದೆ. ರಾಮೇಶ್ವರದಲ್ಲಿ ಶಂಖನಾದವಾದಾಗ ಲಂಕಾದಹನ ಖಚಿತವಾಯಿತು; ಕುರುಕ್ಷೇತ್ರದಲ್ಲಿ ಈ ಶಂಖನಾದವಾದಾಗ ಕೌರವರ ಸಂಹಾರ ಖಚಿತವಾಯಿತು; ಛತ್ರಪತಿ ಶಿವಾಜಿ ಮಹಾರಾಜರು ಈ ಶಂಖನಾದವನ್ನು ಮಾಡಿದಾಗ ಹಿಂದವಿ ಸ್ವರಾಜ್ಯ ಸಾಕಾರವಾಯಿತು. ಈಗ ಇದೇ ಶಂಖನಾದವು ಪರಶುರಾಮ ಭೂಮಿಯಲ್ಲಿ ನಡೆದರೆ, ಸನಾತನ ರಾಷ್ಟ್ರ ಖಚಿತವಾಗಿಯೂ ಬರಲಿದೆ.

ಇನ್ನು ಮುಂದೆ ಕೇಸರಿ ಬಣ್ಣ ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಕಾಣಿಸಲಿದೆ!ವಿನಾಯಕ ಶಾನಭಾಗ, ಸನಾತನ ಸಂಸ್ಥೆ

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಹಿಂದೂತ್ವನಿಷ್ಠರು ಮತ್ತು ಸಾಧಕರು ಕೇಸರಿ ಬಣ್ಣದ ಉಡುಪುಗಳನ್ನು ಧರಿಸಿದ್ದರು!

ಕೇಸರಿ ಬಣ್ಣವು ತ್ರೇತಾ ಮತ್ತು ದ್ವಾಪರ ಯುಗಗಳಿಗೆ ಸಂಬಂಧಿಸಿದೆ. ಅದು ಹನುಮಂತನಿಗೆ ಸಂಬಂಧಿಸಿದೆ. ಹನುಮಂತನು ಸ್ವತಃ ರಾಮಭಕ್ತನಾಗಿದ್ದನು. ಅವನಲ್ಲಿ ದಾಸ್ಯ ಭಾವ ಮತ್ತು ವೀರ ಭಾವವಿದೆ. ಬ್ರಹ್ಮ ತೇಜ ಮತ್ತು ಕ್ಷಾತ್ರ ತೇಜ ಎರಡೂ ಬಣ್ಣಗಳಿರುವ ಬಣ್ಣವೆಂದರೆ ಅದು ಕೇಸರಿ ಬಣ್ಣವಾಗಿದೆ. ಇಂದು ಮಹೋತ್ಸವದಲ್ಲಿ ಉಪಸ್ಥಿತರಿರುವವರೆಲ್ಲರೂ ಕೇಸರಿ ಬಣ್ಣದ ಉಡುಪುಗಳನ್ನು ಧರಿಸಿದ್ದಾರೆ. ಇದು ದೈವೀ ಸಂಕೇತವಾಗಿದೆ. ಇನ್ನು ಮುಂದೆ ಕೇಸರಿ ಬಣ್ಣ ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಕಾಣಿಸಲಿದೆ.

 

‘ಹಿಂದೂ ರಾಷ್ಟ್ರ ಏಕೆ ಬೇಕು?’ ಎಂಬ ಮರಾಠಿ ಭಾಷೆಯ ‘ಇ-ಪುಸ್ತಕ’ ಬಿಡುಗಡೆ!

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ನ್ಯಾಯವಾದಿ ವಿಷ್ಣು ಶಂಕರ ಜೈನ್, ಶ್ರೀ ನೀರಜ ಅತ್ರಿ, ಉದಯ ಮಾಹುರಕರ, ರಮೇಶ ಶಿಂದೆ, ಅಭಯ ವರ್ತಕ ಅವರ ಹಸ್ತದಿಂದ ‘ಹಿಂದೂ ರಾಷ್ಟ್ರ ಏಕೆ ಬೇಕು?’, ಎಂಬ ಮರಾಠಿ ‘ಇ-ಪುಸ್ತಕ’ವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕವು ‘ಅಮೆಜಾನ್ ಕಿಂಡಲ್’ ನಲ್ಲಿ ಲಭ್ಯವಿರುತ್ತದೆ.

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಎರಡನೇ ದಿನ ಶ್ರೀರಾಮ ನಾಮದ 1 ಕೋಟಿ ಜಪದ ಸಂಕಲ್ಪ ಪೂರ್ಣಗೊಂಡಿತು.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 83ನೇ ಜನ್ಮದಿನ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ಈ ದುಗ್ಧಶರ್ಕರಯೋಗದ ನಿಮಿತ್ತದಿಂದ ಫೋಂಡಾ, ಗೋವಾದ ಇಂಜಿನಿಯರಿಂಗ್ ಮೈದಾನದಲ್ಲಿ ಭವ್ಯ ಮತ್ತು ದಿವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಭಾವಪೂರ್ಣ ವಾತಾವರಣದಲ್ಲಿ ನಡೆಯುತ್ತಿದೆ. ಈ ಮಹೋತ್ಸವದ ಮೊದಲ ಮತ್ತು ಎರಡನೇ ದಿನ ಶ್ರೀರಾಮ ನಾಮ ಜಪಯಜ್ಞವು ನೆರವೇರಿತು. ಈ ಸಮಯದಲ್ಲಿ ಉಪಸ್ಥಿತರಿದ್ದ ಸಾಧಕರು, ಹಿಂದೂತ್ವನಿಷ್ಠರು ಮತ್ತು ಎಲ್ಲರೂ ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ನಾಮಜಪವನ್ನು ಭಾವಪೂರ್ಣವಾಗಿ ಮಾಡಿದರು. ‘ಭಾರತದಲ್ಲಿ ಶೀಘ್ರದಲ್ಲೇ ರಾಮರಾಜ್ಯ ಬರಬೇಕು’ ಎಂಬ ಸಂಕಲ್ಪದೊಂದಿಗೆ 1 ಕೋಟಿ ಶ್ರೀರಾಮ ನಾಮ ಜಪಯಜ್ಞವು ಪೂರ್ಣಗೊಂಡಿತು. ಈ ನಾಮಜಪದಿಂದ ಮಹೋತ್ಸವದ ಸಂಪೂರ್ಣ ಪ್ರದೇಶವು ಚೈತನ್ಯಮಯವಾಯಿತು.