ಗೂಗಲ್cನಲ್ಲಿ ‘ಸನಾತನ ರಾಷ್ಟ್ರ’ ಪದವನ್ನು ಹುಡುಕಿದರೆ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಸಂಬಂಧಿಸಿದ ಸುದ್ದಿಗಳು ಮತ್ತು ವಿಡಿಯೋಗಳು ಎದುರಿಗೆ ಬರುತ್ತಿವೆ!
ಫೊಂಡಾ, ಮೇ ೧೫ (ವಾರ್ತೆ.) – ಗೂಗಲ್ ನಲ್ಲಿ ‘ಸನಾತನ ರಾಷ್ಟ್ರ’ ಎಂಬ ಪದವನ್ನು ಮರಾಠಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಹುಡುಕಿದರೆ, ಅದರಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಸಂಬಂಧಿಸಿದ ಸುದ್ದಿಗಳು, ವಿಡಿಯೋಗಳು ಹಾಗೂ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳೇ ಕಾಣಸಿಗುತ್ತವೆ. ಇದರ ಅರ್ಥ, ಜಗತ್ತಿನಲ್ಲಿ ಅಂದರೆ ಇಂಟರ್ನೆಟ್ ನಲ್ಲಿ ‘ಸನಾತನ ರಾಷ್ಟ್ರ’ ಎಂಬ ವಾಕ್ಯಪ್ರಯೋಗವು ಪ್ರಥಮ ಬಾರಿಗೆ ವ್ಯಾಪಕ ಮಟ್ಟದಲ್ಲಿ ಬಳಕೆಯಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ.
‘ಸನಾತನ ರಾಷ್ಟ್ರ’ ಪದವನ್ನು ಹುಡುಕಿದರೆ ಸನಾತನ ಪ್ರಭಾತ್, ಸನಾತನ ಸಂಸ್ಥೆ, ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಇವುಗಳ ವೆಬ್ ಸೈಟ್ ಗಳಲ್ಲಿನ ಸುದ್ದಿಗಳು, ಲೇಖನಗಳು, ವಿಡಿಯೋಗಳೊಂದಿಗೆ ವಿವಿಧ ಪ್ರಸಿದ್ಧ ಸುದ್ದಿವಾಹಿನಿಗಳು ಮಹೋತ್ಸವದ ಬಗ್ಗೆ ಪ್ರಕಟಿಸಿದ ಸುದ್ದಿಗಳು ಲಭ್ಯವಾಗುತ್ತಿವೆ.