ಮುಂಬಯಿಯ ೩ ಪೊಲೀಸ ಠಾಣೆಯಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ವಾಹನ ಸ್ಫೋಟಿಸುವುದಾಗಿ ಬೆದರಿಕೆ !

ಮುಂಬಯಿ – ಗೊರೇಗಾವ, ಜೆ.ಜೆ. ಮಾರ್ಗ ಮತ್ತು ಸಚಿವಾಲಯ ಈ ಸ್ಥಳಗಳಲ್ಲಿನ ಪೊಲೀಸ ಠಾಣೆಯಲ್ಲಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇವರ ವಾಹನ ಸ್ಪೋಟಿಸಲಾಗುವುದೆಂದು ಈಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಈಮೇಲ್‌ನ ‘ಐಪಿ ಲೊಕೇಶನ್’ ಆಧಾರದಲ್ಲಿ ಬೆದರಿಕೆಯ ಮೇಲ್ ಎಲ್ಲಿಂದ ಮತ್ತು ಯಾರು ಕಳುಹಿಸಿದ್ದಾರೆ ? ಪೊಲೀಸರು ಇದರ ಶೋಧ ನಡೆಸುತ್ತಿದ್ದಾರೆ.

ಈ ಹಿಂದೆ ಓರ್ವ ಯುವಕನು ಪೊಲೀಸ ಠಾಣೆಗೆ ದೂರವಾಣಿ ಕರೆ ಮಾಡಿ ಉಪಮುಖ್ಯಮಂತ್ರಿ ಶಿಂದೆ ಇವರಿಗೆ ಜೀವ ಬೆದರಿಕೆ ಕೂಡ ನೀಡಿದ್ದನು; ಆದರೆ ಬೆದರಿಕೆ ನೀಡುವ ಯುವಕನ ಶೋಧ ನಡೆಸಿದ ನಂತರ ಅವನು ಮನೋರೋಗಿ ಇರುವನೆಂದು ಪೊಲೀಸರು ಹೇಳಿದ್ದರು. ಇದಲ್ಲದೆ ಈ ಹಿಂದೆ ಕೂಡ ಕೆಲವು ರಾಜಕೀಯ ನಾಯಕರಿಗೂ ಜೀವ ಬೆದರಿಕೆ ಬಂದಿದ್ದವು; ಆದರೆ ಇದರಲ್ಲಿ ಸತ್ಯ ಕಂಡು ಬರಲಿಲ್ಲ, ಹೀಗೆ ಇದ್ದರು ಈ ಪ್ರಕರಣದಲ್ಲಿ ೩ ಪೊಲೀಸ ಠಾಣೆಯಲ್ಲಿ ಬಂದಿರುವ ಬೆದರಿಕೆಯ ಬಗ್ಗೆ ಪೊಲೀಸರು ತ್ವರಿತ ತನಿಖೆ ಆರಂಭಿಸಿದ್ದಾರೆ.