
ಹರಿದ್ವಾರ (ಉತ್ತರಾಖಂಡ) – ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಯೋಗ ಗುರು ರಾಮದೇವ ಬಾಬಾ ಪಾಕಿಸ್ತಾನವನ್ನು ‘ಒಂದು ವಿಫಲ ರಾಷ್ಟ್ರ’ ಎಂದು ಕರೆದಿದ್ದಾರೆ. ಅದು ಶೀಘ್ರದಲ್ಲೇ ಅನೇಕ ತುಂಡುಗಳಾಗಿ ವಿಭಜನೆಯಾಗಲಿದೆ ಮತ್ತು ಭವಿಷ್ಯದಲ್ಲಿ ಕರಾಚಿ ಮತ್ತು ಲಾಹೋರ್‌ನಲ್ಲಿ ಸನಾತನ ಗುರುಕುಲಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
🚨 “Will have to build next Gurukuls in Karachi & Lahore” — Baba Ramdev
📉 Predicts Pakistan’s collapse citing unrest in Balochistan & PoK
🇮🇳 Envisions Sanatan resurgence beyond borders!#IndianArmy #IndiaPakistanWar #Kashmir
VC: @UpnewsUp pic.twitter.com/l1NsXkuEhT— Sanatan Prabhat (@SanatanPrabhat) May 5, 2025
ರಾಮದೇವ್ ಬಾಬಾ ಮಾತು ಮುಂದುವರೆಸುತ್ತಾ, ಪಾಕಿಸ್ತಾನದ ಪಶ್ತೂನ್ ಮತ್ತು ಬಲೂಚಿಸ್ತಾನದಂತಹ ಪ್ರದೇಶಗಳ ಜನರು ಸ್ವಾತಂತ್ರ್ಯವನ್ನು ಒತ್ತಾಯಿಸುತ್ತಿದ್ದಾರೆ, ಆ ಮೂಲಕ ಪಾಕಿಸ್ತಾನದ ಆಂತರಿಕ ಪರಿಸ್ಥಿತಿ ಬಹಿರಂಗವಾಗುತ್ತಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪರಿಸ್ಥಿತಿಯೂ ತುಂಬಾ ಕೆಟ್ಟದಾಗಿದೆ. ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ. ಸನಾತನ ಸಂಸ್ಕೃತಿಯ ಬಗ್ಗೆ ಪ್ರಸ್ತಾಪಿಸುವಾಗ, ರಾಮದೇವ್ ಬಾಬಾ ಅವರು ಭಾರತೀಯ ಸಂವಿಧಾನ ಮತ್ತು ಸನಾತನ ಧರ್ಮ ಈ ಎರಡಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ಹೇಳಿದರು. ರಾಷ್ಟ್ರೀಯ ಧರ್ಮ ಮತ್ತು ವೈದಿಕ ಧರ್ಮವೇ ಸರ್ವೋಚ್ಚ ಎಂದು ಹೇಳಿದ ಅವರು, ದೇಶವಾಸಿಗಳು ಏಕತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!