ರಾಮನಾಥಿ (ಗೋವಾ) ಇಲ್ಲಿನ ಸನಾತನ ಆಶ್ರಮದ ಪ್ರವೇಶದ್ವಾರದ ಮುಂದೆ ದ್ವಾರಕಾನಗರಿಯಂತಹ ಭವ್ಯ ಕಮಾನು ನಿರ್ಮಾಣ!

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ!

ಸನಾತನದ ರಾಮನಾಥಿ ಆಶ್ರಮದ ಮುಂದಿನ ಪ್ರವೇಶದ್ವಾರದಲ್ಲಿ ನಿರ್ಮಿಸಲಾದ ಕಮಾನು

ಫೊಂಡಾ, ಮೇ ೧೫ (ವಾರ್ತೆ.) – ಶ್ರೀರಾಮನ ವಿಜಯದ ಶಂಖನಾದವು ಅಯೋಧ್ಯೆಯಿಂದ ಎಲ್ಲಾ ದಿಕ್ಕುಗಳಿಗೂ ಮೊಳಗಿದಂತೆ, ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ೮೩ ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವದ ವರ್ಷದ ನಿಮಿತ್ತ ‘ಸನಾತನ ರಾಷ್ಟ್ರ’ದ ದಿವ್ಯ ಶಂಖನಾದವು ಭಗವಾನ್ ಶ್ರೀ ಪರಶುರಾಮರ ಪಾದಸ್ಪರ್ಶದಿಂದ ಪವಿತ್ರವಾದ ಗೋಮಂತಕ ಭೂಮಿಯಲ್ಲಿ ಮೊಳಗಲಿದೆ!

ಮೇ ೧೭ ರಿಂದ ೧೯ ರವರೆಗೆ ಸನಾತನ ಸಂಸ್ಥೆಯ ವತಿಯಿಂದ ಫೊಂಡಾದ ಫರ್ಮಾಗುಡಿಯ ಗೋವಾ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಐತಿಹಾಸಿಕ ಆಯೋಜನೆ ಮಾಡಲಾಗಿದೆ. ಭಾರತ ಸೇರಿದಂತೆ ೨೩ ದೇಶಗಳ ನಾಗರಿಕರು, ಸಂತರು, ಮಹಂತರು, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ೨೫ ಸಾವಿರಕ್ಕೂ ಅಧಿಕ ಸಾಧಕರು, ಧರ್ಮಪ್ರೇಮಿ ಹಿಂದೂಗಳ ಉಪಸ್ಥಿತಿಯು ಈ ಮಹೋತ್ಸವದ ವೈಶಿಷ್ಟ್ಯವಾಗಿದೆ. ಈ ದಿವ್ಯ ಶಂಖನಾದವು ರಾಮರಾಜ್ಯದ ಕಡೆಗೆ ಇಟ್ಟ ಮುಂದಿನ ಹೆಜ್ಜೆಯಾಗಿದೆ.

ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಮೂರು ಶಕ್ತಿಗಳ ಅಸ್ತಿತ್ವದ ಅರಿವಾಗಲು ಹಳದಿ ಬಣ್ಣದ ಆಕರ್ಷಕ ಭವ್ಯ ಸ್ವಾಗತ ಕಮಾನು ನಿರ್ಮಾಣ!

ಈ ಮಹೋತ್ಸವದ ನಿಮಿತ್ತ ರಾಮನಾಥಿಯ ಸನಾತನ ಆಶ್ರಮದ ಮುಂದಿನ ಪ್ರವೇಶದ್ವಾರದಲ್ಲಿ ಹಳದಿ ಬಣ್ಣದ ಭವ್ಯ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಮೂರು ಶಕ್ತಿಗಳ ಏಕರೂಪವೆಂದರೆ ಸಾಕ್ಷಾತ್ ಶ್ರೀ ಗುರುದೇವ ದತ್ತ. ಶ್ರೀ ದತ್ತಾತ್ರೇಯರಿಗೂ ಹಳದಿ ಬಣ್ಣವು ಪ್ರಿಯವಾಗಿದೆ ಮತ್ತು ಸನಾತನದ ಬಣ್ಣವೂ ಹಳದಿಯೇ ಆಗಿದೆ. ಅದರಂತೆ ಈ ಕಮಾನಿಗೆ ಹಳದಿ ಬಣ್ಣವಿದೆ. ಈ ಮೂರು ಶಕ್ತಿಗಳ ಅನುಭವವು ಈ ಕಮಾನನ್ನು ನೋಡಿದಾಗ ಆಗುತ್ತದೆ. ಕಲಿಯುಗದಲ್ಲಿ ಗುರುಕೃಪಾಯೋಗಾನುಸಾರ ಸಾಧನೆ ಮುಖ್ಯವಾಗಿರುವುದರಿಂದ ಈ ಕಮಾನಿನ ಮೇಲೆ ಗುರು ಶಿಷ್ಯನಿಗೆ ಆಶೀರ್ವದಿಸುತ್ತಿರುವ ಬೋಧಚಿಹ್ನೆಯನ್ನು ಹಾಕಿ ಭಾರತದ ಗುರು-ಶಿಷ್ಯ ಪರಂಪರೆಯನ್ನು ಎತ್ತಿ ತೋರಿಸಲಾಗಿದೆ, ಹಾಗೆಯೇ ಈ ಕಮಾನಿನ ಮೇಲೆ ಕಮಲದ ಹೂವಿನ ಚಿತ್ರವೂ ಇದೆ. ಇದರರ್ಥ ಈ ಕಮಾನಿನ ಮೇಲೆ ಭಗವಾನ್ ಶ್ರೀ ವಿಷ್ಣು ಮತ್ತು ಶ್ರೀಕೃಷ್ಣರೊಂದಿಗೆ ಮಹಾಲಕ್ಷ್ಮಿ ದೇವಿಯ ವಾಸ್ತವ್ಯವೂ ಇದೆ ಎಂದು ಕಂಡುಬರುತ್ತದೆ.

‘ಹಳದಿ ಬಣ್ಣದ ಆಕರ್ಷಕ ಸ್ವಾಗತ ಕಮಾನಿನಿಂದ ಇಂದು ಹೋಗುವಾಗ ಶ್ರೀಕೃಷ್ಣನ ದ್ವಾರಕಾನಗರಿಗೆ ಹೋಗುತ್ತಿದ್ದೇವೆ’ ಎಂಬ ಭಾವ ಮನಸ್ಸಿನಲ್ಲಿ ಜಾಗೃತವಾಗುತ್ತಿದೆ. ಈ ಕಮಾನಿನಿಂದ ಹೋಗುವಾಗ ದ್ವಾರಕಾನಗರದ ಶ್ರೀಕೃಷ್ಣನಿಗೆ ಅಂದರೆ, ಮಹರ್ಷಿಗಳಿಂದ ಜೀವನನಾಡಿ ಪಟ್ಟಿಯಲ್ಲಿ ವರ್ಣಿಸಲ್ಪಟ್ಟ ಶ್ರೀ ವಿಷ್ಣುವಿನ ಅಂಶರೂಪದ ಅವತಾರವಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ದರ್ಶನಕ್ಕಾಗಿ ಹೋಗುತ್ತಿದ್ದೇವೆ ಎಂಬ ಭಾವ ಜಾಗೃತವಾಗುತ್ತದೆ.