ಗೋಪಾಲಗಂಜ್ (ಬಿಹಾರ) – ಛತ್ರಪತಿ ಶಿವಾಜಿ ಮಹಾರಾಜ್, ಛತ್ರಪತಿ ಸಂಭಾಜಿ ಮಹಾರಾಜ್, ಮಹಾರಾಣಾ ಪ್ರತಾಪ್ ಮತ್ತು ರಾಣಿ ಲಕ್ಷ್ಮೀಬಾಯಿ ಅವರಂತಹ ಶ್ರೇಷ್ಠ ಯೋಧರಿದ್ದರೂ ಔರಂಗಜೇಬನನ್ನು ಶ್ರೇಷ್ಠ ಎಂದು ಕರೆಯುವುದು ದೇಶದ ದುರದೃಷ್ಟ. ಕಾಲ ಬದಲಾಗುತ್ತಿದೆ ಮತ್ತು ಒಂದೊಂದಾಗಿ ಎಲ್ಲವೂ ಸರಿಯಾಗುತ್ತದೆ. ಪ್ರಾಚೀನ ಭಾರತೀಯ ಸಂಸ್ಕೃತಿಯ ಧ್ವಜವು ಮತ್ತೊಮ್ಮೆ ಹಾರಾಡುತ್ತದೆ. ಭಾರತವು ಅನಿವಾರ್ಯವಾಗಿ ಹಿಂದೂ ರಾಷ್ಟ್ರವಾಗುತ್ತದೆ ಎಂದು ನನಗೆ ದೃಢವಾದ ನಂಬಿಕೆ ಇದೆ ಎಂದು ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದ್ದಾರೆ.