‘ಲವ್ ಜಿಹಾದ್’ ಇದೆ ಎಂಬುದು ನಾನು ಒಪ್ಪುವುದಿಲ್ಲ!’ – ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಲೆ

ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಲೆ ಅವರ ಹೇಳಿಕೆ

ಮುಂಬಯಿ – ಲವ್ ಜಿಹಾದ್ ಘಟನೆಗಳನ್ನು ತಡೆಯಲು ರಾಜ್ಯ ಸರಕಾರವು ಸಮಿತಿಯನ್ನು ನೇಮಿಸಿದೆ; ಆದರೆ ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠವಲೆ ಅವರು ಅದನ್ನು ವಿರೋಧಿಸಿದ್ದಾರೆ. ಶಿರಡಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ ಅವರು, ‘ಲವ್ ಜಿಹಾದ್’ ಕಾನೂನನ್ನು ನಾನು ವಿರೋಧಿಸುತ್ತೇನೆ. ಹಿಂದೂ-ಮುಸ್ಲಿಂ ಹುಡುಗ-ಹುಡುಗಿ ಒಟ್ಟಿಗೆ ಬರುತ್ತಾರೆ ಮತ್ತು ಮದುವೆಯಾಗುತ್ತಾರೆ. ಆದ್ದರಿಂದ ಅದನ್ನು ಲವ್ ಜಿಹಾದ್ ಎಂದು ಕರೆಯುವುದು ತಪ್ಪು. ಲವ್ ಜಿಹಾದ್ ಪರಿಕಲ್ಪನೆಯನ್ನು ನಾನು ಒಪ್ಪುವುದಿಲ್ಲ; ಆದರೆ ಮದುವೆಯ ನಂತರ ಮತಾಂತರ ಆಗಬಾರದು ಎಂದು ಕಾನೂನಿನಲ್ಲಿ ಅವಕಾಶವಿರಬೇಕು. ಹಿಂದೂ ಹುಡುಗಿಯರನ್ನು ಬಲವಂತವಾಗಿ ಮತಾಂತರ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಅಂತಹವುಗಳಿಗೆ ಕಡಿವಾಣ ಹಾಕಬೇಕು. ಮತಾಂತರ ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು,’ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಯಾವುದೇ ವಾಸ್ತವದೊಂದಿಗೆ ಒಬ್ಬ ವ್ಯಕ್ತಿಯು ಒಪ್ಪದಿದ್ದರೆ, ಆ ವಾಸ್ತವವು ತಪ್ಪಾಗಿದೆ ಅಥವಾ ಸುಳ್ಳು ಎಂದು ಸಾಬೀತಾಗುವುದಿಲ್ಲ, ಇದು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸತ್ಯವಾಗಿದೆ. ಅಂದರೆ, ರಾಜಕೀಯಕ್ಕಾಗಿ ‘ಲವ್ ಜಿಹಾದ್’ನ ವಾಸ್ತವದ ಕಡೆಗೆ ಕಣ್ಣು ಮುಚ್ಚುವವರನ್ನು ಚುನಾವಣೆಯ ಸಮಯದಲ್ಲಿ ಹಿಂದೂ ಜನತೆ ಮರೆಯುವುದಿಲ್ಲ, ಇದು ಕೂಡ ಅಷ್ಟೇ ಸತ್ಯ!
  • ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ಅನ್ನು ತಡೆಯಲು ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವಾಗ, ಕೇಂದ್ರ ಸಾಮಾಜಿಕ ನ್ಯಾಯ ಸಚಿವರು ಈ ಕಾನೂನನ್ನು ರಾಷ್ಟ್ರವ್ಯಾಪಿಗೊಳಿಸಿ ನಿಜವಾಗಿಯೂ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಅದನ್ನು ಬಿಟ್ಟು ಪರಿಕಲ್ಪನೆಯನ್ನು ನಿರಾಕರಿಸುವುದು ಜವಾಬ್ದಾರಿಯಿಂದ ಕೈಚೆಲ್ಲಿದಂತೆ, ಎಂಬುದನ್ನು ಗಮನಿಸಬೇಕು.