ಔರಂಗಜೇಬನ ಗೋರಿಯನ್ನು ಕಿತ್ತೊಗೆಯಬೇಕು; ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅನಿಸಿಕೆ

ಕಾಂಗ್ರೆಸ್ ಆಡಳಿತದಲ್ಲಿ ಗೋರಿಗೆ ರಕ್ಷಣೆ ಸಿಕ್ಕಿತ್ತು

ಮುಂಬಯಿ – ಸಮಾಜವಾದಿ ಪಕ್ಷದ ಶಾಸಕ ಅಬು ಆಜ್ಮಿ ‘ಔರಂಗಜೇಬ ಕ್ರೂರ ಆಡಳಿತಗಾರನಾಗಿರಲಿಲ್ಲ’ ಎಂದು ಹೇಳಿಕೆ ನೀಡಿದ್ದರು. ನಂತರ ಭಾಜಪ ಸಂಸದ ಉದಯನರಾಜೆ ಭೋಸಲೆ ‘ಔರಂಗಜೇಬನ ಗೋರಿಯನ್ನು ಕಿತ್ತುಹಾಕಬೇಕು’ ಎಂದು ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಮಗೂ ಹಾಗೆ ಅನಿಸುತ್ತದೆ. ಕೇವಲ ಕೆಲವು ವಿಷಯಗಳನ್ನು ಕಾನೂನಿನಿಂದ ಮಾಡಬೇಕಾಗುತ್ತದೆ; ಏಕೆಂದರೆ ಆ ಗೋರಿ ಸಂರಕ್ಷಿತವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಆ ಗೋರಿಗೆ ASI (ಭಾರತೀಯ ಪುರಾತತ್ವ ಸಮೀಕ್ಷೆ) ರಕ್ಷಣೆ ನೀಡಲಾಗಿದೆ” ಎಂದರು.

ಸಂಪಾದಕೀಯ ನಿಲುವು

ನಾಗರಿಕರಂತೆ ಸರಕಾರದ ಮನಸ್ಸಿನಲ್ಲಿರುವುದನ್ನು ಶೀಘ್ರವಾಗಿ ಪೂರೈಸಿ ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರವನ್ನು ಮತ್ತೊಮ್ಮೆ ನಿರ್ಮಿಸಬೇಕು ಎಂಬುದು ನಮ್ಮ ನಿರೀಕ್ಷೆ!