ಸಮಾಜಘಾತುಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿಂದೂಗಳಿಂದ ಪೊಲೀಸರಿಗೆ ಮನವಿ
ಪೇಣ್(ಮಹಾರಾಷ್ಟ್ರ) – ಪೇಣ್ ಪಟ್ಟಣದ ಪೊಲೀಸ್ ಠಾಣೆ ಮತ್ತು ತಹಶೀಲ್ ಕಚೇರಿಯ ಆವರಣದಲ್ಲಿರುವ ಐತಿಹಾಸಿಕ ಕೋಟೆಯನ್ನು ಕೆಲವು ಸಮಾಜಘಾತುಕರು ಹಸಿರು ಬಟ್ಟೆ ಹೊದಿಸಿ ವಿರೂಪಗೊಳಿಸಿದ್ದಾರೆ. ಪೇಣ್ ನಿವಾಸಿಗಳು ಮತ್ತು ಸಹ್ಯಾದ್ರಿ ಪ್ರತಿಷ್ಠಾನ ಹಿಂದೂಸ್ತಾನ್ ವತಿಯಿಂದ ಪೇಣ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ಸಮಾಜಘಾತುಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸ್ವರೂಪ್ ಘೋಸಾಲ್ಕರ್, ಮಯೂರ್ ವನಾಗೆ, ನರೇಶ್ ಗವಂಡ್, ರೋಷನ್ ಟೆಮಘರೆ, ರೋಷನ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೇಣ್ ನಗರದ ಪೊಲೀಸ್ ಠಾಣೆಯ ಜಾಗದಲ್ಲಿ ಈ ಕೋಟೆ ಇದ್ದು, ಐತಿಹಾಸಿಕ ದಾಖಲೆಗಳ ಪ್ರಕಾರ ಅಂದಿನ ಶೂರ ಸರದಾರ ವಾಘೋಜಿ ತುಪೆ ಅವರ ಸಮಾಧಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿ ಕೆಲವು ಅವಶೇಷಗಳು ಪತ್ತೆಯಾಗಿವೆ. ಇತಿಹಾಸ ತಜ್ಞರ ಪ್ರಕಾರ, ಒಂಬತ್ತನೇ ಮತ್ತು ಹನ್ನೆರಡನೇ ಶತಮಾನದ ಶಿಲಾಹಾರ ರಾಜನ ಅವಧಿಯಲ್ಲಿ ನಿರ್ಮಿಸಲಾದ ದೇವಾಲಯದ ಅವಶೇಷಗಳು ಈ ಕೋಟೆಯ ಮೇಲೆ ಇರಬಹುದು.
ಸಂಪಾದಕೀಯ ನಿಲುವುಹಿಂದೂಗಳು ಇಂತಹ ಬೇಡಿಕೆಗಳನ್ನು ಏಕೆ ಇಡಬೇಕಾಗುತ್ತದೆ? ಪೊಲೀಸರು ತಾವಾಗಿ ಕ್ರಮ ಕೈಗೊಳ್ಳುವುದಿಲ್ಲವೇ? |