Amanatullah Khan FIR : `ಆಪ್’ ಶಾಸಕ ಅಮಾನತುಲ್ಲಾ ಖಾನ್‌ನ ವಿರೋಧ; ಕೊಲೆ ಆರೋಪಿ ಪರಾರಿ !

  • ಪೊಲೀಸರಿಂದ ದೂರು ದಾಖಲು

  • ಪೊಲೀಸರಿಗೂ ಕೊಲೆ ಬೆದರಿಕೆ

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್

ನವದೆಹಲಿ – ಇಲ್ಲಿನ ಮುಸ್ಲಿಂ ಬಾಹಿಳ್ಯವಿರುವ ಜಾಮಿಯಾ ನಗರದಲ್ಲಿ ಪೊಲೀಸ ತಂಡದ ಮೇಲೆ ನಡೆದ ದಾಳಿಯ ನೇತೃತ್ವವನ್ನು ವಹಿಸಿದ್ದ ಓಖ್ಲಾ ಚುನಾವಣಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಖಾನ್ ಇವರು ಕೊಲೆ ಪ್ರಕರಣದ ಪರಾರಿಯಾಗಿರುವ ಆರೋಪಿಗೆ ಓಡಿಹೋಗಲು ಸಹಾಯ ಮಾಡಿದ್ದರು. ಪೊಲೀಸರು  ದಾಖಲಿಸಿರುವ ದೂರಿನಲ್ಲಿ, ಅಮಾನತುಲ್ಲಾ ಖಾನ್ ಪೊಲೀಸರೊಂದಿಗೆ ಜಗಳವಾಡಿ ಅವರನ್ನು ತಳ್ಳಿದನು ಎಂದು ತಿಳಿಸಲಾಗಿದೆ. ಇದರಿಂದ ಅಪರಾಧಿ ಓಡಿ ಹೋದನು. ಖಾನ್ ಪೊಲೀಸರಿಗೆ ಬೆದರಿಕೆ ಹಾಕುತ್ತಾ, ಇದು ನನ್ನ ಪ್ರದೇಶವಾಗಿದ್ದು, ನಾನು ಪೊಲೀಸರು ಮತ್ತು ನ್ಯಾಯಾಲಯಗಳನ್ನು ನಂಬುವುದಿಲ್ಲ’, ಎಂದು ಹೇಳಿದನು. (ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ, ಮುಸ್ಲಿಂ ಆರೋಪಿಗಳನ್ನು ಬಂಧಿಸಲು ಹೋಗುವ ಪೊಲೀಸರ ಮೇಲೆ ಯಾವಾಗಲೂ ದಾಳಿ ನಡೆಯುತ್ತದೆ. ಈ ಬಾರಿ, ಅದರ ನೇತೃತ್ವವನ್ನು ಮುಸ್ಲಿಂ ಶಾಸಕ ವಹಿಸಿದ್ದನು. ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂದು ಹೇಳುವವರು ಈಗ ಏಕೆ ಮೌನವಾಗಿದ್ದಾರೆ ? – ಸಂಪಾದಕರು)

1. ಅಪರಾಧ ವಿಭಾಗದ ದಳವು ಪರಾರಿಯಾಗಿರುವ ಅಪರಾಧಿ ಚಾವೇಝನನ್ನು ಜಾಮಿಯಾ ಪ್ರದೇಶದಿಂದ ಬಂಧಿಸಿತು. ಅದೇ ಸಮಯದಲ್ಲಿ, ಶಾಸಕ ಅಮಾನತುಲ್ಲಾ ಖಾನ್ ತಮ್ಮ 20-25 ಬೆಂಬಲಿಗರೊಂದಿಗೆ ಬಂದು ಪೊಲೀಸರನ್ನು ಉದ್ದೇಶಿಸಿ, ‘ನೀವು ಇಲ್ಲಿಗೆ ಬರಲು ಎಷ್ಟು ಧೈರ್ಯ?’ ನಾನು ಇಂತಹ ಪೊಲೀಸರು ಮತ್ತು ನ್ಯಾಯಾಲಯಗಳನ್ನು ನಂಬುವುದಿಲ್ಲ.’ ಎಂದು ಹೇಳಿದನು. (ಹೀಗೆ ಹೇಳುವ ವ್ಯಕ್ತಿ ಭಾರತದಲ್ಲಿ ಶಾಸಕನಾಗಬಹುದು, ಇದರಿಂದ ಭಾರತೀಯ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದು ಗಮನಕ್ಕೆ ಬರುತ್ತದೆ – ಸಂಪಾದಕರು)

2. ಈ ಸಮಯದಲ್ಲಿ, ಅಮಾನತುಲ್ಲಾ ಖಾನ್ ಮತ್ತು ಅವರ ಬೆಂಬಲಿಗರು ಪೊಲೀಸರ ಮೇಲೆ ದಾಳಿ ಮಾಡಿ ಹೊಡೆದಾಟ ಮಾಡಿದರು. ಪೊಲೀಸರ ಗುರುತು ಪತ್ರವನ್ನು ಕಿತ್ತುಕೊಳ್ಳಲಾಯಿತು. ಶಾಸಕ ಅಮಾನತುಲ್ಲಾ ಖಾನ್, “ಈ ಪ್ರದೇಶ ನಮ್ಮದು, ಇಲ್ಲಿಂದ ಹೊರಟು ಹೋಗಿರಿ, ಇಲ್ಲವಾದರೆ ಜೀವಂತವಾಗಿ ಹೊರಗೆ ಹೋಗುವುದು ಕಷ್ಟವಾಗುವುದು, ನಮ್ಮ ಧ್ವನಿ ಕೇಳಿ ಇಲ್ಲಿ ಎಷ್ಟು ಜನರು ಸೇರುತ್ತಾರೆಂದರೆ, ನೀವು ಎಲ್ಲಿ ಹೋದಿರಿ, ಎಂದು ಯಾರಿಗೂ ತಿಳಿಯುವುದಿಲ್ಲ. ನಾನು ನಿಮ್ಮ ಸಮವಸ್ತ್ರ ಕಿತ್ತೆಸೆಯುತ್ತೇನೆ. ನನ್ನ ಮೇಲೆ ಇನ್ನೊಂದು ಪ್ರಕರಣ ದಾಖಲಾದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ನಾನು ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇನೆ ಮತ್ತು ನಿಮಗೆ ಸಾಕ್ಷಿಗಳು ಸಿಗುವುದಿಲ್ಲ’ ಎಂದು ಪೊಲೀಸರಿಗೆ ಬೆದರಿಕೆ ಹಾಕಿದನು.

3. ಈ ವಾದ ಮತ್ತು ಹೊಡೆದಾಟ ನಡೆಯುತ್ತಿರುವಾಗ, ಬಂಧಿಸಲಾಗಿದ್ದ ಅಪರಾಧಿ ಚಾವೆಝ ಓಡಿಹೋದನು.

ಸಂಪಾದಕೀಯ ನಿಲುವು

  • `ಆಪ್’ ಪಕ್ಷ ಆಗಿರಲಿ ಅಥವಾ ಯಾವುದೇ ಪಕ್ಷದ ಮುಸಲ್ಮಾನ ಪ್ರತಿನಿಧಿಯಾಗಿರಲಿ, ಅವರು ಅಪರಾಧಿ ಮನೋಭಾವದ ಮತಾಂಧರನ್ನು ರಕ್ಷಿಸುತ್ತಾರೆ ಮತ್ತು ಅದಕ್ಕಾಗಿ ಅವರು ಸ್ವತಃ ಅಪರಾಧಿ  ಮನೋಭಾವವನ್ನು ತೋರಿಸುತ್ತಾರೆ !
  • ಪೊಲೀಸರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವವರಿಗೆ ಗಲ್ಲು ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು!