Supreme Court Statement : ಕಾನೂನನ್ನು ಉಲ್ಲಂಘಿಸುವವರೇ ಕಾನೂನುಗಳನ್ನು ಹೇಗೆ ರೂಪಿಸಬಹುದು? – ಸರ್ವೊಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಅಪರಾಧಿ ಜನಪ್ರತಿನಿಧಿಗಳ ಸಂದರ್ಭದಲ್ಲಿ ಹೇಳಿಕೆ

ನವದೆಹಲಿ – ಅಪರಾಧಿ ಹಿನ್ನಲೆಯ ನಾಯಕರನ್ನು ಕೇವಲ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವುದು ಸಮರ್ಥನೀಯವಲ್ಲ. ಒಂದು ವೇಳೆ ಸರಕಾರಿ ನೌಕರನಿಗೆ ಶಿಕ್ಷೆಯಾದರೆ, ಅವನನ್ನು ಜೀವನಪರ್ಯಂತ ಸೇವೆಯಿಂದ ವಜಾಗೊಳಿಸಲಾಗುತ್ತದೆ; ಹೀಗಿರುವಾಗ ಅಪರಾಧಿ ವ್ಯಕ್ತಿ ಸಂಸತ್ತಿಗೆ ಹೇಗೆ ಮರಳಲು ಸಾಧ್ಯ ? ಕಾನೂನನ್ನು ಉಲ್ಲಂಘಿಸುವವರು ಕಾನೂನುಗಳನ್ನು ಹೇಗೆ ಮಾಡಬಹುದು ? ಎಂದು ಪ್ರಶ್ನಿಸಿ, ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗವನ್ನು 3 ವಾರಗಳಲ್ಲಿ ಉತ್ತರಿಸುವಂತೆ ಕೇಳಿದೆ. “ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗವು ನಿಗದಿತ ಸಮಯದೊಳಗೆ ಉತ್ತರ ನೀಡದಿದ್ದರೆ, ಪ್ರಕರಣವನ್ನು ಮುಂದಕ್ಕೆ ಒಯ್ಯಲಾಗುವುದು”, ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 4 ಕ್ಕೆ ನಿಗದಿಪಡಿಸಿದೆ. ಭಾಜಪ ನಾಯಕ ವಕೀಲ ಶ್ರೀ. ಅಶ್ವಿನಿ ಉಪಾಧ್ಯಾಯ ಅವರ ಅರ್ಜಿಯ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಅಪರಾಧ ಹಿನ್ನೆಲೆಯುಳ್ಳ ಜನರು ರಾಜಕೀಯದಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಗಿದೆ.

1. ಅಮಿಕಸ ಕ್ಯೂರಿ ವಿಜಯ ಹನ್ಸಾರಿಯಾ ಅವರು ನ್ಯಾಯಾಲಯಕ್ಕೆ, ದೇಶದ ಇತರ ರಾಜ್ಯಗಳಲ್ಲಿ ವಿಚಾರಣೆಗಳನ್ನು ಮೇಲಿಂದ ಮೇಲೆ ಮುಂದೂಡಲಾಗುತ್ತದೆ ಮತ್ತು ಅದಕ್ಕೆ ಕಾರಣಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದರು.

2. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯವು, ಇದುವರೆಗೂ ಸಂಸದರು/ಶಾಸಕರಿಗಾಗಿ ಇಂತಹ ನ್ಯಾಯಾಲಯಗಳನ್ನು ಸ್ಥಾಪಿಸದ ಹಲವು ರಾಜ್ಯಗಳಿವೆ ಎಂದು ಹೇಳಿತು.

3. “ರಾಜಕೀಯ ಪಕ್ಷಗಳು ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಜನರನ್ನು ಪಕ್ಷದ ಪದಾಧಿಕಾರಿಗಳಾಗಿ ನೇಮಿಸುವಂತಿಲ್ಲ’, ಎಂಬ ನಿಯಮವನ್ನು ಚುನಾವಣಾ ಆಯೋಗ ಮಾಡಲು ಸಾಧ್ಯವಿಲ್ಲವೇ ?” ಎಂದು ಹನ್ಸಾರಿಯಾ ನ್ಯಾಯಾಲಯಕ್ಕೆ ಸಲಹೆ ನೀಡಿದರು.

4. ನ್ಯಾಯಾಲಯವು, ನಾವು ಜನಪ್ರತಿನಿಧಿ ಕಾನೂನು ಕಲಂ 8 ಮತ್ತು 9 ರ ಕೆಲವು ಭಾಗಗಳನ್ನು ಪರಿಶೀಲಿಸುವೆವು’, ಎಂದು ಹೇಳಿದೆ.