|
ಕ್ವೆಟ್ಟಾ (ಬಲೂಚಿಸ್ತಾನ) – ಬಲೂಚಿಸ್ತಾನವನ್ನು ಬಲವಂತವಾಗಿ ಮತ್ತು ವಿದೇಶಿ ಶಕ್ತಿಗಳ ಸಹಾಯದಿಂದ ಪಾಕಿಸ್ತಾನದಲ್ಲಿ ವಿಲೀನಗೊಳಿಸಲಾಯಿತು. ದಶಕಗಳಿಂದ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರ, ಮಾನವ ಕಳ್ಳಸಾಗಣೆ, ಕಾಣೆಯಾಗುತ್ತಿರುವ ಜನರು, ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ನೋಡಿ ನಾವು ಈಗ ಪಾಕಿಸ್ತಾನದಿಂದ ಸ್ವತಂತ್ರರಾಗುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಜಗತ್ತು ಸಹ ಮಾನ್ಯತೆ ನೀಡಬೇಕು ಎಂದು ಬಲೂಚಿ ನಾಯಕ ಮೀರ್ ಯಾರ್ ಬಲೋಚ್ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಲೋಚ್ ಅವರು ಭಾರತವು ಬಲೂಚಿಸ್ತಾನವನ್ನು ಸ್ವತಂತ್ರ ದೇಶವೆಂದು ಮಾನ್ಯತೆ ನೀಡಬೇಕು ಮತ್ತು ಭಾರತದಲ್ಲಿ ರಾಯಭಾರಿ ಕಚೇರಿಯನ್ನು ತೆರೆಯಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಗತ್ತು ಕಣ್ಣು ಮುಚ್ಚಿ ಕೂಡಬಾರದು!
ಪಾಕಿಸ್ತಾನ ಸರಕಾರ ಮತ್ತು ಸೈನ್ಯವನ್ನು ಉದ್ದೇಶಿಸಿ ಮಾತನಾಡಿದ ಮೀರ್ ಯಾರ್ ಬಲೋಚ್ ಇವರು, “ನೀವು ನಮ್ಮನ್ನು ಕೊಂದರೂ ನಾವು ಮತ್ತೆ ಏಳುತ್ತೇವೆ. ನಮ್ಮ ವಂಶವನ್ನು ಉಳಿಸಿಕೊಳ್ಳಲು ನಾವು ಹೋರಾಡುತ್ತಿದ್ದೇವೆ. ಬಲೂಚಿ ಜನರು ಬೀದಿಗಿಳಿದಿದ್ದಾರೆ. ‘ಬಲೂಚಿಸ್ತಾನವು ಈಗ ಪಾಕಿಸ್ತಾನದ ಭಾಗವಲ್ಲ’ ಎಂದು ಅವರು ನಿರ್ಧರಿಸಿದ್ದಾರೆ. ಜಗತ್ತು ಕಣ್ಣು ಮುಚ್ಚಿ ಇದನ್ನು ಕೇವಲ ನೋಡುತ್ತಾ ಕೂರಬಾರದು”, ಎಂದು ಹೇಳಿದರು.
ನಾವು ಪಾಕಿಸ್ತಾನಿಗಳಲ್ಲ!
ಮೀರ್ ಯಾರ್ ಬಲೋಚ್ ಅವರು ಭಾರತೀಯರಿಗೆ ವಿನಂತಿಸುತ್ತಾ, “ನಾವು ಬಲೂಚಿ ಜನರು. ನಾವು ಪಾಕಿಸ್ತಾನಿಗಳಲ್ಲ. ನಮ್ಮನ್ನು ‘ಪಾಕಿಸ್ತಾನಿ’ ಎಂದು ಕರೆಯುವುದನ್ನು ನಿಲ್ಲಿಸಿ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜನರು ಮಾತ್ರ ಪಾಕಿಸ್ತಾನಿಗಳು”, ಎಂದು ಹೇಳಿದರು.
ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡಲು ಹೇಳಬೇಕು!
ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಬಿಟ್ಟುಕೊಡಲು ಹೇಳಬೇಕು. ನಾವು ಭಾರತದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಪಾಕಿಸ್ತಾನವು ಭಾರತದ ಮಾತನ್ನು ಕೇಳದಿದ್ದರೆ, 1971 ರಂತಹ ಘಟನೆ ಮತ್ತೆ ಸಂಭವಿಸಬಹುದು. ಪಾಕಿಸ್ತಾನಿ ಸೇನಾ ಮುಖ್ಯಸ್ಥರ ದುರಾಸೆಯಿಂದಾಗಿ ಮತ್ತೆ 93 ಸಾವಿರ ಪಾಕಿಸ್ತಾನಿ ಸೈನಿಕರು ಭಾರತದ ಮುಂದೆ ಶರಣಾಗಬೇಕಾಗಬಹುದು. 1971 ರಲ್ಲಿ ಢಾಕಾದಲ್ಲಿ ಏನು ನಡೆಯಿತೋ ಅದು ಕಾಶ್ಮೀರದಲ್ಲಿಯೂ ಸಂಭವಿಸಬಹುದು. ಭಾರತವು ಪಾಕಿಸ್ತಾನಿ ಸೈನ್ಯವನ್ನು ಸೋಲಿಸಲು ಸಮರ್ಥವಾಗಿದೆ, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನವು ತನ್ನ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತನ್ನ ಭಾಗವೆಂದು ತೋರಿಸಿದರೆ, ಚೀನಾ ಟಿಬೆಟ್ ಮತ್ತು ಅರುಣಾಚಲ ಪ್ರದೇಶಗಳನ್ನು ತನ್ನ ಭಾಗವೆಂದು ಹೇಳಿಕೊಳ್ಳುತ್ತಿದ್ದರೆ, ಭಾರತವು ಸಹ ನಕ್ಷೆಯ ಮೂಲಕ ಬಲೂಚಿಸ್ತಾನವನ್ನು ಸ್ವತಂತ್ರ ದೇಶವೆಂದು ತೋರಿಸಬೇಕು ಮತ್ತು ಅದನ್ನು ಬೆಂಬಲಿಸಬೇಕು ಎಂದು ಭಾರತೀಯರು ಬಯಸುತ್ತಾರೆ! |