Actor Vineet Kumar Singh Statement :’ಹಿಂಸೆಯ ದೃಶ್ಯಗಳಲ್ಲಿ ನಿಜವಾದ ನೋವುಗಳನ್ನು ತೋರಿಸಿದ್ದರೆ, ಜನರು ಅದನ್ನು ಸಹಿಸಲು ಸಾಧ್ಯವಾಗುತ್ತಿರಲಿಲ್ಲ!’ – ನಟ ವಿನೀತ ಕುಮಾರ್ ಸಿಂಗ್

‘ಛಾವಾ’ ಸಿನಿಮಾದಲ್ಲಿ ಕವಿ ಕಲಶ್‌ನ ಪಾತ್ರ ನಿರ್ವಹಿಸಿದ ನಟ ವಿನೀತ ಕುಮಾರ್ ಸಿಂಗ್ ಅವರ ಹೇಳಿಕೆ

‘ಛಾವಾ’ ಸಿನಿಮಾದಲ್ಲಿ ಕವಿ ಕಲಶನ ಪಾತ್ರ ನಿರ್ವಹಿಸಿದ ನಟ ವಿನೀತ ಕುಮಾರ್ ಸಿಂಗ್

ಮುಂಬಯಿ – ‘ಛಾವಾ’ ಸಿನಿಮಾದಲ್ಲಿ ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರಿಗೆ ನೀಡಿದ ಹಿಂಸೆಯನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಲಾಗಿದೆ. ಸಿನಿಮಾದ ಕೊನೆಯ 30 ನಿಮಿಷಗಳಲ್ಲಿ ಪ್ರೇಕ್ಷಕರು ಏನು ನೋಡಿದ್ದಾರೋ ಅದನ್ನು ದೊಡ್ಡ ಪರದೆಯ ಮೇಲೆ ತೋರಿಸುವುದು ಸುಲಭವಲ್ಲ. ಸಿನಿಮಾದಲ್ಲಿ ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರಿಗೆ ಮಾಡಿದ ಹಿಂಸೆಯನ್ನು ನೋಡಿ ಎಲ್ಲರೂ ಕಣ್ಣು ಮುಚ್ಚಿಕೊಂಡಿದ್ದರು. ಹಿಂಸೆಯ ಕ್ರೌರ್ಯದ ದೃಶ್ಯಗಳನ್ನು ವಾಸ್ತವಕ್ಕೆ ಹತ್ತಿರವಾಗಿ ತೋರಿಸಿದ್ದರೆ, ಜನರು ಅದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದು ‘ಛಾವಾ’ ಸಿನಿಮಾದಲ್ಲಿ ಕವಿ ಕಲಶನ ಪಾತ್ರ ನಿರ್ವಹಿಸಿದ ನಟ ವಿನೀತ್ ಕುಮಾರ್ ಸಿಂಗ್ ಹೇಳಿದ್ದಾರೆ. ಈ ಸಿನಿಮಾ 500 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ.

ನಟ ಸಿಂಗ್ ಅವರು ಮಾತು ಮುಂದುವರೆಸಿ,

1. ಸಿನಿಮಾದ ಚಿತ್ರೀಕರಣ ಪ್ರಾರಂಭಿಸುವ ಮೊದಲು ನಾನು ಛತ್ರಪತಿ ಸಂಭಾಜಿ ಮಹಾರಾಜ ಮತ್ತು ಕವಿ ಕಲಶ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದೆ. ನಾನು ಅಲ್ಲಿ ಅರ್ಧ ದಿನ ಕಳೆದಿದ್ದೆ. ಅಲ್ಲಿನ ಅನೇಕ ಜನರೊಂದಿಗೆ ಮಾತನಾಡಿದೆ. ಕೆಲವು ವೃದ್ಧರು ಅಲ್ಲಿ ಬಹಳ ದಿನಗಳಿಂದ ವಾಸಿಸುತ್ತಿದ್ದರು. ಅವರು ನನಗೆ ಅನೇಕ ವಿಷಯಗಳನ್ನು ಹೇಳಿದರು.

2. ನೀವು ಒಂದು ತಿಂಗಳಿಗಿಂತ ಹೆಚ್ಚು ಕಾಲ ಯಾರನ್ನಾದರೂ ಹಿಂಸಿಸುತ್ತಿದ್ದರೆ, ನೀವು ಅವರಿಗೆ ಗುಂಡು ಹಾರಿಸಿದರೆ, ನಿಮಗೆ ಏನು ಕಾಣಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ನಾನು ವೈದ್ಯನಾಗಿದ್ದೇನೆ. ಅತ್ಯಂತ ಗಂಭೀರ ಅಪಘಾತಗಳ ನಂತರ ಜನರು ತುರ್ತು ವಾರ್ಡ್‌ಗೆ ಬರುವುದನ್ನು ನಾನು ನೋಡಿದ್ದೇನೆ. ನಾವು ಅವರ ಗಾಯಗಳಿಗೆ ‘ಆಂಟಿಸೆಪ್ಟಿಕ್’ ಹಾಕಿದಾಗ, ಅವರು ನೋವಿನಿಂದ ಕಿರುಚುತ್ತಾರೆ. ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವಾಗ ಜನರು ನೋವಿನಿಂದ ಕೂಗುತ್ತಾರೆ.

3. ‘ಛಾವಾ’ ದಲ್ಲಿ ತೆರೆದ ಗಾಯಗಳಿಗೆ ಉಪ್ಪನ್ನು ಉಜ್ಜುವುದನ್ನು ನೀವು ನೋಡುತ್ತೀರಿ. ನೀವು ಛತ್ರಪತಿ ಸಂಭಾಜಿ ಮಹಾರಾಜರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ಹೋಗಿ. ಅಲ್ಲಿನ ಜನರು ನಿಮಗೆ ಅಂತಹ ಅನೇಕ ವಿಷಯಗಳನ್ನು ಹೇಳುತ್ತಾರೆ. ಸಿನಿಮಾ ಪ್ರಾರಂಭಿಸುವ ಮೊದಲು ನಾನು ಅವರ ಆಶೀರ್ವಾದ ಪಡೆಯಲು ಅಲ್ಲಿಗೆ ಹೋಗಿದ್ದೆ ಎಂದು ಹೇಳಿದರು.