೧೯೮೪ ರ ಸಿಖ್ಖವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕರಾದ ಸಜ್ಜನ ಕುಮಾರ ತಪ್ಪಿತಸ್ಥರು !

ಫೆಬ್ರುವರಿ ೧೮ ರಂದು ಶಿಕ್ಷೆ ವಿಧಿಸಲಾಗುವುದು

ನವದೆಹಲಿ – ಇಲ್ಲಿಯ ರಾವುಸ ಅವ್ಹೆನ್ಯೂ ನ್ಯಾಯಾಲಯವು ೧೯೮೪ರ ಸಿಖ್ಖವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮಾಜಿ ಸಂಸದ ಸಜ್ಜನ ಕುಮಾರ ರವರನ್ನು ಅಪರಾಧಿ ಎಂದು ಹೇಳಿದೆ. ಅವರಿಗೆ ಫೆಬ್ರುವರಿ ೧೮ ರಂದು ಶಿಕ್ಷೆ ವಿಧಿಸಲಾಗುವುದು. ಈ ಗಲಭೆಯ ಸಮಯದಲ್ಲಿ ಸರಸ್ವತಿ ವಿಹಾರದಲ್ಲಿ ನಡೆದಿರುವ ೨ ಸಿಖ್ಖರ ಹತ್ಯೆಯ ಆರೋಪವು ಅವರ ಮೇಲಿತ್ತು. ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಈ ಗಲಭೆಯು ಭುಗಿಲೆದ್ದಿತ್ತು.

೧೯೮೪ರ ನವೆಂಬರ್ ೧ ರಂದು ಪಶ್ಚಿಮ ದೆಹಲಿಯಲ್ಲಿನ ರಾಜನಗರ ಪಾರ್ಟ್-೧ ರಲ್ಲಿ ಸರದಾರ ಜಸವಂತ ಸಿಂಹ ಮತ್ತು ಅವರ ಮಗ ತರುಣದೀಪ ಸಿಂಹ ರವರ ಹತ್ಯೆ ಮಾಡಲಾಗಿತ್ತು. ಗಲಭೆಯ ಗುಂಪಿನ ನೇತೃತ್ವವನ್ನು ಸಜ್ಜನ ಕುಮಾರರವರು ವಹಿಸಿದ್ದರು.

ಸಂಪಾದಕೀಯ ನಿಲುವು

೪೧ ವರ್ಷಗಳ ನಂತರ ಆರೋಪಿಯನ್ನು ಅಪರಾಧಿಯೆಂದು ನಿಶ್ಚಯಿಸುವುದು ನ್ಯಾಯವಾಗಿರದೇ ಘೋರ ಅನ್ಯಾಯವಾಗಿದೆ !